ಚಾಮರಾಜನಗರ: ಲ್ಯಾಬ್ ಟೆಕ್ನಿಷಿಯನ್ ಆಗಿರುವ ಶಿವಕುಮಾರ್ ಎಂಬಾತ ಕಳೆದ ಒಂದೂವರೆ ವರ್ಷದಿಂದ ನಾನೊಬ್ಬ ಡಾಕ್ಟರ್ ಎಂದು ಬರುವ ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.
ವೈದ್ಯರ ಸೋಗಿನಲ್ಲಿ ಲ್ಯಾಬ್ ಟೆಕ್ನಿಷಿಯನ್‌ನಿಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾಗಲೇ ಚಾಮರಾಜನಗರದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಮಹದೇಶ್ವರ ಡಯಾಗ್ನೋಸ್ಟಿಕ್‌ನ ಲ್ಯಾಬ್ ಟೆಕ್ನಿಷಿಯನ್ ಶಿವಕುಮಾರ್ ವಂಚನೆಕೋರ.
ಕಳೆದ ಒಂದೂವರೆ ವರ್ಷದಿಂದ ತಾನೇ ವೈದ್ಯನೆಂದು ಹೇಳಿಕೊಂಡಿದ್ದ ಲ್ಯಾಬ್ ಟೆಕ್ನಿಷಿಯನ್ ಶಿವಕುಮಾರ್, ಸಾಕಷ್ಟು ರೋಗಿಗಳಿಗೆ ಈಗಾಗಲೇ ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ. ನಕಲಿ ವೈದ್ಯ ಶಿವಕುಮಾರ್ ವಿರುದ್ಧ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬುಧವಾರ ಸಾಕ್ಷಿ ಸಮೇತ ಶಿವಕುಮಾರ್ ಸಿಕ್ಕಿ ಬಿದ್ದಿದ್ದು, ಕೆಆರ್.ಎಸ್ ಪಕ್ಷದ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಶಿವಕುಮಾರ್ ವಿರುದ್ಧ ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಡಿಎಚ್ಒ ಡಾ.ವಿಶ್ವೇಶ್ವರಯ್ಯ ಸ್ಥಳ ಮಹಜರು ಮಾಡಿದ್ದಾರೆ.
ಇದನ್ನೂ ಓದಿ | Bihar Hooch Tragedy | ನಕಲಿ ಮದ್ಯ ಸೇವಿಸಿ 7 ಮಂದಿ ಸಾವು, 10 ಜನರ ದೃಷ್ಟಿಯೇ ಹೋಯ್ತು