Site icon Vistara News

Modi Visit | ಸಿದ್ಧವಾಯ್ತು ಕೆಂಪೇಗೌಡ ಪೇಟ; ಮೋದಿಗೆ ತೊಡಿಸಲಿರುವ ಇದರ ವಿಶೇಷತೆ ಏನಿದೆ?

modi peta

ಮೈಸೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ೧೦೮ ಅಡಿ ಎತ್ತರದ ಕೆಂಪೇಗೌಡರ ಭವ್ಯ ಪ್ರತಿಮೆ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನವೆಂಬರ್ 11ರಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ (Modi Visit) ಭೇಟಿ ನೀಡಲಿದ್ದಾರೆ. ಈ ವೇಳೆ ಮೋದಿಗೆ “ಕೆಂಪೇಗೌಡ ಪೇಟ”ವನ್ನು ತೊಡಿಸಲಾಗುತ್ತಿದ್ದು, ಪೇಟವು ಮೈಸೂರಿನಲ್ಲಿ ಸಿದ್ಧವಾಗಿದೆ. ಇದು ಹಲವು ವಿಶೇಷತೆಯಿಂದ ಕೂಡಿದೆ.

Narendra Modi

ಪ್ರಧಾನಿ ನರೇಂದ್ರ ಮೋದಿ ನವೆಂಬರ್‌ ೧೧ರಂದು ಪ್ರಗತಿಯ ಪ್ರತಿಮೆಯನ್ನು ಅನಾವರಣ ಮಾಡಲಿದ್ದು, ಈ ವಿಶೇಷ ಸಂದರ್ಭಕ್ಕಾಗಿ ಅ. ೨೧ರಿಂದ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ಆರಂಭವಾಗಿದೆ. ನವೆಂಬರ್‌ ೭ರವರೆಗೆ ಮಣ್ಣಿನ ಸಂಗ್ರಹ ನಡೆಯಲಿದೆ.

ಪೇಟ ಸಿದ್ಧಪಡಿಸಿದ ಮೈಸೂರು ಕಲಾವಿದ
ಕೆಂಪೇಗೌಡ ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕೆಂಪೇಗೌಡ ಪೇಟವನ್ನು ಸಿದ್ಧಪಡಿಸಲಾಗಿದೆ. ಕೆಂಪೇಗೌಡರ ಪ್ರತಿಮೆಯಲ್ಲಿರುವ ಪೇಟದಂತೆಯೇ ವಿನ್ಯಾಸಗೊಳಿಸಲಾಗಿದೆ. ಮೈಸೂರಿನ ಕಲಾವಿದ ನಂದನ್ ಎಂಬುವವರು ಪೇಟ ತಯಾರಿಸಿದ್ದಾರೆ.

ಹೇಗಿದೆ ಪೇಟ?
ಕಲಾವಿದ ನಂದನ್‌ ಅವರು ಈ ಪೇಟ ತಯಾರಿಗೆ ಹತ್ತು ದಿನ ತೆಗೆದುಕೊಂಡಿದ್ದಾರೆ. ಬನಾರಸ್ ರೇಷ್ಮೆ ಬಳಸಿ ಪೇಟವನ್ನು ತಯಾರಿಸಲಾಗಿದೆ. ಕೆಂಪು ಬಣ್ಣದ ಪೇಟ ಇದಾಗಿದೆ. ರೇಷ್ಮೆ, ಗರಿ, ಮುತ್ತುಗಳು ಸೇರಿ ಕುಸುರಿ ಕೆಲಸದಿಂದ ಕಂಗೊಳಿಸುತ್ತಿರುವ ಈ ಪೇಟವನ್ನು ಇದೇ ಮೊದಲ ಬಾರಿಗೆ ಸಿದ್ಧಪಡಿಸಲಾಗಿದೆ.

ನಮ್ಮೂರು ನಮ್ಮೋರು‌ ಸಮಾಜ ಸೇವಾ ಟ್ರಸ್ಟ್ ಹಾಗೂ ಕೆಂಪೇಗೌಡ ಅಭಿಮಾನಿ ಬಳಗದವರು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಅನುಮತಿ ಪಡೆದು ಈ ಪೇಟವನ್ನು ತಯಾರಿಸಿದ್ದಾರೆ.

ಇದನ್ನೂ ಓದಿ | PM Modi | ಮೋದಿ ಭಾಷಣ ಮಾಡುತ್ತಿದ್ದ ಮಂಟಪದ ಬೋಲ್ಟ್ ತೆಗೆಯುತ್ತಿದ್ದ ವ್ಯಕ್ತಿ ಬಂಧನ

Exit mobile version