ಕರ್ನಾಟಕ
Modi In Karnataka: ಮೈಸೂರಿನಲ್ಲಿ ಮೋದಿ ರೋಡ್ ಶೋ ಮ್ಯಾಜಿಕ್; ಜನಸ್ತೋಮದಿಂದ ಪುಷ್ಪವೃಷ್ಟಿ
Modi In Karnataka: ಬೆಂಗಳೂರಿನಲ್ಲಿ ಶನಿವಾರವಷ್ಟೇ ರೋಡ್ ಶೋ ನಡೆಸಿದ್ದ ಮೋದಿ, ಭಾನುವಾರ ಮೈಸೂರಿನಲ್ಲೂ ಅದ್ಧೂರಿಯಾಗಿ ರೋಡ್ ಶೋ ಕೈಗೊಂಡಿದ್ದಾರೆ. ಮೋದಿ ಅವರನ್ನು ಕಣ್ತುಂಬಿಕೊಳ್ಳಲು ರಸ್ತೆಯುದ್ದಕ್ಕೂ ಸಾವಿರಾರು ಜನ ನೆರೆದಿದ್ದರು.
ಮೈಸೂರು: ವಿಧಾನಸಭೆ ಚುನಾವಣೆ (Modi In Karnataka) ಹಿನ್ನೆಲೆಯಲ್ಲಿ ಹಲವೆಡೆ ನರೇಂದ್ರ ಮೋದಿ ಅವರು ಬೃಹತ್ ಸಮಾವೇಶ, ರೋಡ್ ಶೋಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅದರಂತೆ, ಅರಮನೆ ನಗರಿ ಮೈಸೂರಿನಲ್ಲೂ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸಿದ್ದು, ಸಾವಿರಾರು ಜನ ಮೋದಿ ಅವರ ಮೇಲೆ ಹೂಮಳೆ ಸುರಿಸಿದ್ದಾರೆ.
ಮೈಸೂರಿನ ಗನ್‌ಹೌಸ್ ವೃತ್ತದಿಂದ ಹಳೆಯ ಎಪಿಎಂಸಿ, ಹೈವೇ ವೃತ್ತದವರೆಗೆ 4 ಕಿಲೋಮೀಟರ್ ರೋಡ್ ಶೋ ನಡೆಯುತ್ತಿದ್ದು, ಮೋದಿ ಅವರಿಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಸ್.ಎ.ರಾಮದಾಸ್ ಅವರು ಸಾಥ್ ನೀಡಿದ್ದಾರೆ.
ಮೋದಿ ಮೋದಿ ಘೋಷಣೆ
ಪ್ರಧಾನಿಯವರ ರೋಡ್ ಶೋ ಸಾಗುವ ರಸ್ತೆಯುದಕ್ಕೂ ಸಾವಿರಾರು ಜನ ನೆರೆದಿದ್ದು, ಮೋದಿ, ಮೋದಿ ಎಂಬ ಘೋಷಣೆ ಕೂಗಿದ್ದಾರೆ. ಇಡೀ ನಗರವೇ ಕೇಸರಿಮಯವಾಗಿದ್ದು, ಮೋದಿ ರೋಡ್ ಶೋಗೆ ಸಾಂಸ್ಕೃತಿಕ ಕಲಾ ತಂಡಗಳು ಕೂಡ ಮೆರುಗು ನೀಡಿದವು. ಬಿಜೆಪಿ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಸಾಗಿದರು.
ಇದನ್ನೂ ಓದಿ: Modi In Karnataka: ಬೆಂಗಳೂರಿನಲ್ಲಿ ಮೋದಿ ರೋಡ್ ಶೋ ಅಬ್ಬರ; ಇಲ್ಲಿವೆ ಫೋಟೊಗಳು
ಬಸವೇಶ್ವರ ವೃತ್ತ, ಕೆ.ಆರ್.ವೃತ್ತ, ಚಿಕ್ಕ ಗಡಿಯಾರ ವೃತ್ತದ ಮಾರ್ಗವಾಗಿ ರೋಡ್ ಶೋ ಸಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರಲ್ಲಿ ಬಿಜೆಪಿ ಬಲವರ್ಧನೆಗೆ ತೀರ್ಮಾನಿಸಲಾಗಿದ್ದು, ಚುನಾವಣೆ ಫಲಿತಾಂಶದಲ್ಲೂ ಸುಧಾರಣೆಗೆ ಪಕ್ಷ ಮುಂದಾಗಿದೆ. ಹಾಗಾಗಿ, ಬಿಜೆಪಿಯು ಹಳೇ ಮೈಸೂರು ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದರ ಭಾಗವಾಗಿಯೇ ಮೋದಿ ಅವರು ರೋಡ್ ಶೋ ಕೈಗೊಂಡಿದ್ದಾರೆ.
