Site icon Vistara News

Mysore Dasara 2022 | ಗಜಪಡೆ ಮಾವುತ ಮತ್ತು ಕಾವಾಡಿಗಳಿಗೆ ಉಪಾಹಾರ

ಮೈಸೂರು: ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವ (Mysore Dasara 2022) ಅದ್ಧೂರಿತನಕ್ಕೆ ಸಾಕ್ಷಿಯಾಗಲಿದ್ದು, ಭಾನುವಾರ ಅರಮನೆ ಆವರಣದಲ್ಲಿ ಮಾವುತ ಮತ್ತು ಕಾವಾಡಿಗಳ ಕುಟುಂಬಕ್ಕೆ ಉಪಾಹಾರ ವ್ಯವಸ್ಥೆ ಮಾಡಲಾಯಿತು.

ಅರಮನೆ ಮಂಡಳಿ ವತಿಯಿಂದ ಆಯೋಜಿಸಿದ್ದ ಉಪಹಾರ ಕೂಟಕ್ಕೆ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ ಸೋಮಶೇಖರ್‌, ಸಂಸದ ಪ್ರತಾಪ್‌ ಸಿಂಹ ಉಪಸ್ಥಿತಿ ಇದ್ದರು. ಪ್ರತಿ ವರ್ಷ ಅರಮನೆ ಮಂಡಳಿ ವತಿಯಿಂದ ನಡೆಯುವ ಕಾರ್ಯಕ್ರಮ ಇದಾಗಿದ್ದು, ಮಾವುತ ಮತ್ತು ಕಾವಾಡಿಗಳ ಕುಟುಂಬ ಸದಸ್ಯರು ಭಾಗಿಯಾಗುತ್ತಾರೆ.

ಮಾವುತ ಹಾಗೂ ಕಾವಾಡಿ ಕುಟುಂಬಕ್ಕೆ ಸಚಿವ ಎಸ್.ಟಿ. ಸೋಮಶೇಖರ್ ಉಪಹಾರ ಬಡಿಸಿದರು. ಉಪ್ಪಿಟ್ಟು, ಕೇಸರಿ ಬಾತ್, ಇಡ್ಲಿ, ಉದ್ದಿನ‌ವಡೆ ಹಾಗೂ ಒಬ್ಬಟ್ಟು ತಯಾರಿಸಲಾಗಿತ್ತು. ಉಪಹಾರ ಬಡಿಸಿ ಮಾವುತ ಹಾಗೂ ಕಾವಾಡಿಗಳ ಜತೆ ಸಚಿವರು ಕುಳಿತು ಬೆಳಗಿನ ಉಪಹಾರ ಸೇವಿಸಿದರು.

ಚಾಮುಂಡಿ ಬೆಟ್ಟದಲ್ಲಿ ಸ್ಥಳ ಪರಿಶೀಲನೆ

ಈ ಬಾರಿಯ ದಸರಾ ಮಹೋತ್ಸವ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ ಹಿನ್ನೆಲೆ ಸಚಿವ ಎಸ್.ಟಿ.ಸೋಮಶೇಖರ್ ಸ್ಥಳ ಪರಿಶೀಲನೆ ನಡೆಸಿದರು. ಚಾಮುಂಡಿ ಬೆಟ್ಟದಲ್ಲಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಉದ್ಘಾಟನೆಗೆ 1,500 ಆಸನದ ವ್ಯವಸ್ಥೆ ಆಗಿದ್ದು, 500 ಜನರಿಗೆ ನಿಲ್ಲಲು ಸ್ಥಳಾವಕಾಶ ಇರಲಿದೆ. ಉದ್ಘಾಟನೆ ದಿನ ಚಾಮುಂಡಿ ದರ್ಶನಕ್ಕೆ ನಿರ್ಬಂಧ ಇರುವುದಿಲ್ಲ. ಕರ್ನಾಟಕ ಪೊಲೀಸ್ ಭದ್ರತೆ ವಿಷಯದಲ್ಲಿ ನಂ.1 ಸ್ಥಾನದಲ್ಲಿದೆ. ಭದ್ರತೆಯಲ್ಲಿ ಯಾವುದೇ ಲೋಪ ಇಲ್ಲವಿಲ್ಲದಂತೆ ನೋಡಿಕೊಳ್ಳಲಿದ್ದಾರೆ ಎಂದರು.

ಇದನ್ನೂ ಓದಿ | Mysore Dasara 2022 | ಈ ಬಾರಿ ಇಂಗ್ಲಿಷ್‌ನಲ್ಲಿ ಆಹ್ವಾನ ಪತ್ರಿಕೆ; ಒಂದು ದಿನ ಪುನೀತ್‌ಗೆ ಮೀಸಲು

Exit mobile version