Site icon Vistara News

Modi in Karnataka: ದಶಪಥ ಹೆದ್ದಾರಿ ಮಾಡಿಸಿದ್ದು ಮೋದಿಯೇ; ಈ ಬಾರಿ ಮಂಡ್ಯದಲ್ಲಿ ಕೇಸರಿ ಧ್ವಜ ಹಾರಾಟ: ನಳಿನ್‌ ಕುಮಾರ್‌ ಕಟೀಲ್

Nalin kumar kateel

ಮಂಡ್ಯ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ 2014ರ ನಂತರ ನೋಟಿಫಿಕೇಷನ್ ಆಗಿದೆ. 2015ರ ನಂತರ ಟೆಂಡರ್ ಆಗಿ ಪ್ರಕ್ರಿಯೆ ಶುರುವಾಗಿದೆ. 2014ರ ನಂತರ ದೇಶದಲ್ಲಿ ನರೇಂದ್ರ ಮೋದಿಯವರೇ (Modi in Karnataka) ಪ್ರಧಾನಿಯಾಗಿದ್ದವರು. ಹೀಗಾಗಿ ಇದರ ಕ್ರೆಡಿಟ್ ಅನ್ನು ಬೇರೆ ಯಾರೂ ತೆಗೆದುಕೊಳ್ಳಲು ಆಗುವುದಿಲ್ಲ. ಇದರ ಕ್ರೆಡಿಟ್ ಏನಿದ್ದರೂ ಮೋದಿಯವರಿಗೇ ಸಲ್ಲುತ್ತದೆ. ಮಂಡ್ಯದಲ್ಲಿ ಈ ಬಾರಿ ಕೇಸರಿ ಧ್ವಜ ಹಾರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆಯನ್ನು ಸಂಪೂರ್ಣ ನಿರ್ಮಾಣ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು. ಈ ಹಿಂದೆ ಯುಪಿಎ ಅಧಿಕಾರದಲ್ಲಿದ್ದಾಗ ರಸ್ತೆ ಅಭಿವೃದ್ಧಿ ಕುಂಠಿತವಾಗುತ್ತಿತ್ತು. ನಾನು 2008ರಿಂದಲೂ ಸಂಸದನಾದವನು. ಯುಪಿಎ ಕಾಲದಲ್ಲಿ ದಿನಕ್ಕೆ 4 ಕಿ.ಮೀ. ರಸ್ತೆ ಆಗುತ್ತಿದ್ದರೆ, ಇಂದು 24 ಕಿ.ಮೀ. ರಸ್ತೆ ಆಗುತ್ತಿದೆ ಎಂದು ಹೇಳಿದರು.

ದಶಪಥ ರಸ್ತೆ ಉದ್ಘಾಟನೆಗೆ ಪ್ರಧಾನಿ ಮೋದಿ ಬಂದಿದ್ದಾರೆ. ಮಂಡ್ಯದಲ್ಲಿ ಇವತ್ತು ಹವಾ ಎದ್ದಿದೆ. ಅಭೂತಪೂರ್ವ ಜನಸ್ಪಂದನೆ ಸಿಕ್ಕಿದೆ. ಹೆದ್ದಾರಿಯ ಎರಡೂ ಇಕ್ಕೆಲಗಳಲ್ಲಿ ಜನ ಸೇರಿದ್ದಾರೆ. ಮೋದಿಯವರ ಮೇಲಿನ ಅಭಿಮಾನ ಸ್ಪಷ್ಟವಾಗಿದೆ. ಇವತ್ತು ಅವರ ಹವಾ ಏನೆಂದು ಎಲ್ಲರಿಗೂ ಗೊತ್ತಾಗಿದೆ. ಮೋದಿಯವರನ್ನು ಜನ ಎಷ್ಟು ಪ್ರೀತಿಸುತ್ತಾರೆ ಅಂತ ಜನ ತೋರಿಸಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಇದನ್ನೂ ಓದಿ: Modi in Karnataka: ಮಂಡ್ಯಕ್ಕೆ ಭೇಟಿ ನೀಡಿದ 4 ನೇ ಪ್ರಧಾನಿ ಮೋದಿ: ಈ ಹಿಂದೆ ಮಂಡ್ಯಕ್ಕೆ ಮೋದಿ ಬಂದಿದ್ದು ಯಾವಾಗ?

ಈ ಬಾರಿಯ ಚುನಾವಣೆಯಲ್ಲಿ ಮಂಡ್ಯದಲ್ಲಿ ಕೇಸರಿ ಧ್ವಜ ಹಾರುತ್ತದೆ. ಈ ಬಾರಿ ಪರಿವರ್ತನೆ ಆಗುತ್ತದೆ. ಮತ್ತೆ ಕೇಸರಿ ಭದ್ರಕೋಟೆಯಾಗಿ ನಿರ್ಮಾಣವಾಗಲಿದೆ ಎಂದು ಕಟೀಲ್‌ ಹೇಳಿದರು.

Exit mobile version