ಟಿಕೆಟ್ ವಂಚಿತರಿಗೆ ರೋಡ್ ಶೋನಲ್ಲಿ ಭಾಗವಹಿಸುವ ಅವಕಾಶ
ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತರಾದ ಕೆ.ಎಸ್.ಈಶ್ವರಪ್ಪ ಹಾಗೂ ಎಸ್.ಎ.ರಾಮದಾಸ್ ಅವರಿಗೆ ಮೋದಿ ಜತೆ ರೋಡ್ ಶೋನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ಇಬ್ಬರೂ ನಾಯಕರು ರೋಡ್ ಶೋ ಉದ್ದಕ್ಕೂ ಮೋದಿ ಜತೆ ಕಾಣಿಸಿಕೊಂಡಿದ್ದು, ಆ ಮೂಲಕ ಅವರ ಅಸಮಾಧಾನ ತಣಿಸುವ ಹಾಗೂ ಕಾರ್ಯಕರ್ತರಲ್ಲಿದ್ದ ಸಿಟ್ಟನ್ನು ಕಡಿಮೆಗೊಳಿಸುವ ಯತ್ನ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕರ್ನಾಟಕ
Viral News: ಮುಖ್ಯಮಂತ್ರಿಗಳೇ ಎಣ್ಣೆ ರೇಟ್ ಜಾಸ್ತಿ ಮಾಡ್ಬೇಡಿ; BPL ಕಾರ್ಡ್‌ದಾರನ ವಾರ್ಷಿಕ ಲೆಕ್ಕ ಮುಂದಿಟ್ಟ ಕುಡುಕರ ಸಂಘ!
liquor price: ರಾಜ್ಯ ಸರ್ಕಾರ ಮದ್ಯದ ಮೇಲಿನ ಸುಂಕವನ್ನು ಏರಿಕೆ ಮಾಡುತ್ತಲೇ ಇದೆ. ಇದು ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ. ಈ ಕಾರಣದಿಂದಾಗಿ ಮದ್ಯದ ಮೇಲಿನ ಸುಂಕವನ್ನು ಇಳಿಕೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕುಡುಕರ ಸಂಘವು ಪತ್ರ ಬರೆದು ಮನವಿ ಮಾಡಿದೆ!
ಬೆಂಗಳೂರು: ಅನೇಕ ಬಜೆಟ್ ಮಂಡನೆ ಸಂದರ್ಭದಲ್ಲಿ ಮದ್ಯ ಪ್ರಿಯರಿಗೆ ಆಯಾ ಸರ್ಕಾರಗಳು ಶಾಕ್ ಕೊಡುತ್ತಲೇ ಬರುತ್ತಿವೆ. ಮದ್ಯದ ದರದ ಮೇಲೆ ಅಬಕಾರಿ ಸುಂಕವನ್ನು ಹೇರುತ್ತಿವೆ. ಈಗ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಈ ನಡುವೆ ಅವರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸವಾಲಿದೆ. ಅದಕ್ಕೆ ಹಣ ಹೊಂದಾಣಿಕೆಯನ್ನು ಮಾಡಬೇಕಿದೆ. ಇದು ಈಗ ಮದ್ಯ ಪ್ರಿಯರಲ್ಲಿ ತಲ್ಲಣವನ್ನು ಹುಟ್ಟಿಸಿದೆ. ಈ ಕಾರಣಕ್ಕೆ ಅವರೆಲ್ಲರೂ “ಎಣ್ಣೆಯ ವಿಷ್ಯ, ಬೇಡವೋ ಶಿಷ್ಯ” ಎಂಬ ಹಾಡನ್ನು ಹಾಡಬೇಕಾಗುತ್ತದೆ ಎಂದು ಆತಂಕದಲ್ಲಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ಮದ್ಯ ಪ್ರೇಮಿಗಳ/ಕುಡುಕರ ಸಂಘವು, ಈಗಾಗಲೇ ಮದ್ಯದ ಸುಂಕವನ್ನು ಹೆಚ್ಚಳ ಮಾಡಿದ್ದು, ಅದನ್ನು ಇಳಿಸಿ ಎಂದು ಮನವಿ ಮಾಡಿದ್ದಾರೆ. ಈ ಪತ್ರ ಈಗ ವೈರಲ್ (Viral News) ಆಗಿದೆ.
ಇದಲ್ಲದೆ, ಅಬಕಾರಿ ಸಚಿವರು, ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷರು, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೂ ಪತ್ರದ ಪ್ರತಿಯನ್ನು ಲಗತ್ತಿಸಿದ್ದು, ದಯಮಾಡಿ ಅಬಕಾರಿ ಸುಂಕವನ್ನು ಇಳಿಸಿ ಸಂಕಷ್ಟದಲ್ಲಿರುವ ಮದ್ಯ ಪ್ರಿಯರ ರಕ್ಷಣೆಗೆ ದಾವಿಸಿ ಎಂದು ಮೊರೆ ಇಟ್ಟಿದ್ದಾರೆ!
ಇದನ್ನೂ ಓದಿ: Electricity Bill: ನೇಕಾರರಿಗೆ ಶಾಕ್! 90 ರೂಪಾಯಿ ಮಿನಿಮಮ್ ಚಾರ್ಜ್ 140ಕ್ಕೆ ಏರಿಕೆ; ಇದು ಗ್ಯಾರಂಟಿ ಎಫೆಕ್ಟಾ?
