Site icon Vistara News

Mandya Baby Hill | ಬೇಬಿ ಬೆಟ್ಟ ನಮ್ಮದು, ನಮ್ಮ ಪರ್ಮಿಷನ್‌ ಕೇಳಬೇಕಿತ್ತು ಎಂದ ಪ್ರಮೋದಾದೇವಿ

pramoda devi wodeyar

ಮೈಸೂರು: ಬೇಬಿ ಬೆಟ್ಟ ನಮ್ಮದೇ. ಯಾಕಿಷ್ಟು ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅಳಲು ತೋಡಿಕೊಂಡಿದ್ದಾರೆ. ಬೇಬಿ ಬೆಟ್ಟದಲ್ಲಿ (Mandya Baby Hill) ಗಣಿಗಾರಿಕೆ ಬೇಕಾ? ಬೇಡವಾ ಎಂಬ ಹಗ್ಗಜಗ್ಗಾಟದ ಮಧ್ಯೆ ಮೈಸೂರಿನಲ್ಲಿ ಪ್ರಮೋದಾ ದೇವಿ ಸುದ್ದಿಗೋಷ್ಠಿ ನಡೆಸಿದರು.

ರಾಜ್ಯ ವಿಲೀನ ಸಂದರ್ಭದಲ್ಲಿ ಭಾರತ ಸರ್ಕಾರ ಮತ್ತು ರಾಜವಂಶದ ನಡುವೆ ಒಪ್ಪಂದ ಏರ್ಪಟ್ಟಿತ್ತು. ರಾಜ ಮನೆತನ ಖಾಸಗಿ ಆಸ್ತಿಗಳನ್ನು ಘೋಷಿಸಿಕೊಂಡು ಇನ್ನುಳಿದ ಎಲ್ಲ ಆಸ್ತಿಗಳನ್ನು ದೇಶದೊಂದಿಗೆ ವಿಲೀನ ಮಾಡಿದರು. ಈ ಸಂಬಂಧ 1950ರಲ್ಲಿ ಕೇಂದ್ರ ಸರ್ಕಾರ ಮತ್ತು ರಾಜವಂಶಸ್ಥ ನಡುವೆ ಒಪ್ಪಂದ ಏರ್ಪಟ್ಟಿದೆ. ಇದರ ಮುಂದುವರಿದ ಭಾಗವಾಗಿ 1951ರಲ್ಲಿ ಖಾಸಗಿ ಆಸ್ತಿಗಳ ಪಟ್ಟಿಯನ್ನು ಸರ್ಕಾರಿ ಆದೇಶದ ಮೂಲಕ ಖಚಿತಪಡಿಸಲಾಗಿದೆ. ಈ ಸಂಬಂಧ ಸರ್ಕಾರದಲ್ಲೂ ದಾಖಲೆಗಳಿವೆ ಎಂದಿರುವ ಅವರು, ಯಾವುದು ನಮ್ಮ ಖಾಸಗಿ ಆಸ್ತಿ, ಯಾವುದು ಸರ್ಕಾರಿ ಆಸ್ತಿ ಎಂಬುದು ಅಧಿಕಾರ ನಡೆಸುವ ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.

ಬೇಬಿ ಬೆಟ್ಟ (Mandya Baby Hill) ಸುತ್ತಲಿನ 1,623 ಎಕರೆ ನಮ್ಮ ಖಾಸಗಿ ಆಸ್ತಿಯಾಗಿದ್ದು, ಅಧಿಕಾರಿಗಳು ಅದನ್ನು ಬಿ ಖರಾಬು ಎಂದು ಘೋಷಿಸಿದರು. ಅದರ ಪರಿಣಾಮವಾಗಿ ಗಣಿಗಾರಿಕೆ ಚಟುವಟಿಕೆ ಪ್ರಾರಂಭವಾಯಿತು. ಈಗ ಟ್ರಯಲ್ ಬ್ಲಾಸ್ಟ್ ಮಾಡಲು ಹೊರಟಿದ್ದಾರೆ. ನಮ್ಮ ಜಾಗದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡುವಾಗ ಕನಿಷ್ಠ ನಮ್ಮ ಅನುಮತಿ ಪಡೆಯಬೇಕಿತ್ತು. ಎಲ್ಲ ಗೊತ್ತಿದ್ದೂ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ | KRS Dam | ಬೇಬಿ ಬೆಟ್ಟ ರಾಜ ಮನೆತನದ ಜಾಗ; ರಾಜವಂಶಸ್ಥ ಯದುವೀರ್ ಒಡೆಯರ್

Exit mobile version