ಮೈಸೂರು: ಮೈಸೂರಿನ ಬಸ್ ನಿಲ್ದಾಣವೊಂದರ ಮೇಲೆ ರಚಿಸಲಾಗಿದ್ದ ಮೂರು ಗುಂಬಜ್ ಆಕೃತಿಗಳ ಮೇಲೆ ರಾತ್ರೋರಾತ್ರಿ ಕಳಶ ಪ್ರತಿಷ್ಠಾಪನೆಯಾಗಿರುವುದು ಕಂಡುಬಂದಿದೆ.
ಮೈಸೂರು- ನಂಜನಗೂಡು- ಊಟಿ ರಸ್ತೆಯಲ್ಲಿರುವ ಬಸ್ ಶೆಲ್ಟರ್ ಮೇಲ್ಗಡೆ ಗುಂಬಜ್ ಮಾದರಿಯ ಮೂರು ಆಕೃತಿಗಳಿವೆ. ಶಾಸಕ ಎಸ್.ಎ ರಾಮದಾಸ್ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಈ ಶೆಲ್ಟರ್‌ನ ಗುಂಬಜ್‌ಗಳ ಮೇಲೆ ಇದೀಗ ಕಳಶ ಕಾಣಿಸಿಕೊಂಡಿದೆ.
ಗುಂಬಜ್ ಮಾದರಿ ಬಸ್ ಶೆಲ್ಟರ್‌ಗಳನ್ನು ಒಡೆದು ಹಾಕುವುದಾಗಿ ಮೈಸೂರು ಸಂಸದ ಪ್ರತಾಪ್ ಸಿಂಹ ಭಾನುವಾರ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ʼಟಿಪ್ಪು ನಿಜ ಕನಸುʼ ನಾಟಕ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ರೀತಿಯ ಶೆಲ್ಟರ್ ತೆರವುಗೊಳಿಸುವಂತೆ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದೇನೆ, ಇಲ್ಲವಾದರೆ ಜೆಸಿಬಿ ತೆಗೆದುಕೊಂಡು ಹೋಗಿ ಒಡೆದು ಹಾಕುವುದಾಗಿ ಎಚ್ಚರಿಸಿದ್ದರು.
ಜತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತ ಪೋಸ್ಟರ್‌ಗಳು ಕಾಣಿಸಿಕೊಂಡು ಶೇರ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಗುಂಬಜ್ ಮೇಲೆ ಕಳಶ ಕಾಣಿಸಿಕೊಂಡಿದೆ.
ಇದನ್ನೂ ಓದಿ | ಮೈಸೂರಿನಲ್ಲಿ ಟಿಪ್ಪು ಹೆಸರು ಇಲ್ಲದಂತೆ ಮಾಡುತ್ತೇನೆ: ಪ್ರತಾಪ್‌ಸಿಂಹ