ಮನವಿ ಪತ್ರದಲ್ಲೇನಿದೆ?
ಮಾನ್ಯ ಮುಖ್ಯಮಂತ್ರಿ ಮತ್ತು ಮದ್ಯ ಪ್ರಿಯರ ಇಲಾಖೆ ಅಂದರೆ ಅಬಕಾರಿ ಇಲಾಖೆಯ ಸಚಿವರಲ್ಲಿ ವಿನಂತಿಸುವುದೇನೆಂದರೆ, ರಾಜ್ಯದಲ್ಲಿ ಜಾತಿ, ಧರ್ಮ, ಬಡವ ,ಬಲ್ಲಿದ, ರಾಜಕಾರಣಿ, ಡಾಕ್ಟರ್, ಪತ್ರಕರ್ತ, ಸರ್ಕಾರಿ ನೌಕರರು, ವಕೀಲರು ಎಂಬ ತಾರತಮ್ಯ ಇಲ್ಲದೆ ಮದ್ಯ ಸೇವನೆಯನ್ನು ಮಾಡುತ್ತಾರೆ. ಎಲ್ಲ ವರ್ಗದವರು ಮದ್ಯ ಸೇವನೆಯನ್ನು ಮಾಡುತ್ತಿದ್ದು, ಇದು ಆಹಾರ ಸಂಸ್ಕೃತಿಯ ಭಾಗವಾಗಿದೆ. ಮದುವೆ, ಹಬ್ಬ ಹರಿದಿನಗಳಲ್ಲಿ ಆರಾಧನೆ ಪದ್ಧತಿಯಲ್ಲಿ, ಸಂತೋಷ ಕೂಟದಲ್ಲಿ ಮದ್ಯ ಪ್ರಿಯರು ಮದ್ಯ ಸೇವನೆಯನ್ನು ಮಾಡುತ್ತಿದ್ದಾರೆ. ಸುರಪಾನಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇದೆ.
ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಬರುತ್ತಿದೆ. ಇಷ್ಟೆಲ್ಲ ಆದಾಯ ಬರುತ್ತಿದ್ದರೂ ಮದ್ಯ ಪ್ರೇಮಿಗಳ ಬಗ್ಗೆ ಕಾಳಜಿ ವಹಿಸದಿರುವುದು ತುಂಬ ದುಃಖಕರ ವಿಷಯ. ಈಗಾಗಲೇ ರಾಜ್ಯ ಸರ್ಕಾರವು ಮದ್ಯದ ಮೇಲಿನ ತೆರಿಗೆಯನ್ನು ಜಾಸ್ತಿ ಮಾಡಿದೆ ಎಂದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ.
ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿ ಏನೆಂದರೆ, ಒಬ್ಬ ಬಿಪಿಎಲ್ ಕಾರ್ಡ್ ಹೊಂದಿದವನ ಆದಾಯ ಅಲ್ಪ ಪ್ರಮಾಣದಲ್ಲಿ ಇರುತ್ತದೆ. ಮದ್ಯ ಪ್ರೇಮಿ ದಿನಗೂಲಿ ನೌಕರ ದಿನವೂ ಸರಾಸರಿ 180 ಎಂ.ಎಲ್. ಕುಡಿದರೂ ಅವನಿಗೆ ದಿನಕ್ಕೆ 200 ರಿಂದ 250 ರೂಪಾಯಿಯಷ್ಟು ಮದ್ಯಕ್ಕೆ ಖರ್ಚು ತಗಲುತ್ತದೆ. ಅಂದರೆ, ತಿಂಗಳಿಗೆ 7500 ರೂಪಾಯಿ ಬೇಕಾಗುತ್ತದೆ. ವಾರ್ಷಿಕ 90,000 ರೂಪಾಯಿ ಒಬ್ಬ ಮದ್ಯ ಪ್ರೇಮಿ ಕುಡುಕನಿಗೆ ಬೇಕಾಗುತ್ತದೆ.
ಇದನ್ನೂ ಓದಿ: Congress Guarantee: ʼಗೃಹಲಕ್ಷ್ಮಿʼಗೂ ಮಗನ ಐಟಿಗೂ ಸಂಬಂಧ ಇಲ್ಲ; ಉಲ್ಟಾ ಹೊಡೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಇದರಿಂದ ಮದ್ಯಮ ವರ್ಗ ಮತ್ತು ಬಡವರಿಗೆ ಆರ್ಥಿಕವಾಗಿ ಹೊರೆಯಾಗಲಿದೆ. ಆದ್ದರಿಂದ ಮದ್ಯದ ಮೇಲಿನ ಸುಂಕದ ದರ ಹೆಚ್ಚಳ ಬಗ್ಗೆ ಪುನರ್ ಪರಿಶೀಲನೆ ಮಾಡಿ ಸ್ಥಳೀಯ ಬ್ರಾಂಡ್‌ನ ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ ಹಾಗೂ ಬಿಯರ್ ಮೇಲಿನ ಸುಂಕವನ್ನು ಕಡಿಮೆ ಮಾಡಬೇಕು ಎಂದು ಎಲ್ಲ ಮದ್ಯ ಪ್ರಿಯ ಬ್ರದರ್ಸ್ & ಸಿಸ್ಟರ್ಸ್ ಪರವಾಗಿ ವಿನಂತಿಸುತ್ತೇವೆ.
