ಟಿಪ್ಪು ವಿವಾದ| ಮೈಸೂರಿನ ಬಸ್‌ ನಿಲ್ದಾಣದ ಗುಂಬಜ್ ಮೇಲೆ ರಾತ್ರೋರಾತ್ರಿ ಕಳಶ ನಿರ್ಮಾಣ! - Vistara News

ಟಿಪ್ಪು ವಿವಾದ

ಟಿಪ್ಪು ವಿವಾದ| ಮೈಸೂರಿನ ಬಸ್‌ ನಿಲ್ದಾಣದ ಗುಂಬಜ್ ಮೇಲೆ ರಾತ್ರೋರಾತ್ರಿ ಕಳಶ ನಿರ್ಮಾಣ!

ಮೈಸೂರಿನ ಬಸ್‌ ನಿಲ್ದಾಣವೊಂದರ ಮೇಲೆ ರಚಿಸಲಾಗಿದ್ದ ಮೂರು ಗುಂಬಜ್‌ ಆಕೃತಿಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.
ಇದೀಗ ರಾತ್ರೋರಾತ್ರಿ ಕಳಶ ಪ್ರತಿಷ್ಠಾಪನೆಯಾಗಿರುವುದು ಕಂಡುಬಂದಿದೆ.

VISTARANEWS.COM


on

tippu
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೈಸೂರು: ಮೈಸೂರಿನ ಬಸ್‌ ನಿಲ್ದಾಣವೊಂದರ ಮೇಲೆ ರಚಿಸಲಾಗಿದ್ದ ಮೂರು ಗುಂಬಜ್‌ ಆಕೃತಿಗಳ ಮೇಲೆ ರಾತ್ರೋರಾತ್ರಿ ಕಳಶ ಪ್ರತಿಷ್ಠಾಪನೆಯಾಗಿರುವುದು ಕಂಡುಬಂದಿದೆ.

ಮೈಸೂರು- ನಂಜನಗೂಡು- ಊಟಿ ರಸ್ತೆಯಲ್ಲಿರುವ ಬಸ್ ಶೆಲ್ಟರ್ ಮೇಲ್ಗಡೆ ಗುಂಬಜ್‌ ಮಾದರಿಯ ಮೂರು ಆಕೃತಿಗಳಿವೆ. ಶಾಸಕ ಎಸ್.ಎ ರಾಮದಾಸ್ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಈ ಶೆಲ್ಟರ್‌ನ ಗುಂಬಜ್‌ಗಳ ಮೇಲೆ ಇದೀಗ ಕಳಶ ಕಾಣಿಸಿಕೊಂಡಿದೆ.

tippu
tippu

ಗುಂಬಜ್ ಮಾದರಿ ಬಸ್ ಶೆಲ್ಟರ್‌ಗಳನ್ನು ಒಡೆದು ಹಾಕುವುದಾಗಿ ಮೈಸೂರು ಸಂಸದ ಪ್ರತಾಪ್ ಸಿಂಹ ಭಾನುವಾರ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ʼಟಿಪ್ಪು ನಿಜ ಕನಸುʼ ನಾಟಕ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ರೀತಿಯ ಶೆಲ್ಟರ್ ತೆರವುಗೊಳಿಸುವಂತೆ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದೇನೆ, ಇಲ್ಲವಾದರೆ ಜೆಸಿಬಿ ತೆಗೆದುಕೊಂಡು ಹೋಗಿ ಒಡೆದು ಹಾಕುವುದಾಗಿ ಎಚ್ಚರಿಸಿದ್ದರು.

ಜತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತ ಪೋಸ್ಟರ್‌ಗಳು ಕಾಣಿಸಿಕೊಂಡು ಶೇರ್‌ ಆಗಿದ್ದವು. ಈ ಹಿನ್ನೆಲೆಯಲ್ಲಿ ಗುಂಬಜ್‌ ಮೇಲೆ ಕಳಶ ಕಾಣಿಸಿಕೊಂಡಿದೆ.

ಇದನ್ನೂ ಓದಿ | ಮೈಸೂರಿನಲ್ಲಿ ಟಿಪ್ಪು ಹೆಸರು ಇಲ್ಲದಂತೆ ಮಾಡುತ್ತೇನೆ: ಪ್ರತಾಪ್‌ಸಿಂಹ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಕರ್ನಾಟಕ

ಟಿಪ್ಪು ವಿವಾದ | ಟಿಪ್ಪು ನಿಜ ಕನಸುಗಳು ಪುಸ್ತಕದ ಮಾರಾಟಕ್ಕೆ ತಡೆಯಾಜ್ಞೆ ವಿಧಿಸಿದ ಪ್ರಕರಣದ ವಿಚಾರಣೆ ಇಂದು, ತೆರವಾಗುತ್ತಾ?

ಅಡ್ಡಂಡ ಕಾರ್ಯಪ್ಪ ಅವರ ಟಿಪ್ಪು ನಿಜ ಕನಸುಗಳು ನಾಟಕ ಪುಸ್ತಕ ಮಾರಾಟ ಮತ್ತು ಹಂಚಿಕೆಗೆ ವಿಧಿಸಿದ್ದ ತಾತ್ಕಾಲಿಕ ತಡೆಯಾಜ್ಞೆಯ ಕುರಿತ ವಿಚಾರಣೆ ಇಂದು ಕೋರ್ಟ್‌ನಲ್ಲಿ ನಡೆಯಲಿದೆ.

