Site icon Vistara News

ಕಲಬುರಗಿ ಮಹಿಳೆಗೆ ಮೋದಿಯಿಂದಲೇ ಸಿಕ್ಕಿತು ಚುನಾವಣೆ ಟಿಕೆಟ್‌ ಆಫರ್‌ !

modi samvad

ಕಲಬುರಗಿ: ನಾನೇನಾದರೂ ಕರ್ನಾಟಕದಲ್ಲಿ ಇದಿದ್ದರೆ, ಅಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗಿದ್ದರೆ ನಿಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡಿಬಿಡುತ್ತಿದ್ದೆ. ಇದು ಕಲಬುರಗಿಯ ಅತ್ಯಂತ ಸಾಮಾನ್ಯ ಮಹಿಳೆ ಸಂತೋಷಿ ಅವರಿಗೆ ಸ್ವತಃ ಪ್ರಧಾನಮಂತ್ರಿ ನೀಡಿದ ಶ್ಲಾಘನೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗರೀಬ್ ಕಲ್ಯಾಣ್ ಸಮ್ಮೇಳನ ಅಂಗವಾಗಿ ಹಲವು ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಂಗಳವಾರ ಸಂವಾದ ನಡೆಸಿದರು. ಈ ಸಂವಾದದಲ್ಲಿ ಕಲಬುರಗಿ ನಿವಾಸಿಯಾದ, ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿ ಸಂತೋಷಿಯೂ ಭಾಗಿಯಾಗಿದ್ದರು. ಸಂತೋಷಿಯವರು ಮೋದಿಯವರೊಂದಿಗೆ ಕನ್ನಡದಲ್ಲಿ ಮಾತನಾಡಿ ಸಂತೋಷ ಹಂಚಿಕೊಂಡಿದ್ದು ಆಕರ್ಷಕವಾಗಿತ್ತು.

ಇದನ್ನೂ ಓದಿ | Video: ರೋಡ್‌ ಶೋ ಮಧ್ಯೆ ಕಾರು ನಿಲ್ಲಿಸಿ ಅವಸರದಿಂದ ಕೆಳಗೆ ಇಳಿದ ಪ್ರಧಾನಿ ಮೋದಿ; ಹೋಗಿದ್ದೆಲ್ಲಿಗೆ?

ಸಂತೋಷಿ ಅವರು ಅನಾರೋಗ್ಯ ಪೀಡಿತರಾದ ತಮ್ಮ ತಾಯಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಿಸಿದರು. ಅಲ್ಲದೆ, ಜನೌಷಧಿ ಕೇಂದ್ರದಲ್ಲಿ ಕೈಗೆಟಕುವ ದರದಲ್ಲಿ ಔಷಧ ದೊರೆತ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಸಂತೋಷಿಯವರು ಪ್ರಧಾನಿ ಮೋದಿಯವರೊಂದಿಗೆ ಕನ್ನಡದಲ್ಲಿ ಮಾತನಾಡಿದರು. ಅಧಿಕಾರಿಯೊಬ್ಬರು ಅದನ್ನು ಹಿಂದಿಗೆ ಅನುವಾದಿಸಿದರು.

modi and ms santoshi

ಬಳಿಕ ಪ್ರಧಾನಿ ಮೋದಿಯವರು ಮಾತನಾಡಿ “ನೀವು ಕನ್ನಡದಲ್ಲಿ ಮಾತನಾಡಿದ್ದರೂ ನಿಮ್ಮ ಮುಖದ ಭಾವನೆಯಲ್ಲಿ ಸಂತಸ ವ್ಯಕ್ತವಾಗುತ್ತಿದೆ ಎನ್ನುವುದು ನನಗೆ ಕಾಣುತ್ತಿದೆ. ನೀವು ಎಷ್ಟು ಸುಂದರವಾಗಿ ವಿಚಾರ ಮಂಡನೆ ಮಾಡಿದ್ದೀರಿ ಎಂದರೆ, ನಾನೇನಾದರೂ ಕರ್ನಾಟಕದಲ್ಲಿದ್ದರೆ, ಅಲ್ಲಿನ ಬಿಜೆಪಿ ಕಾರ್ಯಕರ್ತನಾಗಿದ್ದರೆ ನಿಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡಿಬಿಡುತ್ತಿದ್ದೆ. ನಿಮ್ಮ ಬಗ್ಗೆ ವಿವರಿಸುವ ಜತೆಗೆ ಗ್ರಾಮದ ಕುರಿತೂ ಕಾಳಜಿ ವಹಿಸಿದ್ದೀರ ನೀವು. ನಿಮ್ಮಲ್ಲಿ ನಾಯಕತ್ವ ಗುಣ ಇದೆ. ನೀವು ನಿಮ್ಮ ಗ್ರಾಮದ ನಾಯಕಿ ಆಗಬಹುದು ಎಂದರು. ಸ್ವತಃ ಪ್ರಧಾನಿ ಮೋದಿಯವರ ಈ ಮಾತಿಗೆ, ಸಭಾಂಗಣದಲ್ಲಿ ನೆರೆದಿದ್ದ ಸಾವಿರಾರು ಜನರು ಹರ್ಷಚಿತ್ತರಾಗಿ ಚಪ್ಪಾಳೆ ಹೊಡೆದರು.

ಇದನ್ನೂ ಓದಿ: Mann Ki Baat 89 | ಮೂರೇ ತಿಂಗಳಲ್ಲಿ ಕನ್ನಡ ಕಲಿತ ಹುಡುಗಿಯನ್ನು ಶ್ಲಾಘಿಸಿದ ಮೋದಿ

Exit mobile version