ಉಡುಪಿ
Viral News: ಶಾಲೆಗೆ ನೀರು ಪೂರೈಸಲು ಹೊರಟಿದ್ದ ಟ್ಯಾಂಕರ್ ವಾಪಸ್; ನೀರು ಕೊಡ್ಬೇಡ ಎಂದು ಗ್ರಾಪಂ ಅಧ್ಯಕ್ಷ ಅವಾಜ್
Govt School: ಶಾಲಾ ಮಕ್ಕಳಿಗೆ ಕುಡಿಯಲು ನೀರು ಕೊಡಿ (Drinking Water) ಎಂದು ಶಿಕ್ಷಕರು ಕೇಳಿದರೆ, ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರು, ಶಾಲೆಗೆ ನೀರು ಕೊಡಬೇಡ ವಾಪಸ್ಸು ಬಾ ಎಂದು ಟ್ಯಾಂಕರ್ ಚಾಲಕನನ್ನು ವಾಪಸ್ ಕರೆಸಿಕೊಂಡಿದ್ದಾರೆ. ಇದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು ಆಡಿಯೋ ವೈರಲ್ ಆಗಿದೆ.
ಉಡುಪಿ: ಇಲ್ಲಿನ ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರ ವರ್ತನೆಗೆ ಪಂಚಾಯತ್ ಸದಸ್ಯರು ಕಿಡಿಕಾರಿ ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ಕುಡಿಯಲು ನೀರಿಲ್ಲ ಎಂದು ಶಿಕ್ಷಕರು ಪತ್ರವೊಂದನ್ನು ಬರೆದಿದ್ದರು. ಹೀಗಾಗಿ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ ಶಾಲೆಗೆ ನೀರಿನ ಟ್ಯಾಂಕರ್ ಅನ್ನು ಕಳಿಸಿದ್ದರು. ಆದರೆ ಪಂಚಾಯತ್ ಅಧ್ಯಕ್ಷ, ಟ್ಯಾಂಕರ್ ಚಾಲಕನಿಗೆ ಅವಾಜ್ ಹಾಕಿ ನೀರು ಕೊಡಬೇಡ ಬಾ ಎಂದು ವಾಪಸ್ ಕರೆಸಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಆಡಿಯೊವೊಂದು ಬಹಿರಂಗಗೊಂಡಿದ್ದು, ವೈರಲ್ (Viral news) ಆಗಿದೆ.
ಟ್ಯಾಂಕರ್ ಚಾಲಕನ ತರಾಟೆ ತೆಗೆದುಕೊಂಡ ಪಂಚಾಯತ್ ಸದಸ್ಯ
ಶಾಲೆಗೆ ನೀರು ತಲುಪಿಸದ ಹಿನ್ನೆಲೆಯಲ್ಲಿ ಚಾಲಕನಿಗೆ ಫೋನ್ ಮೂಲಕ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ ತರಾಟೆ ತೆಗೆದುಕೊಂಡಿದ್ದಾರೆ. ಶಾಲೆಗೆ ಯಾಕೆ ನೀರು ಪೂರೈಸಿಲ್ಲ ಎಂದು ಪಂಚಾಯತ್ ಸದಸ್ಯ ಕೇಳಿದಾಗ, ಅಧ್ಯಕ್ಷರು ಶಾಲೆಗೆ ನೀರು ಬಿಟ್ಟರೆ ಬಿಲ್ ಮಾಡುವುದಿಲ್ಲ ಎಂದಿದ್ದಾರೆ. ಹೀಗಿರುವಾಗ ನಾನೇನು ಮಾಡಲಿ ಸರ್ ಎಂದು ಅಸಹಾಯಕತೆ ತೋರಿದ್ದಾನೆ. ಚಾಲಕ ಹಾಗೂ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ ನಡುವಿನ ಸಂಭಾಷಣೆಯ ಆಡಿಯೊ ವೈರಲ್ ಆಗಿದೆ.
ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದ ಪಂಚಾಯತ್ ಸದಸ್ಯ
ವಂಡ್ಸೆ ವ್ಯಾಪ್ತಿಗೆ ಬರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಇತ್ತೀಚೆಗೆ ಶಾಲೆಯಲ್ಲಿ ನೀರಿನ ಅಭಾವ ಉಂಟಾಗಿದೆ. ಹೀಗಾಗಿ ಶಾಲೆಯ ಶಿಕ್ಷಕರು ಶಾಲೆಗೆ ನೀರು ಬೇಕೆಂದು ಗ್ರಾಮ ಪಂಚಾಯತ್‌ಗೆ ಪತ್ರವೊಂದನ್ನು ಬರೆದಿದ್ದರು.
