ಬೆಂಗಳೂರು: ಭಾರತ್ ಜೋಡೋ ಯಾತ್ರೆಯಲ್ಲಿ(Bharat jodo) ಪ್ರಚಾರಕ್ಕೆ ಕೆಜಿಎಫ್-2 ಸಿನಿಮಾ ಹಾಡಿನ ಸಂಗೀತ ಬಳಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಮೂವರ ವಿರುದ್ಧ ನಗರದ ಯಶವಂತಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್-೨ ಹಿಂದಿ ಭಾಷೆಯ ಸುಲ್ತಾನ ಹಾಡಿನ ಬಳಸಲಾಗಿದ್ದು, ಇದು ಕೃತಿ ಸ್ವಾಮ್ಯ ಉಲ್ಲಂಘನೆಯಾಗಿದೆ. ಅನುಮತಿ ಇಲ್ಲದೆ ಚಿತ್ರದ ಸಂಗೀತ ಬಳಸಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ, ಭಾರತ್ ಜೋಡೋ ಉಸ್ತುವಾರಿ ಜೈರಾಮ್ ರಮೇಶ್ ವಿರುದ್ಧ ಎಂಆರ್‌ಟಿ ಎಂಬ ಸಂಸ್ಥೆ ಎಫ್‌ಐಆರ್ ದಾಖಲಿಸಿದೆ. ಎಂಆರ್‌ಟಿ ಸಂಸ್ಥೆ ಕೆಜಿಎಫ್-೨ ಹಿಂದಿ ಅವತರಣಿಕೆ ಸಿನಿಮಾ ಹಾಡುಗಳ ಪ್ರಸಾರ ಹಕ್ಕು ಹೊಂದಿದೆ.
ಡಿಕೆಶಿಗೆ ಮತ್ತೆ ಇ.ಡಿ ನೋಟಿಸ್
ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೆ ಇ.ಡಿ. ನೋಟಿಸ್ ನೀಡಿದೆ. ನವೆಂಬರ್ 7ರಂದು ಬೆಳಗ್ಗೆ 1೧ ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ ನೋಟಿಸ್ ಕೊಟ್ಟಿದೆ. ಈ ಹಿಂದೆ ಭಾರತ್ ಜೋಡೋ ಯಾತ್ರೆ ಆರಂಭಕ್ಕೂ ಮುನ್ನ ನೋಟಿಸ್ ನೀಡಲಾಗಿತ್ತು. ಅಲ್ಲದೇ ಯಾತ್ರೆ ನಡೆಯುವ ವೇಳೆಯೂ ನೋಟಿಸ್ ನೀಡಲಾಗಿತ್ತು. ಇದೀಗ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ | Invest Karnataka 2022 | ರಾಜ್ಯ ಸರ್ಕಾರದಿಂದ ಹತ್ತು ಹಲವು ಉದ್ಯಮ ಸ್ನೇಹಿ ಕ್ರಮ: ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್