Site icon Vistara News

Suicide| ಧನದಾಹಿ ಹೆಂಡತಿಯ ಕಾಟ ತಾಳಲಾರದೆ ಗಂಡ ಆತ್ಮಹತ್ಯೆ: ಎಷ್ಟು ಹಣ ಕೊಟ್ರೂ ಸಾಲಲ್ಲ ಅಂತಾಳೆ ಅಂತ ಡೆತ್‌ ನೋಟ್‌

suicide annayya

ಬೆಂಗಳೂರು: ಗಂಡನ ಹಿಂಸೆ ತಾಳಲಾರದೆ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಳು ಎನ್ನುವ ಸುದ್ದಿಯನ್ನು ಆಗಾಗ ಕೇಳುತ್ತೇವೆ. ಆದರೆ, ಇದು ಉಲ್ಟಾ ಕೇಸ್‌. ಹೆಂಡತಿಯ ಕಾಟ ತಾಳಲಾರದೆ ಇಲ್ಲೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.

ಬೆಂಗಳೂರಿನ ಶ್ರೀನಗರ ಬಳಿಯ ಅವಳಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಮಂಡ್ಯದ ನಾಗಮಂಗಲ ಮೂಲದ ಅಣ್ಣಯ್ಯ ಎಂದು ಗುರುತಿಸಲಾಗಿದೆ. ಬಾರ್ ಒಂದರಲ್ಲಿ ಕ್ಯಾಶಿಯರ್‌ ಆಗಿರುವ ಅಣ್ಣಯ್ಯ ಅವರು ಹೆಂಡತಿ ಕಾಟದಿಂದ ಬೇಸತ್ತು ಪ್ರಾಣ ಕಳೆದುಕೊಳ್ಳುತ್ತಿರುವುದಾಗಿ ಡೆತ್‌ ನೋಟ್‌ನಲ್ಲಿ ಬರೆದಿಟ್ಟಿದ್ದಾನೆ.

ಅಣ್ಣಯ್ಯ ಅವರಿಗೆ ಐದು ವರ್ಷದ ಹಿಂದೆ ಉಮಾ ಎಂಬಾಕೆಯ ಜತೆ ಮದುವೆಯಾಗಿತ್ತು. ಮದುವೆ ಬಳಿಕ ಹಣದ ವಿಚಾರಕ್ಕೆ ಸಂಬಂಧಿಸಿ ಗಂಡ ಹೆಂಡತಿ ಮಧ್ಯೆ ಯಾವಾಗಲೂ ಜಗಳ ಆಗುತ್ತಿತ್ತು. ʻʻಎಷ್ಟು ದುಡಿದರೂ ಹೆಂಡತಿ ದುಡ್ಡು ದುಡ್ಡು ಎನ್ನುತ್ತಾಳೆ. ನಾನು ಎಷ್ಟು ದುಡಿದರೂ ಸಾಕಾಗುವುದಿಲ್ಲ. ಜೀವನದಲ್ಲಿ ನೆಮ್ಮದಿಯೇ ಇಲ್ಲದಂತೆ ಅಗಿದೆ. ನನ್ನ ಸಾವಿಗೆ ನಾನೇ ಕಾರಣʼʼ ಎಂದು ಡೆತ್ ನೋಟ್‌ನಲ್ಲಿ ಅಣ್ಣಯ್ಯ ಬರೆದಿಟ್ಟಿದ್ದಾರೆ.

ಇದನ್ನೂ ಓದಿ | Suicide| ಎರಡೂವರೆ ವರ್ಷದ ಮಗುವಿನ ಜತೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಂದೆ: ಮನವ ಕಾಡುವ ಪುಟ್ಟ ಅಂಗಿ!

Exit mobile version