ಶಿಕ್ಷಕರ ಲಿಖಿತ ಪತ್ರಕ್ಕೆ ಸ್ಪಂದಿಸಿದ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ ಪಂಚಾಯತ್ ವತಿಯಿಂದ ಕಳೆದ ಜೂ 7ರಂದು ಮಧ್ಯಾಹ್ನ 12:30ರ ಸುಮಾರಿಗೆ ಶಾಲೆಗೆ ನೀರಿನ ಟ್ಯಾಂಕರ್ ಕಳುಹಿಸಿದ್ದರು. ಆದರೆ, ಪಂಚಾಯತ್ ಅಧ್ಯಕ್ಷ ಟ್ಯಾಂಕರ್ ಚಾಲಕನಿಗೆ ಫೋನ್ ಮಾಡಿ ʻನೀರು ಕೊಡಬೇಡ ವಾಪಸ್ ಬಾʼ ಎಂದು ತಿಳಿಸಿದ್ದರಂತೆ.
ಹೀಗಾಗಿ ಚಾಲಕ ಶಾಲಾ ಆವರಣದಲ್ಲೇ 2,750 ಲೀಟರ್ ಬ್ಯಾರಲ್ ಇರಿಸಿ ವಾಪಸ್ ಆಗಿದ್ದಾನೆ. ಬಳಿಕ ಜೂನ್ 8ರ ಬೆಳಗ್ಗೆ ಪುನಃ ಪಂಚಾಯತ್ ಅಧ್ಯಕ್ಷ, ಟ್ಯಾಂಕರ್ ಚಾಲಕನನ್ನು ಕರೆಸಿ, ಶಾಲೆಗೆ ನೀರು ಕೊಡುವುದು ಬೇಡ, ನೀರು ಕೊಟ್ಟಲ್ಲಿ ನೀರಿನ ಬಿಲ್ ಮಾಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Road Accident: ಅಪಘಾತದಲ್ಲಿ ಮೈಸೂರು ಬಿಜೆಪಿ ಮುಖಂಡ ಮರಣ; ಶಿವಮೊಗ್ಗ, ಕೊಡಗಿನಲ್ಲೂ ಹಾರಿಹೋಯ್ತು ಪ್ರಾಣ
ಹೀಗಾಗಿ ಪಂಚಾಯತ್ ಅಧ್ಯಕ್ಷರ ಬೇಜವಾಬ್ದಾರಿಗೆ ಬೇಸತ್ತಿರುವ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ ಅವರು ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ. ಪಂಚಾಯತ್ ಅಧ್ಯಕ್ಷರು ಶಾಲೆಗೆ ನೀರು ಬಿಡದಂತೆ ಪಿಡಿಒ ಮತ್ತು ನೀರಿನ ಚಾಲಕನಿಗೆ ಧ್ಕಮಿ ಹಾಕಿದ್ದಾರೆ. ಹೀಗಾಗಿ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಜತೆಗೆ ಹರಸಾಹಸ ಪಟ್ಟು ಶಾಲೆಗೆ ನೀರಿನ ವ್ಯವಸ್ಥೆಯನ್ನು ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Karnataka Govt: ಜಿಲ್ಲಾ ಉಸ್ತುವಾರಿ ನೇಮಕದಲ್ಲಿ ಬಿಜೆಪಿ ನೀತಿಯನ್ನು ಕಿತ್ತೆಸೆದ ಕಾಂಗ್ರೆಸ್ ಸರ್ಕಾರ: ಇಬ್ಬರು ಸಚಿವರಿಗೆ ಜಿಲ್ಲೆ ಇಲ್ಲ
ಬಿಜೆಪಿ ಸರ್ಕಾರದಲ್ಲಿ (Karnataka Govt), ಅದೇ ಜಿಲ್ಲೆಯ ಶಾಸಕರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬಾರದು ಎಂಬ ನೀತಿ ಇತ್ತು.
ಬೆಂಗಳೂರು: ರಾಜ್ಯ ಸರ್ಕಾರವು (Karnataka Govt) ಎಲ್ಲ ಜಿಲ್ಲೆಗಳಿಗೂ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶಿಸಿದೆ. ರಾಜ್ಯದ ಎಲ್ಲ ಸರ್ಕಾರಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆಗೆ ಜೂನ್ 11ರಂದು ರಾಜ್ಯಾದ್ಯಂತ ಚಾಲನೆ ನೀಡಲಾಗುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ಇದೀಗ ನೇಮಕವಾಗಿರುವ ಜಿಲ್ಲಾ ಉಸ್ತುವಾರಿ ಸಚಿವರೇ ಹೊಣೆ ಹೊರಲಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೆ ನಿಯಮ ಹಾಕಿಕೊಳ್ಳಲಾಗಿತ್ತು. ಅದೇ ಜಿಲ್ಲೆಯ ಶಾಸಕರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬಾರದು ಎಂಬ ನೀತಿ ಇತ್ತು. ಆದರೆ ಈ ನೀತಿಯ ಕುರಿತು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಜಿಲ್ಲಾ ಅಭಿವೃದ್ಧಿ ಸರಿಯಾಗಿ ನಡೆಯುವುದಿಲ್ಲ ಎಂದಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲುಂಡ ನಂಥರ ಅವಲೋಕನ ಸಭೆಯಲ್ಲೂ ಅಭ್ಯರ್ಥಿಗಳು ಇದೇ ಮಾತನ್ನು ಹೇಳಿದ್ದರು. ನಾಯಕರ ಮಾತನ್ನು ಕೇಳಿ ಅನೇಕರು ಸೋತರು ಎಂದು ತಿಳಿಸಿದ್ದರು.
