Site icon Vistara News

Actor Darshan : ನಟ ದರ್ಶನ್‌ ವಿರುದ್ಧ ಸಿಡಿದೆದ್ದ ಮಂಡ್ಯ ರೈತರು; ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹ

Actor Darshan

ಮಂಡ್ಯ/ರಾಮನಗರ : ರೇಣುಕಾಸ್ವಾಮಿ ಎಂಬಾತನ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ (Actor Darshan) ಗೆಳತಿ ಪವಿತ್ರಗೌಡ ಸೇರಿ 13 ಮಂದಿ ಹಲವರು ಲಾಕ್‌ ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ ನಡೆಸಲಾಯಿತು. ನಟ ದರ್ಶನ್ ವಿರುದ್ಧ ಮಂಡ್ಯ ಅನ್ನದಾತರು ಸಿಡಿದೆದ್ದಿದ್ದರು.

ಮಂಡ್ಯದ ಸಂಜಯ್ ವೃತ್ತದಿಂದ ವಿಶ್ವೇಶ್ವರಯ್ಯ ಪ್ರತಿಮೆವರೆಗೆ ಕರ್ನಾಟಕ ರಾಜ್ಯ ರೈತ ಸಂಘ ರ‍್ಯಾಲಿ ನಡೆಸಿ ಆಕ್ರೋಶ ಹೊರಹಾಕಿತು. ದರ್ಶನ್ ಸೇರಿ ಎಲ್ಲ ಆರೋಪಿಗಳಿಗೂ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿದರು.

ಡಾ.ರಾಜಕುಮಾರ್ ಆದರ್ಶ ಪಾಲಿಸಲಿ

ನಟ ದರ್ಶನ್ ಆ್ಯಂಡ್ ಗ್ಯಾಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದಲ್ಲಿ ಡಾ.ರಾಜಕುಮಾರ್ ಅಭಿಮಾನಿಗಳು ಆಕ್ರೋಶ ಹೊರಹಾಕಿದರು. ದರ್ಶನ್ ಹಾಗೂ ಇತರೆ ಕನ್ನಡ ನಟರು ಡಾ.ರಾಜಕುಮಾರ್ ಆದರ್ಶ ಪಾಲಿಸಲಿ. ಕೇವಲ ಹಣಕ್ಕಾಗಿ ಕಲಾವಿದರಾಗುವುದು ಬೇಡ ಎಂದರು. ಈಗೀನ‌ ನಟರು ಪೇಯ್ಡ್ ಆಕ್ಟರ್ಸ್ ಆಗಿದ್ದಾರೆ. ಇವರಿಗೆ ಯಾವುದೇ ಮೌಲ್ಯಗಳಿಲ್ಲ.

ಪೊಲೀಸ್ ಇಲಾಖೆ ಸೂಕ್ತ ಕ್ರಮವಹಿಸಬೇಕು. ತಪ್ಪಿತಸ್ಥರಿಗೆ ಕಾನೂನು ಕ್ರಮವಾಗಬೇಕು ಎಂದು ಚನ್ನಪಟ್ಟಣದಲ್ಲಿ ಡಾ.ರಾಜಕುಮಾರ್ ಅಭಿಮಾನಿಗಳು ಆಗ್ರಹಿಸಿದರು. ನಗರದ ಅಂಚೆಕಚೇರಿ ರಸ್ತೆಯಲ್ಲಿ ಡಾ.ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಇದನ್ನೂ ಓದಿ: Actor Darshan: ಪವಿತ್ರಾ ಗೌಡ ಜೈಲು ಸೇರುತ್ತಿದ್ದಂತೆ ಮಾಜಿ ಪತಿ ಪ್ರತ್ಯಕ್ಷ; ಅವರು ಹೇಳಿದ್ದೇನು?

ಪದೇ ಪದೆ ಕ್ರಿಮಿನಲ್ ಚಟುವಟಿಕೆ; ನಟ ದರ್ಶನ್​ ರೌಡಿ ಪಟ್ಟಿಗೆ ಸೇರ್ಪಡೆ?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬುವರನ್ನು ಹೊಡೆದು ಕೊಂದ ಆರೋಪದ ಮೇಲೆ ಪೊಲೀಸ್​ ವಶದಲ್ಲಿರುವ ನಟ ದರ್ಶನ್ ವಿರುದ್ಧ (Actor Darshan Arrested) ರೌಡಿ ಪಟ್ಟಿ ತೆರೆಯಲು ಬೆಂಗಳೂರು ನಗರ ಪೊಲೀಸರು ಸಿದ್ಧರಾಗಿದ್ದಾರೆ ಎಂಬುದಾಗಿ ವರದಿಯಾಗಿದೆ. ಪದೇ ಪದೆ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಅವರ ಮೇಲೆ ಕಾನೂನಿನ ಹಿಡಿತ ಸ್ಥಾಪಿಸಲು ರೌಡಿ ಪಟ್ಟಿ ಅನಿವಾರ್ಯ ಎಂಬ ಅಭಿಪ್ರಾಯ ಹಿರಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾದ ಆರೋಪಿ ಮೇಲೆ ರೌಡಿ ಪಟ್ಟಿಯನ್ನು ತೆರೆಯಲಾಗುತ್ತದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲೂ ದರ್ಶನ್​ ಪ್ರಮುಖ ಆರೋಪಿ. ಹೀಗಾಗಿ ಅವರ ಮೇಲೆಯೂ ರೌಡಿಶೀಟರ್​ ಓಪನ್ ಮಾಡಬೇಕು ಎಂಬ ಅಭಿಪ್ರಾಯಗಳು ಕೇಳಿ ಬಂದಿದೆ.

