Site icon Vistara News

Modi in Karnataka: 18 ಸಮಾವೇಶ, 5 ರೋಡ್‌ ಶೋ, 113 ಟಾರ್ಗೆಟ್‌; ಮೋದಿ ಮೆಗಾ ಟಾಸ್ಕ್‌ ಅಂತ್ಯ

Modi Road Show in Bangalore

Modi Road Show in Bangalore

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದೇ ತರುವ ಅತಿ ದೊಡ್ಡ ಉದ್ದೇಶದಿಂದ ಏಪ್ರಿಲ್‌ 29ರಂದು ರಾಜ್ಯಕ್ಕೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿ ಅವರ ಅತಿ ದೊಡ್ಡ ಟಾಸ್ಕ್‌ ಮೇ 7ರ ಸಂಜೆ ಏಳು ಗಂಟೆಗೆ ಅಂತ್ಯಗೊಂಡಿದೆ. ಈ ನಡುವೆ ಅವರು 18 ಸಮಾವೇಶಗಳು, ಐದು ರೋಡ್‌ ಶೋಗಳಲ್ಲಿ ಭಾಗವಹಿಸಿ ವಿಧಾನಸಭಾ ಚುನಾವಣೆಯಲ್ಲಿ ಬಹುಮತದ ಸರಕಾರ (113 ಸ್ಥಾನ) ಸ್ಥಾಪನೆಗೆ ಜನರ ನೆರವು ಕೋರಿದರು. ವಿಷ ಸರ್ಪ ಎಂಬ ಆಪಾದನೆಗೆ ಒಳಗಾಗಿದ್ದ ಅವರು ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಾನದಲ್ಲಿ ದೇವರ ದರ್ಶನ ಮಾಡುವುದಕ್ಕೆ ಮುನ್ನ ನಾನು ವಿಷಸರ್ಪ ಅಲ್ಲ, ಎಲ್ಲ ಬೈಗುಳಗಳನ್ನು ನುಂಗಿಕೊಂಡಿರುವ ವಿಷಕಂಠ ಎಂದು ಹೇಳಿದರು.

ಏಪ್ರಿಲ್‌ 29ರಂದು ನರೇಂದ್ರ ಮೋದಿ ಅವರು ಪ್ರಚಾರದ ಕಣಕ್ಕೆ ಧುಮುಕುವ ಹೊತ್ತಿಗೆ ಸಮೀಕ್ಷೆಗಳು ಬಿಜೆಪಿ ಕಾಂಗ್ರೆಸ್‌ಗಿಂತ ಕಡಿಮೆ ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಎಂಬ ಭವಿಷ್ಯವನ್ನು ನುಡಿದಿದ್ದವು. ಕೆಲವು ಸಮೀಕ್ಷೆಗಳು ಎರಡೂ ಪಕ್ಷಗಳಿಗೆ ಸಮನಾದ ಸ್ಥಾನ ನೀಡಿದ್ದವು. ಆದರೆ, ಮೋದಿ ಆಗಮನವಾಗುತ್ತಿದ್ದಂತೆಯೇ ಅವರ ಕೈಗೆ ಮಲ್ಲಿಕಾರ್ಜುನ ಖರ್ಗೆ ಆಡಿದ ವಿಷ ಸರ್ಪದ ಆಪಾದನೆ, ಅವರ ಪುತ್ರ ಪ್ರಿಯಾಂಕಾ ಖರ್ಗೆ ಆಡಿದ ನಾಲಾಯಕ್‌ ಮಗ ಎಂಬ ಮಾತುಗಳು ಮೋದಿಯ ಕೈಗೆ ಅಸ್ತ್ರವಾದವು. ಆ ಬಳಿಕ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೆ ಬಜರಂಗ ದಳ ನಿಷೇಧ ಪ್ರಸ್ತಾಪವನ್ನಂತೂ ಮೋದಿ ಚೆನ್ನಾಗಿ ಬಳಸಿಕೊಂಡರು.

ರಾಜ್ಯದ ಬಹುತೇಕ ಎಲ್ಲ ಭಾಗಗಳನ್ನು ಪೋಣಿಸುವಂತೆ, ಎಲ್ಲ 224 ಕ್ಷೇತ್ರಗಳನ್ನು ಯಾವುದಾದರೊಂದು ರೀತಿಯಲ್ಲಿ ತಲುಪುವಂತೆ ಆಯೋಜಿಸಿದ 18 ಸಮಾವೇಶಗಳು ಆಯಾ ಭಾಗದಲ್ಲಿ ಸಂಚಲನ ಮೂಡಿಸಿದರು. ಕಲಬುರಗಿಯಿಂದ ಮೈಸೂರಿನ ನಂಜನಗೂಡಿನವರೆಗೆ ಎಲ್ಲ ಭಾಗಗಳಿಗೆ ಮೋದಿ ಸಂಪರ್ಕ ಸಾಧಿಸಿದರು.