ಇದೀಗ ಕಾಂಗ್ರೆಸ್ ಸರ್ಕಾರ, ಅದೇ ಜಿಲ್ಲೆಗೆ ನೇಮಕ ಮಾಡಬಾರದು ಎಂಬ ನೀತಿಯನ್ನು ಒಟ್ಟಾರೆ ಕೈಬಿಟ್ಟಿದೆ. ಬಹಳಷ್ಟು ಸಚಿವರಿಗೆ ಅದೇ ಜಿಲ್ಲೆಯನ್ನು ನೀಡಲಾಗಿದೆ. ಆದರೆ ಒಂದೇ ಜಿಲ್ಲೆಯಲ್ಲಿ ಇಬ್ಬರು ಸಚಿವರಿರುವಾಗ ಅನೇಕ ಜಿಲ್ಲೆಗಳಿಗೆ ಹೊರಗಿನವರನ್ನೂ ನೇಮಿಸಲಾಗಿದೆ.
ಸಚಿವರು ಹಾಗೂ ಉಸ್ತುವಾರಿ ಜಿಲ್ಲೆಗಳು
ಸಿಎಂ ಸಿದ್ದರಾಮಯ್ಯ (ಹಣಕಾಸು, ಗುಪ್ತಚರ)
ಡಿಸಿಎಂ ಡಿ.ಕೆ ಶಿವಕುಮಾರ್(ಸಣ್ಣ ಮತ್ತು ಬೃಹತ್ ನೀರಾವರಿ, ಬೆಂಗಳೂರು ಅಭಿವೃದ್ಧಿ)- ಬೆಂಗಳೂರು ನಗರ
ಜಿ.ಪರಮೇಶ್ವರ್ (ಗೃಹ)- ತುಮಕೂರು
ಹೆಚ್.ಕೆ ಪಾಟೀಲ್ (ಕಾನೂನು ಮತ್ತು ಸಂಸದೀಯ, ಪ್ರವಾಸೋದ್ಯಮ)- ಗದಗ
ಕೆ.ಹೆಚ್ ಮುನಿಯಪ್ಪ (ಆಹಾರ ಮತ್ತು ನಾಗರಿಕ ಸರಬರಾಜು)-ಬೆಂಗಳೂರು ಗ್ರಾಮಾಂತರ
ರಾಮಲಿಂಗಾ ರೆಡ್ಡಿ (ಸಾರಿಗೆ ಹಾಗೂ ಮುಜರಾಯಿ)-ರಾಮನಗರ
ಎಂ.ಬಿ ಪಾಟೀಲ್ (ಬೃಹತ್ ಕೈಗಾರಿಕೆ)-ವಿಜಯಪುರ
ಕೆ.ಜೆ ಜಾರ್ಜ್ (ಇಂಧನ)-ಚಿಕ್ಕಮಗಳೂರು
ದಿನೇಶ್ ಗುಂಡೂರಾವ್ (ಆರೋಗ್ಯ)-ದಕ್ಷಿಣ ಕನ್ನಡ
ಹೆಚ್.ಸಿ ಮಹದೇವಪ್ಪ (ಸಮಾಜಕಲ್ಯಾಣ)-ಮೈಸೂರು
ಸತೀಶ್ ಜಾರಕಿಹೊಳಿ (ಲೋಕೋಪಯೋಗಿ)-ಬೆಳಗಾವಿ
ಕೃಷ್ಣ ಬೈರೇಗೌಡ (ಕಂದಾಯ)- ಇಲ್ಲ
ಪ್ರಿಯಾಂಕ್ ಖರ್ಗೆ (ಗ್ರಾಮೀಣಾಭಿವೃದ್ಧಿ, ಐಟಿ-ಬಿಟಿ)-ಕಲಬುರಗಿ
ಶಿವಾನಂದ ಪಾಟೀಲ್ (ಜವಳಿ, ಸಕ್ಕರೆ)-ಹಾವೇರಿ
ಜಮೀರ್ (ವಸತಿ)-ವಿಜಯನಗರ
ಶರಣಬಸಪ್ಪ ದರ್ಶನಾಪುರ್ (ಸಣ್ಣ ಕೈಗಾರಿಕೆ)-ಯಾದಗಿರಿ
ಈಶ್ವರ್ ಖಂಡ್ರೆ (ಅರಣ್ಯ)-ಬೀದರ್
ಚಲುವರಾಯಸ್ವಾಮಿ (ಕೃಷಿ)-ಮಂಡ್ಯ
ಎಸ್.ಎಸ್ ಮಲ್ಲಿಕಾರ್ಜುನ (ಗಣಿ ಮತ್ತು ಭೂಗರ್ಭ ಶಾಸ್ತ್ರ, ತೋಟಗಾರಿಕೆ)-ದಾವಣಗೆರೆ
ರಹೀಂ ಖಾನ್ (ಪೌರಾಡಳಿತ, ಹಜ್)- ಇಲ್ಲ
ಸಂತೋಷ ಲಾಡ್ (ಕಾರ್ಮಿಕ)-ಧಾರವಾಡ
ಡಾ.ಶರಣುಪ್ರಕಾಶ್ ಪಾಟೀಲ್ (ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ)-ರಾಯಚೂರು
ಆರ್.ಬಿ ತಿಮ್ಮಾಪುರ (ಅಬಕಾರಿ)-ಬಾಗಲಕೋಟೆ
ಕೆ. ವೆಂಕಟೇಶ್ (ಪಶುಸಂಗೋಪನೆ)-ಚಾಮರಾಜನಗರ
ಶಿವರಾಜ್ ತಂಗಡಗಿ (ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ)-ಕೊಪ್ಪಳ