ದರ್ಶನ್​ ಈ ಹಿಂದೆಯೂ ಹಲವಾರು ಬಾರಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಬೆದರಿಕೆ, ನಿಂದನೆ ಸೇರಿದಂತೆ ನಾನಾ ರೀತಿಯಲ್ಲಿ ಅವರು ಕಾನೂನು ಕ್ರಮವನ್ನು ಎದುರಿಸಿದ್ದರು. ಹೀಗಾಗಿ ಅವರನ್ನು ರೌಡಿ ಪಟ್ಟಿಯೊಳಗೆ ಸೇರಿಸಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಪೊಲೀಸ್​ ಇಲಾಖೆಯ ಆಲೋಚನೆಯಾಗಿದೆ.

ಇದನ್ನೂ ಓದಿ: Actor Darshan Arrested: ರೇಣುಕಾಸ್ವಾಮಿಗೆ ದರ್ಶನ್‌ ಗ್ಯಾಂಗ್‌ನಿಂದ ಕ್ರೂರ ಹಿಂಸೆ; ಪೋಸ್ಟ್‌ಮಾರ್ಟಂ ವರದಿಯಲ್ಲಿದೆ ಭಯಾನಕ ಡಿಟೇಲ್ಸ್‌

ರೇಣುಕಾ ಸ್ವಾಮಿ ಅವರನ್ನು ಕೊಲೆ ಮಾಡುವ ಉದ್ದೇಶವಿಲ್ಲದೆ ಅಪಹರಣ ಮಾಡಿದ್ದರು. ಗಂಭೀರ ರೂಪದಲ್ಲಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕೊಲೆ ಮಾಡಿ ಶವ ಮುಚ್ಚಿಡುವ ಹಾಗೂ ಸಾಕ್ಷಿನಾಶ ಪಡಿಸುವ ಯತ್ನ ಮಾಡಿದ್ದಾರೆ. ಇವೆಲ್ಲವೂ ಅಪಾಯಕಾರಿ ಕ್ರಿಮಿನಲ್ ಚಟುವಟಿಕೆಗಳಾಗಿವೆ.

ರೌಡಿಶೀಟ್ ಓಪನ್ ಆದ್ರೆ ಏನಾಗುತ್ತೆ.?

ಇಷ್ಟು ವರ್ಷಗಳ ಕಾಲ ಸೆಲೆಬ್ರಿಟಿಯಾಗಿ ಕಾಣಿಸಿಕೊಂಡಿದ್ದ ಹಾಗೂ ಅಪಾರ ಗೌರವ ಗಳಿಸಿಕೊಂಡಿದ್ದ ನಟ ದರ್ಶನ್ ರೌಡಿಶೀಟರ್ ಅನ್ನೋ ಕಳಂಕ ಹೊತ್ತುಕೊಳ್ಳಬೇಕಾಗುತ್ತದೆ. ಶಾಂತಿಸುವ್ಯವಸ್ಥೆಗೆ ಭಂಗ ತರುವ ಆರೋಪದ ಮೇಲೆ ಆಗಾಗ ಸಿಆರ್ಪಿಸಿ 110 ಅಡಿಯಲ್ಲಿ ಕೇಸ್ ದಾಖಲಾಗುತ್ತದೆ. ಪದೇ ಪದೆ ಪೊಲೀಸ್ ಠಾಣೆಯ ಮೆಟ್ಟಿಲನ್ನು ಏರಬೇಕಾಗುತ್ತದೆ.

ಚುನಾವಣೆ ಹಾಗೂ ಇನ್ಯಾವುದಾದರೂ ತುರ್ತು ಸಂಧರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅವರ ಮನೆಯ ಮೇಲೆ ಪೊಲೀಸರು ದಾಳಿ ಮಾಡುತ್ತಾರೆ. ಯಾವುದೇ ಅನುಮತಿ ಇಲ್ಲದೆ ಪರಿಶೀಲನೆ ನಡೆಸುತ್ತಾರೆ. ರೌಡಿಚಟುವಟಿಕೆ ಸಕ್ರಿಯರಾಗಿದ್ದಾರೆ ಎಂಬ ಕಾರಣದಲ್ಲಿ ಅವರ ಮೇಲೆ ನಿಗಾ ಇಡುತ್ತಾರೆ. ಖಾಸಗಿತನ ನಷ್ಟವಾಗುತ್ತದೆ.

ತುರ್ತು ಸಂದರ್ಭದಲ್ಲಿ ತಹಸೀಲ್ದಾರರ ಮುಂದೆ ಹಾಜರಾಗಿ ಬಾಂಡ್ ಸಲ್ಲಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಪೊ ಲೀಸರು ನಡೆಸುವ ರೌಡಿ ಪೆರೇಡ್ ನಲ್ಲಿ ಇತರೆ ರೌಡಿಗಳಂತೆ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಲಿದೆ. ಅವರ ಟೀಕೆಗಳನ್ನು ಕೇಳಬೇಕಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version