ಅವರು ಭಾಗವಹಿಸಿದ ಐದು ರೋಡ್‌ ಶೋಗಳು ಇಡೀ ನಗರಗಳನ್ನು ಒಂದೇ ಬಾರಿಗೆ ಜೋಡಿಸಿ ಜನರನ್ನು ಸೆಳೆದವು. ಅದರಲ್ಲೂ ಬೆಂಗಳೂರಿನಲ್ಲಿ ನಡೆದ ಮೂರು ರೋಡ್‌ ಶೋಗಳು ಭಾರಿ ಸಂಚಲನ ಸೃಷ್ಟಿಸಿದವು. ಮೋದಿ ಅವರು ಬೆಂಗಳೂರಿನ ಮೇಲೆ ಅತಿ ಹೆಚ್ಚು ಗಮನ ಕೊಟ್ಟಿದ್ದಾರೆ ಎನ್ನುವುದನ್ನು ಇದು ಸ್ಪಷ್ಟಪಡಿಸಿತು. ಬೆಂಗಳೂರಿನಲ್ಲಿ 28 ವಿಧಾನಸಭಾ ಕ್ಷೇತ್ರಗಳಿದ್ದು ಅವುಗಳ ಪೈಕಿ 15 ಬಿಜೆಪಿ ಕೈಯಲ್ಲಿವೆ. ಈ ಸಂಖ್ಯೆಯನ್ನು 20ಕ್ಕೇರಿಸುವ ಗುರಿ ಮೋದಿ ಅವರದ್ದು. ಅದಕ್ಕಾಗಿ ಅವರು 40 ಕಿ.ಮೀ.ಗಳಿಗಿಂತಲೂ ಹೆಚ್ಚು ದೂರ ರೋಡ್‌ ಶೋ ನಡೆಸಿದರು. ಬಹುತೇಕ ಎಲ್ಲ ಕ್ಷೇತ್ರಗಳನ್ನು ಕನೆಕ್ಟ್‌ ಮಾಡಿದರು. ಬೆಂಗಳೂರಿನ 26.5 ಕಿ.ಮೀ. ಅಂತರದ ಯಾತ್ರೆ ಒಂದು ದಾಖಲೆಯನ್ನೇ ಬರೆಯಿತು.

ಎಲ್ಲೆಲ್ಲಿ, ಯಾವಾಗ, ಸಮಾವೇಶ, ರೋಡ್‌ ಶೋ?

ಏಪ್ರಿಲ್‌ 29: ಹುಮನಾಬಾದ್‌, ವಿಜಯಪುರ, ಕುಡಚಿಯಲ್ಲಿ ಸಮಾವೇಶ, ಬೆಂಗಳೂರು ಉತ್ತರದಲ್ಲಿ ರೋಡ್‌ ಶೋ
ಏಪ್ರಿಲ್‌ 30: ಕೋಲಾರ, ಚನ್ನಪಟ್ಟಣ, ಬೇಲೂರಿನಲ್ಲಿ ಸಮಾವೇಶ ಮತ್ತು ಮೈಸೂರಿನಲ್ಲಿ ರೋಡ್‌ ಶೋ
ಮೇ 02: ಚಿತ್ರದುರ್ಗ, ವಿಜಯನಗರ, ಸಿಂಧನೂರಿನಲ್ಲಿ ಸಮಾವೇಶ ಮತ್ತು ಕಲಬುರಗಿಯಲ್ಲಿ ರೋಡ್‌ ಶೋ
ಮೇ 03: ಮೂಲ್ಕಿ, ಅಂಕೋಲಾ ಮತ್ತು ಕಿತ್ತೂರಿನಲ್ಲಿ ಸಮಾವೇಶ
ಮೇ 05: ಕಲಬುರಗಿ ಮತ್ತು ತುಮಕೂರಿನಲ್ಲಿ ಸಮಾವೇಶ
ಮೇ 06: ಬೆಂಗಳೂರಿನಲ್ಲಿ 26.5 ಕಿ.ಮೀ. ರೋಡ್‌ ಶೋ, ಬಳಿಕ ಬಾದಾಮಿ ಮತ್ತು ಹಾವೇರಿಯಲ್ಲಿ ಸಮಾವೇಶ
ಮೇ 07: ಬೆಂಗಳೂರಿನಲ್ಲಿ 06 ಕಿ.ಮೀ. ರೋಡ್‌ ಶೋ, ಶಿವಮೊಗ್ಗ ಮತ್ತು ನಂಜನಗೂಡಿನಲ್ಲಿ ಬೃಹತ್‌ ಸಮಾವೇಶ
ಒಟ್ಟು 18 ಸಮಾವೇಶಗಳು, ಐದು ರೋಡ್‌ ಶೋಗಳು