ಡಿ.ಸುಧಾಕರ್ (ಯೋಜನೆ ಮತ್ತು ಸಾಂಖ್ಯಿಕ)-ಚಿತ್ರದುರ್ಗ
ಬಿ.ನಾಗೇಂದ್ರ (ಕ್ರೀಡೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ)-ಬಳ್ಳಾರಿ
ಕೆ.ಎನ್.ರಾಜಣ್ಣ (ಸಹಕಾರ)-ಹಾಸನ
ಬಿ.ಎಸ್ ಸುರೇಶ್ (ನಗರಾಭಿವೃದ್ಧಿ)-ಕೋಲಾರ
ಲಕ್ಷ್ಮಿ ಹೆಬ್ಬಾಳ್ಕರ್ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ)-ಉಡುಪಿ
ಮಂಕಾಳ್ ವೈದ್ಯ (ಮೀನುಗಾರಿಕೆ ಮತ್ತು ಬಂದರು)-ಉತ್ತರ ಕನ್ನಡ
ಮಧು ಬಂಗಾರಪ್ಪ (ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ)-ಶಿವಮೊಗ್ಗ
ಡಾ.ಎಂ.ಸಿ .ಸುಧಾಕರ್ (ಉನ್ನತ ಶಿಕ್ಷಣ)-ಚಿಕ್ಕಬಳ್ಳಾಪುರ
ಎನ್.ಎಸ್.ಬೋಸರಾಜ್ (ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ)-ಕೊಡಗು
ಇದನ್ನೂ ಓದಿ: Cow slaughter: ಗೋಹತ್ಯೆ ಹೇಳಿಕೆ ನೀಡಿದ್ದು ಖಾತೆ ಬದಲಾವಣೆಗಾಗಿ: ಸಚಿವ ಕೆ. ವೆಂಕಟೇಶ್ ಕುರಿತು ಮಾಜಿ ಸಿಎಂ ಹೇಳಿದ್ದೇನು?
ಕರ್ನಾಟಕ
Guest Lecturer: 13,000 ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಎದುರಾಗಿದೆ ಕಾನೂನು ಸಮಸ್ಯೆ!
ಪಠ್ಯ ಪುಸ್ತಕ ಪರಿಷ್ಕರಣೆಗೆ ಬಿಜೆಪಿ ಆಕ್ಷೇಪಿಸುವುದಕ್ಕೆ ತಲೆ ಕಡಿಸಿಕೊಳ್ಳದೆ ತಮ್ಮ ಪ್ರಣಾಳಿಕೆಯನ್ನು ಜಾರಿ ಮಾಡುವುದಾಗಿ ಮಧು ಬಂಗಾರಪ್ಪ ಹೇಳಿದ್ದಾರೆ.
ಬೆಂಗಳೂರು: ಅತಿಥಿ ಶಿಕ್ಷಕರ (Guest Lecturer) ನೇಮಕ ಪ್ರಕ್ರಿಯೆ ಆರಂಭವಾಗಿದ್ದು, ಕೆಲವು ಕಾನೂನಾತ್ಮಕ ಸಮಸ್ಯೆಗಳು ಎದುರಾಗಿವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜತೆಗೆ ಮಾತನಾಡಿದ ಮಧು ಬಂಗಾರಪ್ಪ, ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಆಗಿದೆ. ಖಾಯಂ ನೇಮಕಾತಿಯಲ್ಲಿ ಹೈದರಾಬಾದ್ ಕರ್ನಾಟಕ, ನಾನ್ ಹೈದರಾಬಾದ್ ಕರ್ನಾಟಕ ಎಂದು ಲೀಗಲ್ ಸಮಸ್ಯೆ ಇತ್ತು. ಹೈದರಾಬಾದ್ ಕರ್ನಾಟಕ ಲೀಗಲ್ ಸಮಸ್ಯೆ ಇನ್ನೂ ಇದೆ. ಕೆಲವರು ಕೋರ್ಟ್‌ಗೆ ಹೋಗಿದ್ದಾರೆ. ಈ ಬಗ್ಗೆ ಅಂತಿಮ ಆದೇಶ ಬರಬೇಕು.
