ಮೈಸೂರು: ಆನ್‌ಲೈನ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹಣ ವಂಚಿಸಲು ಸೈಬರ್ ಖದೀಮರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಈ ನಡುವೆ ಎಂಎಲ್‌ಸಿ ವಿಶ್ವನಾಥ್ ಪುತ್ರನಿಗೆ 1.99 ಲಕ್ಷ ರೂ. ವಂಚನೆ ಮಾಡಿರುವ ಘಟನೆ (Fraud Case) ನಡೆದಿದೆ. ನಕಲಿ ಬ್ಯಾಂಕ್ ಕಸ್ಟಮರ್ ಕೇರ್ಗೆ ಕಾಲ್ ಮಾಡಿದ್ದರಿಂದ ಅಡಗೂರು ಎಚ್.ವಿಶ್ವನಾಥ್ ಪುತ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮಿತ್ ದೇವರಹಟ್ಟಿ ಅವರ ಬ್ಯಾಂಕ್ ಖಾತೆಗೆ ಸೈಬರ್ ಕಳ್ಳರು ಕನ್ನ ಹಾಕಿ ದೊಡ್ಡ ಮೊತ್ತದ ಹಣವನ್ನು ಎಗರಿಸಿದ್ದಾರೆ.
ಬೆಂಗಳೂರಿನ ಎಟಿಎಂನಲ್ಲಿ ಹಣ ಡ್ರಾ ಮಾಡಲು ಅಮಿತ್ ದೇವರಹಟ್ಟಿ ಮುಂದಾಗಿದ್ದಾರೆ. ಹಣ ಬಾರದೆ ಇದ್ದರೂ ಬ್ಯಾಂಕ್ನಿಂದ ಡೆಬಿಟೆಡ್ ಎಂದು ಮೆಸೇಜ್ ಬಂದಿದೆ. ಇದನ್ನು ಕಂಡು ಗೂಗಲ್ನಲ್ಲಿ ಕಸ್ಟಮರ್ ಕೇರ್ ನಂಬರ್ ಹುಡುಕಿ ಕರೆ ಮಾಡಿದ್ದಾರೆ. ಕಸ್ಟಮರ್ ಕೇರ್ ನಂಬರ್ ನಕಲಿ ಎಂದು ಗೊತ್ತಿಲ್ಲದೆ ಕಾಲ್ ಮಾಡಿದ್ದರಿಂದ ಕೆಲವೇ ನಿಮಿಷಗಳಲ್ಲಿ ಬ್ಯಾಂಕ್ ಖಾತೆ ಹ್ಯಾಕ್ ಆಗಿದೆ. ಖಾತೆಯಿಂದ 1.99 ಲಕ್ಷ ರೂ.ಗಳನ್ನು ಸೈಬರ್ ಕಳ್ಳರು ಲಪಟಾಯಿಸಿದ್ದಾರೆ. ಈ ಸಂಬಂಧ ಮೈಸೂರಿನ ಸೆನ್ (CEN) ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ | Rowdy Murder: ರೌಡಿ ಮಹೇಶ್ ಹತ್ಯೆ; ಸಿದ್ದಾಪುರ ಕಿಂಗ್ ಪಟ್ಟಕ್ಕಾಗಿ ನಡೆಯಿತು ಕೊಲೆ! ಮತ್ತೆ ಶುರುವಾಯ್ತಾ ಗ್ಯಾಂಗ್‌ವಾರ್ ಯುಗ?
ಆಸ್ತಿಗಾಗಿ ಹೆಂಡ್ತಿ ಜತೆಗೂಡಿ ಅಮ್ಮನನ್ನೇ ಕೊಂದು ಬಿಟ್ಟ ನೀಚ!
