Site icon Vistara News

Suicide Cases | 2021ರಲ್ಲಿ ದಾಖಲೆಯ 10,560 ಆತ್ಮಹತ್ಯೆ ಪ್ರಕರಣಗಳು, ಸಾವಿಗೆ ಕಾರಣ ಏನು?

Suicides In India belagavi bailahongala

ನವ ದೆಹಲಿ: ದೇಶದಲ್ಲಿ ಡ್ರಗ್ಸ್ ಸೇವನೆ ಹಾಗೂ ಮದ್ಯ ಸೇವನೆಯು ಹೆಚ್ಚುತ್ತಿದೆ. ಬಹಳಷ್ಟು ಜನರು ಈ ದುಶ್ಚಟಗಳಿಗೆ ಶರಣಾಗುತ್ತಿದ್ದಾರೆ. ಆದರೆ, ಇದರ ಅಡ್ಡ ಪರಿಣಾಮ ಎಂಬಂತೆ, ಆತ್ಮಹತ್ಯೆ (Suicide Cases) ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. 2021ರಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಬರೋಬ್ಬರಿ 10,560. ಅಂದರೆ ಸರಾಸರಿ ಗಂಟೆಗೊಂದು ಸಾವು!. ಇದು ಈ ವರೆಗಿನ ದಾಖಲೆಯಾಗಿದೆ ಎಂದು ಎನ್‌ಸಿಆರ್‌ಬಿ ವರದಿಯಲ್ಲಿ ತಿಳಿಸಲಾಗಿದೆ.

2020ಕ್ಕೆ ಹೋಲಿಸಿದರೆ, ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ.15ರಷ್ಟು ಏರಿಕೆಯಾಗಿದೆ. 2020ರಲ್ಲಿ 9169 ಜನರು ಆತ್ಮಹತ್ಯೆ ಮಾಡಿಕೊಂಡಿದ್ದರು. 2021ರಲ್ಲಿ ಸಂಭವಿಸಿದ ಒಟ್ಟು ಆತ್ಮಹತ್ಯೆ ಪೈಕಿ ಶೇ.78ರಷ್ಟು ಆತ್ಮಹತ್ಯೆಗಳು ಮಹಾರಾಷ್ಟ್ರ, ಮಧ್ಯಪ್ರದೇಶ, ತಮಿಳುನಾಡು ಮತ್ತುಕರ್ನಾಟಕ, ಕೇರಳ ರಾಜ್ಯಗಳಲ್ಲಿ ನಡೆದಿವೆ.

ಕಳೆದ ಕೆಲವು ವರ್ಷಗಳಿಂದ ಈ ಪಟ್ಟಿಯಲ್ಲಿ ಮಹಾರಾಷ್ಟ್ರ ಸತತವಾಗಿ ಅಗ್ರಸ್ಥಾನಿಯಾಗಿದೆ. 2015ರಲ್ಲಿಡ್ರಗ್ಸ್ ಮತ್ತು ಮದ್ಯಪಾನ ಚಟಗಳಿಗೆ ದಾಸರಾದವರ ಆತ್ಮಹತ್ಯೆಗಳ ಸಂಖ್ಯೆ ಕರ್ನಾಟಕದಲ್ಲಿ 100ರ ಒಳಗಿತ್ತು. ಈಗ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ.

ಪ್ರತಿ ವರ್ಷ ಸಾವಿರಾರು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕೇಂದ್ರ ಸರ್ಕಾರವು 1995ರಿಂದ ಆತ್ಮಹತ್ಯೆ ಪ್ರಕರಣಗಳನ್ನು ವರ್ಗಿಕರಿಸುತ್ತಾ ಬಂದಿದೆ. 1995ರಲ್ಲಿ ಡ್ರಗ್ಸ್ ಮತ್ತು ಮದ್ಯ ಸೇವನೆ ಪ್ರೇರಿತ ಆತ್ಮಹತ್ಯೆಗಳ ಸಂಖ್ಯೆ 745 ಇತ್ತು. ಅದೀಗ 3 ಡಿಜಿಟ್‌ಗೆ ಬಂದು ತಲುಪಿದೆ.

ಆತ್ಮಹತ್ಯೆಗೆ ಮಾಡಿಕೊಳ್ಳುವರಿಗೆ ನಿರ್ದಿಷ್ಟ ಕಾರಣಗಳು ಇರುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಮಾನಸಿಕ ಸಮಸ್ಯೆಗಳ ಬಗೆಗಿನ ತಾತ್ಸಾರ, ಕೌಟುಂಬಿಕ ತೊಂದರೆಗಳು, ಆರ್ಥಿಕ ಸಮಸ್ಯೆಗಳು ವ್ಯಕ್ತಿಯನ್ನು ಚಟಗಳತ್ತ ವಾಲುವಂತೆ ಮಾಡುತ್ತದೆ. ಅಂತಿಮವಾಗಿ ಅವರು ಆತ್ಮಹತ್ಯೆ ಮಾಡಿಕೊಳ್ಳುವವರೆಗೂ ತಲುಪುತ್ತಾರೆ. ಅದರಲ್ಲೂ ಮಾದಕವಸ್ತು ಹಾಗೂ ಅಲ್ಕೋಹಾಲ್ ವ್ಯಸನಿಗಳು ಯಾವ ಹಂತದಲ್ಲಿ ಆತ್ಮಹತ್ಯೆಗೆ ಮುಂದಾಗುತ್ತಾರೆಂದು ಊಹಿಸುವುದು ಕಷ್ಟ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ | Suicide Case | ಸಾಲಗಾರರ ಹಿಂಸೆ ತಾಳಲಾರದೆ ಬೆಂಗಳೂರಲ್ಲಿ ಜಿಮ್ ಮಾಲೀಕ ಆತ್ಮಹತ್ಯೆ

Exit mobile version