ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆ (Modi In Karnataka) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ರೋಡ್ ಶೋ ನಡೆಸಿದ್ದು, ಜನರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಮೋದಿ ಅವರು ರೋಡ್ ಶೋ ಕೈಗೊಂಡ ನಾಲ್ಕು ಕಿಲೋ ಮೀಟರ್ ಉದ್ದಕ್ಕೂ ಸಾವಿರಾರು ಜನ ನಿಂತು ಪ್ರಧಾನಿಯವರನ್ನು ಕಣ್ತುಂಬಿಕೊಳ್ಳುವ ಜತೆಗೆ, ಅವರೆಡೆಗೆ ಹೂಮಳೆ ಸುರಿಸಿದರು. ಇದೇ ವೇಳೆ ಮೋದಿ ಅವರ ವಾಹನದತ್ತ ಮೊಬೈಲ್ ಒಂದು ತೂರಿಬಂದಿದ್ದು, ಭದ್ರತಾ ವೈಫಲ್ಯದ ಮಾತುಗಳು ಕೇಳಿಬಂದಿವೆ.
ಇಲ್ಲಿದೆ ವಿಡಿಯೊ
ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ವೇಳೆ ಜನರತ್ತ ಕೈಬೀಸುತ್ತಿದ್ದರು. ಹಾಗೆಯೇ, ವಾಹನವು ನಿಧಾನವಾಗಿ ಚಲಿಸುತ್ತಿತ್ತು. ಜನ ಮೋದಿ ಅವರ ಮೇಲೆ ರಾಶಿ ರಾಶಿ ಹೂ ಎಸೆಯುತ್ತಿದ್ದರು. ಇದೇ ವೇಳೆ ಮೋದಿ ಅವರತ್ತ ಗುಂಪಿನಲ್ಲಿದ್ದವರು ಮೊಬೈಲ್ ಎಸೆದಿದ್ದಾರೆ. ಮೊಬೈಲ್ ಮೋದಿ ಸೇರಿ ಯಾರಿಗೂ ತಾಗದೆ, ವಾಹನಕ್ಕೆ ಬಡಿದು ಕೆಳಗೆ ಬಿದ್ದಿದೆ. ಮೊಬೈಲ್ ಬೀಳುವುದನ್ನು ಮೋದಿ ಅವರು ಕೂಡ ಗಮನಿಸಿದ್ದಾರೆ.
ಇದನ್ನೂ ಓದಿ: Modi In Karnataka: ಮೈಸೂರಿನಲ್ಲಿ ಮೋದಿ ರೋಡ್ ಶೋ ಮ್ಯಾಜಿಕ್; ಜನಸ್ತೋಮದಿಂದ ಪುಷ್ಪವೃಷ್ಟಿ
ಮೋದಿ ರೋಡ್ ಶೋ ವೇಳೆ ಮೊಬೈಲ್ ಎಸೆದಿರುವುದು ಭದ್ರತಾ ವೈಫಲ್ಯ ಎಂದೇ ಹೇಳಲಾಗುತ್ತಿದೆ. ಆದಾಗ್ಯೂ, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೋದಿ ರೋಡ್ ಶೋ ಸಾಗುವಾಗ ಹೂವುಗಳನ್ನೇ ಎಸೆಯುವ ಭರದಲ್ಲಿ, ಮೊಬೈಲ್ ಎಸೆದಿರುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ.