Site icon Vistara News

Mandya News : ನಾಲ್ವರು ಬಾಲಕರ ಪ್ರೀತಿ-ಪ್ರೇಮದ ಅಪಪ್ರಚಾರ; ಗಾಳಿ ಸುದ್ದಿಗೆ ಬಾಲಕಿ ಆತ್ಮಹತ್ಯೆ

Girl commits suicide after being fed up with rumours of love

ಮಂಡ್ಯ: ನಾಲ್ವರು ಯುವಕರಿಂದ ಪ್ರೀತಿ, ಪ್ರೇಮದ ಅಪಪ್ರಚಾರ ಹಾಗೂ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿನಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾಳೆ. ಮಂಡ್ಯದ (Mandya News) ಹನಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಇಂಪನಾ (14) ಆತ್ಮಹತ್ಯೆ ಮಾಡಿಕೊಂಡವಳು.

ಗಗನ್, ಸಂಜಯ್ ,ಮಹೇಂದ್ರ ಹಾಗೂ ಲೋಹಿತ್ ಎಂಬ ಯುವಕರಿಂದ ಕಿರುಕುಳದ ಆರೋಪ ಕೇಳಿ ಬಂದಿದೆ. ಹನಕೆರೆ ಗ್ರಾಮದ ಗಗನ್ ಮತ್ತು ಸ್ನೇಹಿತರು ಸೇರಿ ಇಂಪನಾ- ಮಹೇಂದ್ರ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಾಳೆ ಎಂದು ಗಾಳಿ ಸುದ್ದಿ ಹಬ್ಬಿಸಿದ್ದರು.

ಅಲ್ಲದೆ ಆಕೆ ಮಾತಾಡುವುದನ್ನು ರೆಕಾರ್ಡ್ ಮಾಡಿಕೊಂಡು ವೈರಲ್ ಮಾಡಿದ್ದರು. ಇದರಿಂದ ಬೇಸತ್ತ ಇಂಪನಾ ಮನೆಯಲ್ಲಿ ಯಾರೂ ಇಲ್ಲದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದೇ ಗ್ರಾಮದ ಖಾಸಗಿ ಶಾಲೆಯಲ್ಲಿ ಇಂಪನಾ 9ನೇ ತರಗತಿ ಓದುತ್ತಿದ್ದಳು.

ಒಬ್ಬಳೇ ಮಗಳನ್ನು ಕಳೆದುಕೊಂಡು ಇಂಪನಾ ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ಗಗನ್ ಸೇರಿ ನಾಲ್ವರು ತನ್ನ ಮಗಳಿಗೆ ಕಿರುಕುಳ ನೀಡಿ ಆಕೆಯ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ನಾಲ್ವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Actor Darshan : ಬಳ್ಳಾರಿಯಿಂದ ನಟ ದರ್ಶನ್‌ ಮತ್ತೆ ಬೆಂಗಳೂರಿಗೆ ಶಿಫ್ಟ್‌! ಪತ್ನಿ ಬಂದು ಹೋದ್ಮೆಲೆ ಫುಲ್ ಆಕ್ಟೀವ್

ಶಿವಮೊಗ್ಗದಲ್ಲಿ ರೈತ ಆತ್ಮಹತ್ಯೆ

ಸಾಲಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದ ಹೊಸನಗರ ತಾಲೂಕಿನ ನರ್ತಿಗೆ ಗ್ರಾಮದಲ್ಲಿ ಘಟನೆ ನಡೆದಿದೆ. ಎನ್.ಟಿ. ತಿಮ್ಮಪ್ಪ (52) ಆತ್ಮಹತ್ಯೆಗೆ ಶರಣಾದ ರೈತ. ತನ್ನ ತೋಟದ ಕೆಲಸಕ್ಕೆ ತೆರಳಿದ್ದ ವೇಳೆ ಕೀಟನಾಶಕ ಸೇವಿಸಿ‌ ಆತ್ಮಹತ್ಯೆಗೆ‌ ಶರಣಾಗಿದ್ದಾರೆ. ಸುಮಾರು 6 ಲಕ್ಷ 50 ಸಾವಿರ ಸಾಲ ಪಡೆದಿದ್ದರು. ಬ್ಯಾಂಕ್ ಸೇರಿದಂತೆ ವಿವಿಧ ಸಂಘ ಸಂಸ್ಥೆ ಸಾಲ ಮಾಡಿದ್ದರು. ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version