Site icon Vistara News

Suicide| ಎರಡೂವರೆ ವರ್ಷದ ಮಗುವಿನ ಜತೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಂದೆ: ಮನವ ಕಾಡುವ ಪುಟ್ಟ ಅಂಗಿ!

kolar suicide with child

ಕೋಲಾರ: ಮನೆಯಲ್ಲಿ ಗಂಡನ ಕಿರುಕುಳ, ಮನೆಯವರ ಹಿಂಸೆ ತಾಳಲಾರದೆ ತಾಯಂದಿರು ಮಕ್ಕಳ ಜತೆ ಆತ್ಮಹತ್ಯೆ ಮಾಡಿಕೊಂಡಿರುವ ಹಲವು ವಿದ್ಯಮಾನಗಳು ನಡೆದಿವೆ. ಆದರೆ, ಇಲ್ಲಿ ವ್ಯಕ್ತಿಯೊಬ್ಬ ತನ್ನ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರಿನ ಬಾಗಲೂರು ನಿವಾಸಿ ರಾಹುಲ್ ಎಂಬವರೇ ತನ್ನ ಎರಡುವರೆ ವರ್ಷದ ಮಗು ಜಿಯಾ ಜತೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು. ಅವರು ಕೋಲಾರ ತಾಲೂಕಿನ ಕೆಂದಟ್ಟಿ ಎಂಬಲ್ಲಿ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಕೆರೆಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದ್ದು, ರಾಹುಲ್‌ ಮೃತದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ.

ಕೆರೆಯ ದಡದಲ್ಲಿ ಅನಾಥವಾಗಿ ನಿಂತ ಕಾರು

ಅನಾಥವಾಗಿ ನಿಂತ ಕಾರು ಮತ್ತು ಪುಟ್ಟ ಅಂಗಿ
ರಾಹುಲ್‌ ಬಾಗಲೂರಿನಿಂದ ಕೋಲಾರದ ಕೆಂದಟ್ಟಿ ಕೆರೆಯ ಬಳಿಗೆ ತನ್ನ ನೀಲಿ ಕಾರಿನಲ್ಲಿ ಬಂದಿದ್ದು, ಅದನ್ನು ದಡದಲ್ಲಿಟ್ಟು ಕೆರೆಗೆ ಜಿಗಿದಂತೆ ಕಾಣುತ್ತಿದೆ. ಕಾರು ದಡದಲ್ಲಿ ಅನಾಥವಾಗಿ ನಿಂತಿದ್ದು, ಮಗುವಿನ ಶವ ಕೆರೆಯಲ್ಲಿ ತೇಲುತ್ತಿರುವುದು ಕಂಡುಬಂದಿದೆ.
ಈ ನಡುವೆ ಕಾರಿನ ಹಿಂಬದಿಯಲ್ಲಿ ತೂಗು ಹಾಕಲಾದ ಪುಟ್ಟ ಅಂಗಿ ಮತ್ತು ಅದರ ಬರಹ ಎಲ್ಲರನ್ನೂ ಕಾಡುತ್ತಿದೆ. ಅದರಲ್ಲಿ ಬೇಬಿ ಆನ್‌ ಬೋರ್ಡ್‌ ಎಂದು ಬರೆಯಲಾಗಿದೆ.

ಯಾವ ಕಾರಣಕ್ಕಾಗಿ ರಾಹುಲ್‌ ಆತ್ಮಹತ್ಯೆಯಂಥ ಅತಿರೇಕದ ಕ್ರಮಕ್ಕೆ ಮುಂದಾದರು. ಮಗುವನ್ನೂ ಬಲಿ ಪಡೆದುಕೊಂಡರು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಕೋಲಾರ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದು, ಕುಟುಂಬಿಕರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Suicide | Sorry ಅಮ್ಮ, ಅಣ್ಣ ಎಂದು ಸ್ಟೇಟಸ್‌ ಹಾಕಿ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡ ಯುವಕ

Exit mobile version