ಅಂತಿಮ ಆದೇಶ ಬಂದ ತಕ್ಷಣ ಪ್ರಕ್ರಿಯೆ ಆರಂಭ ಆಗಲಿದೆ. ನಾವು ಎಲ್ಲದಕ್ಕೂ ಸಿದ್ಧವಾಗಿದ್ದೇವೆ. 13 ಸಾವಿರಕ್ಕೂ ಅಧಿಕ ಶಿಕ್ಷಕ ನೇಮಕಾತಿ ಆಗಲಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೆಲ ಅಂಶಗಳನ್ನು ಮಾಡುತ್ತೇವೆ. ಸಚಿವ ಸಂಪುಟದಲ್ಲಿಟ್ಟು ಅನುಮತಿ ಪಡೆಯುತ್ತೇವೆ ಎಂದರು.
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದ ಬಗ್ಗೆ ಮಧು ಬಂಗಾರಪ್ಪ ಅವರನ್ನೇ ಕೇಳಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರ ಕುರಿತು ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಅದರಲ್ಲಿ ತಪ್ಪೇನು ಇಲ್ಲ. ಈ ಇಲಾಖೆ ನನ್ನ ಬಳಿ ಇದೆ, ಹಾಗಾಗಿ ಸಿಎಂ ಹೇಳಿದ್ದಾರೆ. ಅದು ಸಿಎಂ ಸಿದ್ದರಾಮಯ್ಯ ನನಗೆ ಕೊಟ್ಟ ಗೌರವ. ಸಪ್ಲಿಮೆಂಟರಿ ಕಳಿಸಿದ್ರೆ ಎಷ್ಟು ವೆಚ್ಚ ಆಗಲಿದೆ..? ಬಹಳ ಎನು ಆಗುವುದಿಲ್ಲ, ಸಚಿವ ಸಂಪುಟದಲ್ಲಿ ಅನುಮತಿ ಪಡೆದ ನಂತರ ಹೇಳ್ತೇನೆ. ಬಿಜೆಪಿಯವರಿಗೆ ಉತ್ತರ ಕೊಡಲು ನಾನು ಸ್ಥಾನ ಅಲಂಕರಿಸಿಲ್ಲ. ಮಕ್ಕಳ ಭವಿಷ್ಯಕ್ಕಾಗಿ ಅಲಂಕರಿಸಿದ್ದೇನೆ. ಪ್ರಣಾಳಿಕೆಯಲ್ಲಿ ಮಾತು ಕೊಟ್ಟಹಾಗೆ ಮಾಡ್ತೇವೆ ಎಂದರು.
ಇದನ್ನೂ ಓದಿ: Text Book: ಹಿಂದಿನ ಪಠ್ಯದಲ್ಲಿ ಹುಸಿ ದೇಶಭಕ್ತಿ; ಪಠ್ಯ ಪರಿಷ್ಕರಣೆ ಮಾಡುವುದೇ ಸರಿ ಅಂದ್ರು ಕುಂ. ವೀರಭದ್ರಪ್ಪ!
-
ಸುವಚನ11 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
South Cinema23 hours ago
Priya Prakash Varrier: ಕಣ್ಣು ಹೊಡೊಯೊ ಐಡಿಯಾ ಕೊಟ್ಟಿದ್ದು ನಾನೆ ಎಂದ ಪ್ರಿಯಾ; ಆಕೆಗೆ ತೈಲ ಕೊಡ್ರಪ್ಪ ಎಂದ ನಿರ್ದೇಶಕ!
-
South Cinema21 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema21 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ಪ್ರಮುಖ ಸುದ್ದಿ17 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
South Cinema23 hours ago
Sara Ali Khan: ಶುಭ್ಮನ್ ಗಿಲ್ ಜತೆ ಡೇಟಿಂಗ್, ಕೂನೆಗೂ ಉತ್ತರ ಕೊಟ್ಟರಾ ಸಾರಾ
-
ಪ್ರಮುಖ ಸುದ್ದಿ22 hours ago
ವಿಧವೆ ಅನ್ನೋದಕ್ಕೆ ರಾಷ್ಟ್ರಪತಿಯನ್ನು ಸಂಸತ್ ಭವನ ಉದ್ಘಾಟನೆಗೆ ಮೋದಿ ಆಹ್ವಾನಿಸಿಲ್ಲವೆಂದ ಕುಂ. ವೀರಭದ್ರಪ್ಪ
-
ಪ್ರಮುಖ ಸುದ್ದಿ23 hours ago
Textbook Revision: ಬುದ್ಧಿಜೀವಿ ಎಂದು ಹೇಳಿಕೊಂಡು ಕೆಲವರು ಓಡಾಡುತ್ತಿದ್ದಾರೆ!: ಸರ್ಕಾರಕ್ಕೆ ಹಿಗ್ಗಾಮುಗ್ಗಾ ಜಾಡಿಸಿದ ಮಾಜಿ ಸಚಿವ ಬಿ.ಸಿ. ನಾಗೇಶ್