ಮಂಗಳೂರು: ಮಂಗಳೂರಿನ ಗೋಲ್ಡ್‌ಫಿಂಚ್ ಮೈದಾನದಲ್ಲಿ ಆಯೋಜಿಸಿದ್ದ ಸುಮಾರು 3,800 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳ ಸಮಾವೇಶದಲ್ಲಿ ಸರ್ಕಾರಿ ಯೋಜನೆಗಳ ಬಗ್ಗೆ ಮಾತ್ರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕರಾವಳಿಗರನ್ನು ಸಂತಸಪಡಿಸುವುದನ್ನು ಮಾತ್ರ ಮರೆಯಲಿಲ್ಲ.
ಭಾಷಣದುದ್ದಕ್ಕೂ ಕೇಂದ್ರದ ವಿವಿಧ ಯೋಜನೆಗಳು, ಅವುಗಳ ಅಂಕಿ ಅಂಶ, ಅಭಿವೃದ್ಧಿಯ ನೀಲಿನಕ್ಷೆಯನ್ನ್ಟೆ ಬಿಚ್ಚಿಟ್ಟರು. ಭಾಷಣದ ಕೊನೆಯಲ್ಲಿ ಕರಾವಳಿಯ ವೈಶಿಷ್ಠ್ಯತೆಯನ್ನು ಸ್ಮರಿಸಿದರು.
ವೀರತೆ ಮತ್ತು ವ್ಯಾಪಾರಕ್ಕೆ ಕರಾವಳಿ ಪ್ರಸಿದ್ಧವಾಗಿದೆ. ಭಾರತದ ಅನೇಕ ಪ್ರಸಿದ್ಧ ದ್ವೀಪಗಳು, ಪ್ರಸಿದ್ಧ ವ್ಯಕ್ತಿಗಳು, ದೇವಸ್ಥಾನಗಳು, ತೀರ್ಥಕ್ಷೇತ್ರಗಳು ಇಲ್ಲೇ ಇವೆ ಎಂದರು.
ರಾಣಿ ಅಬ್ಬಕ್ಕ, ರಾಣಿ ಚನ್ನಭೈರಾದೇವಿಯನ್ನು ನಾನು ಸ್ಮರಿಸಿಕೊಳ್ಳಲೇ ಬೇಕು ಎಂದ ಮೋದಿ, ಭಾರತದ ನೆಲವನ್ನು ಗುಲಾಮಿತನದಿಂದ ಹೊರಗೆತರಲು ಈ ವೀರಮಹಿಳೆಯರು ನಡೆಸಿದ ಹೋರಾಟವೇ ನಮಗೆಲ್ಲ ಪ್ರೇರಣೆಯಾಗಿದೆ.
ಹರ್ ಘರ್ ತಿರಂಗಾ ಅಭಿಯಾನವನ್ನು ಕರ್ನಾಟಕದಲ್ಲಿ ಸಫಲಗೊಳಿಸಿದ್ದೂ ಇದೇ ಸಮೃದ್ಧ ಪರಂಪರೆಯ ಅಭಿವ್ಯಕ್ತಿ. ನಾನು ಕರಾವಳಿಗೆ ಆಗಮಿಸಿದಾಗಲೆಲ್ಲ ರಾಷ್ಟ್ರಭಕ್ತಿಯ ಶಕ್ತಿಯನ್ನು ತುಂಬಿಕೊಂಡು ಹೋಗುತ್ತೇನೆ. ದೇಶದ ಅಭಿವೃದ್ಧಿಯ ದೃಷ್ಟಿಯಲ್ಲಿ ಮಂಗಳೂರು ಇದೇ ರೀತಿ ಮುಂದುವರಿಯುತ್ತಿರಲಿ ಎಂದರು.
ಇದನ್ನೂ ಓದಿ | Modi in Mangalore | ಉಳ್ಳವರಷ್ಟೇ ಅಭಿವೃದ್ಧಿಯನ್ನು ಸವಿಯುತ್ತಿದ್ದರು: ಪ್ರತಿಪಕ್ಷಳಿಗೆ ತಿವಿದ ಮೋದಿ