ದೇವನಹಳ್ಳಿ : ಬೆಂಗಳೂರು ಗ್ರಾಮಾಂತರದ ಯರ್ತಿಗಾನಾಹಳ್ಳಿ ಆಸ್ತಿ ವಿಚಾರಕ್ಕೆ (Property Issue) ಗಲಾಟೆ ನಡೆದಿದ್ದು, ದುಷ್ಟ ಮಗನೊಬ್ಬ ಪತ್ನಿಯೊಂದಿಗೆ ಸೇರಿ ದೊಣ್ಣೆಯಿಂದ ತಾಯಿಯನ್ನೇ ಕೊಂದು (Murder case) ಹಾಕಿದ್ದಾನೆ. ಚಿನ್ನಮ್ಮ (60) ಕೊಲೆಯಾದ ದುರ್ದೈವಿ. ರಾಘವೇಂದ್ರ (40), ಸೊಸೆ ಸುಧಾ (38) ಕೊಲೆ ಆರೋಪಿಗಳು
ಇವರೆಲ್ಲರೂ ದೇವನಹಳ್ಳಿ ತಾಲೂಕಿನ ಯರ್ತಿಗಾನಹಳ್ಳಿ ನಿವಾಸಿ ಆಗಿದ್ದು, ಕಳೆದ ಅನೇಕ ದಿನದಿಂದ ಜಮೀನು ವಿಚಾರಕ್ಕೆ ಜಗಳ ನಡೆಯುತ್ತಿತ್ತು. ತಾಯಿ ಚಿನ್ನಮ್ಮಳಿಗೆ ತಿಳಿಯದಂತೆ ರಾಘವೇಂದ್ರ ಆಸ್ತಿಯನ್ನು ಬರೆಸಿಕೊಂಡಿದ್ದ ಎನ್ನಲಾಗಿದೆ. ಈ ಸಂಬಂಧ ಕೋರ್ಟ್‌ನಲ್ಲಿ ವಿಚಾರಣೆಯೂ ನಡೆಯುತ್ತಿದೆ.
ಜಮೀನಿನಲ್ಲಿ ಸೌದೆ ಮತ್ತು ಪೊರಕೆ ಕಡ್ಡಿ ಕಟಾವಿಗೆ ಬಂದಿದ್ದ ತಾಯಿ ಚಿನ್ನಮ್ಮಳ ಬಳಿ ಬಂದ ರಾಘವೇಂದ್ರ ಕ್ಯಾತೆ ತೆಗೆದಿದ್ದಾನೆ. ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಮಗ ಮತ್ತು ಸೊಸೆ ಇಬ್ಬರು ಸೇರಿ ದೊಣ್ಣೆಯಿಂದ ಚಿನ್ನಮ್ಮಳಿಗೆ ಹಲ್ಲೆ ನಡೆಸಿದ್ದಾರೆ. ತಲೆಗೆ ತೀವ್ರ ಗಂಭೀರ ಗಾಯಗೊಂಡ ಚಿನ್ನಮ್ಮಳನ್ನು ನಂತರ ತಾವೇ ಆಸ್ಪತ್ರೆಗೆ ಸೇರಿಸುವ ನಾಟಕವನ್ನು ಆಡಿದ್ದಾರೆ. ಆದರೆ ಗಂಭೀರ ಗಾಯಗೊಂಡ ಚಿನ್ನಮ್ಮ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ | Murder Case : ಅವಳು ಬೆಂಗಳೂರು, ಇವನು ದಾವಣಗೆರೆ; ಕುಣಿಗಲ್ ಲಾಡ್ಜ್‌ನಲ್ಲಿ ನಡೀತು ಮಹಿಳೆ ಮರ್ಡರ್!
ಸ್ಥಳಕ್ಕೆ ಬೆರಳಚ್ಷು ತಂಡ, ದೇವನಹಳ್ಳಿ ಮತ್ತು ಏರ್‌ಪೋರ್ಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಆರೋಪಿಗಳಾದ ರಾಘವೇಂದ್ರ ಮತ್ತು ಸುಧಾಳನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