ಮೋದಿ ರೀಚ್‌ ಆದ ಜಿಲ್ಲೆಗಳು: ಬೆಳಗಾವಿ, ಹುಬ್ಬಳ್ಳಿ ಧಾರವಾಡ, ರಾಯಚೂರು, ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಶಿವಮೊಗ್ಗ, ಮಂಗಳೂರು, ಮೈಸೂರು, ಕೋಲಾರ, ಬೆಂಗಳೂರು, ಮಂಡ್ಯ, ರಾಮನಗರ, ತುಮಕೂರು, ಬಾಗಲಕೋಟೆ, ಬಿಜಾಪುರ ಜಿಲ್ಲೆಗಳಲ್ಲಿ ಬೃಹತ್ ಸಮಾವೇಶ ನಡೆಸಿದ್ದಾರೆ ಮೋದಿ.

ಡಿಸೆಂಬರ್‌ನಿಂದ 15ಕ್ಕೂ ಹೆಚ್ಚು ಬಾರಿ ರಾಜ್ಯಕ್ಕೆ ಆಗಮಿಸಿದ ಮೋದಿ

ಚುನಾವಣೆ ಘೋಷಣೆಯಾದ ಬಳಿಕ ಮಾತ್ರವಲ್ಲ, ಕಳೆದ ಡಿಸೆಂಬರ್‌ನಿಂದ ಲೆಕ್ಕ ಹಾಕಿದರೆ ಮೋದಿ ಇದುವರೆಗೆ 15ಕ್ಕೂ ಹೆಚ್ಚು ಬಾರಿ ರಾಜ್ಯಕ್ಕೆ ಬಂದಂತಾಗಿದೆ. ಕೆಂಪೇಗೌಡರ ಪ್ರತಿಮೆ ಅನಾವರಣ, ಮಂಗಳೂರು, ಹುಬ್ಬಳ್ಳಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಲೋಕಾರ್ಪಣೆ, ತುಮಕೂರಿನಲ್ಲಿ ಎಚ್‌ಎಎಲ್‌ ಲೋಕಾರ್ಪಣೆ, ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಉದ್ಘಾಟನೆ, ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆ ಹೀಗೆ ಎಲ್ಲೆಲ್ಲ ಅವಕಾಶ ಸಿಗುತ್ತದೋ ಆಗೆಲ್ಲ ಕರ್ನಾಟಕಕ್ಕೆ ಬಂದಿರುವ ಮೋದಿ ಅವರು ಫಲಾನುಭವಿಗಳ ಸಮಾವೇಶ, ಲೋಕಾರ್ಪಣೆ ಹೆಸರಿನಲ್ಲಿ ಚುನಾವಣೆಯ ಟ್ರೆಂಡ್‌ ಸೆಟ್‌ ಮಾಡಿದ್ದರು.

ಗುಜರಾತ್‌ ತಂತ್ರಗಾರಿಕೆ ಇಲ್ಲೂ ಫಲಿಸುತ್ತಾ?

ʻಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರʼ ಎಂಬ ಘೋಷ ವಾಕ್ಯದೊಂದಿಗೆ ದಿಲ್ಲಿ ಟು ಕರ್ನಾಟಕ ಮತ್ತು ಕರ್ನಾಟಕದ ಮೂಲೆ ಮೂಲೆ ಸುತ್ತಿದ ಮೋದಿ ಅವರು ದೇಶದ ಯಾವುದೇ ಪ್ರಧಾನಿ ಮಾಡದಷ್ಟು ಪ್ರವಾಸ ಮಾಡಿದ್ದಾರೆ. ಇದೇ ರೀತಿ ಗುಜರಾತ್‌ನಲ್ಲೂ ಕೊನೆಯ ಕ್ಷಣದಲ್ಲಿ ಅವರು ನಡೆಸಿದ ಪ್ರಚಾರ ಅವರು ದೊಡ್ಡ ಮಟ್ಟದ ಯಶಸ್ಸು ಸಾಧಿಸಿದ್ದರು. 182 ಕ್ಷೇತ್ರಗಳ ಪೈಕಿ 160ಕ್ಕೂ ಅಧಿಕ ಸ್ಥಾನಗಳನ್ನು ಪಡೆಯಲು ಬಿಜೆಪಿ ಶಕ್ತವಾಗಿತ್ತು. ಕರ್ನಾಟಕದಲ್ಲಿ ಮೋದಿ ಅವರ ರ‍್ಯಾಲಿ, ರೋಡ್‌ ಶೋಗಳ ಅಂತಿಮ ಫಲಿತಾಂಶ ಏನು ಎನ್ನುವುದು ಮೇ 13

Exit mobile version