VISTARANEWS.COM


on

court temperorily stays sales of tipu nija kansugalu book
Koo

ಬೆಂಗಳೂರು: ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರು ರಚಿಸಿರುವ ʻಟಿಪ್ಪು ನಿಜ ಕನಸುಗಳುʼ ಪುಸ್ತಕದ ಮಾರಾಟ ಮತ್ತು ಹಂಚಿಕೆಗೆ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ವಿಧಿಸಿದ್ದ ತಾತ್ಕಾಲಿಕ ತಡೆಯಾಜ್ಞೆಯ ಮುಂದುವರಿದ ವಿಚಾರಣೆ ಡಿಸೆಂಬರ್‌ ೫ (ಸೋಮವಾರ) ನಡೆಯಲಿದೆ.

ಬೆಂಗಳೂರು ಜಿಲ್ಲಾ ವಕ್ಫ್‌ ಮಂಡಳಿಯ ಮಾಜಿ ಅಧ್ಯಕ್ಷ ರಫಿವುಲ್ಲಾ ಬಿ.ಎಸ್‌ ಅವರು ಸಲ್ಲಿಸಿದ್ದ ದಾವೆಯನ್ನು ಶನಿವಾರ ವಿಚಾರಣೆ ನಡೆಸಿದ 14ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಜೆ.ಆರ್‌ ಮೆಂಡೋನ್ಸಾ ಅವರು ಮಧ್ಯಂತರ ಆದೇಶ ವಿಸ್ತರಿಸಿ, ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಿದ್ದರು.

“ಮುಂದಿನ ವಿಚಾರಣೆಯ ದಿನಾಂಕದಂದು ತಪ್ಪದೇ ವಾದ ಮಂಡನೆ ಮಾಡುವಂತೆ ನಿರ್ದೇಶಿಸಿ, ಮಧ್ಯಂತರ ಆದೇಶ ವಿಸ್ತರಣೆ ಮಾಡುವುದರಿಂದ ಪ್ರತಿವಾದಿಗಳಿಗೆ ಯಾವುದೇ ತೆರನಾದ ಪೂರ್ವಾಗ್ರಹ ಉಂಟಾಗುವುದಿಲ್ಲ ಎಂಬುದು ನ್ಯಾಯಾಲಯದ ಅಭಿಪ್ರಾಯವಾಗಿದೆ. ಹೀಗಾಗಿ, ಫಿರ್ಯಾದಿ ಸಲ್ಲಿಸಿರುವ ಮೂರನೇ ಮಧ್ಯಪ್ರವೇಶ ಅರ್ಜಿಯನ್ನು ಮಾನ್ಯ ಮಾಡಲಾಗಿದೆ. 21.11.2022ರಂದು ಮಾಡಲಾಗಿರುವ ಮಧ್ಯಂತರ ಆದೇಶವು ಮುಂದಿನ ವಿಚಾರಣೆಯವರೆಗೆ ಅಸ್ತಿತ್ವದಲ್ಲಿರಲಿದೆ. ಫಿರ್ಯಾದಿಯು ಯಾವುದೇ ಕಾರಣಕ್ಕೂ ತಪ್ಪದೇ ಮುಂದಿನ ವಿಚಾರಣೆಯಲ್ಲಿ ಒಂದನೇ ಮಧ್ಯಪ್ರವೇಶ ಅರ್ಜಿಗೆ ಸಂಬಂಧಿಸಿದಂತೆ ವಾದಿಸಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿತ್ತು.

“ಫಿರ್ಯಾದಿಯ ವಾದ ಆಲಿಸಿದ ಬಳಿಕ ಪ್ರತಿವಾದಿಗಳ ಪರ ವಕೀಲರ ಆಕ್ಷೇಪಣೆಯನ್ನು ನಿರ್ಧರಿಸಲಾಗುವುದು. ಇಲ್ಲಿಯವರೆಗೆ ಫಿರ್ಯಾದಿಗೆ ಮಧ್ಯಂತರ ಆದೇಶದ ಲಾಭ ದೊರೆತಿದೆ. ನ್ಯಾಯಾಲಯದ ಮುಂದಿನ ಕೆಲಸದ ದಿನದಂದು ವಾದ ಮಂಡಿಸುವುದಾಗಿ ಫಿರ್ಯಾದಿ ಹೇಳಿದ್ದಾರೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿತ್ತು.

ಫಿರ್ಯಾದಿ ಪರ ವಕೀಲರು ನಾಗರಿಕ ಪ್ರಕ್ರಿಯಾ ಸಂಹಿತೆ (ಸಿಪಿಸಿ) ಸೆಕ್ಷನ್‌ 151ರ ಅಡಿ ಮಧ್ಯಂತರ ಆದೇಶ ವಿಸ್ತರಿಸುವಂತೆ ಕೋರಿ ಮೂರನೇ ಮಧ್ಯಪ್ರವೇಶ ಅರ್ಜಿ ಸಲ್ಲಿಸಿದರು. ಇದಕ್ಕೆ ಪ್ರತಿವಾದಿಗಳ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

“ಫಿರ್ಯಾದಿ ಹೂಡಿರುವ ದಾವೆಯೇ ಮಾನ್ಯವಾಗುವುದಿಲ್ಲ. ಮುಖ್ಯ ದಾವೆ ಮತ್ತು ಮಧ್ಯಂತರ ಅರ್ಜಿಯಲ್ಲಿನ ಕೋರಿಕೆಗಳು ನಿರರ್ಥಕವಾಗಿವೆ. ಅಲ್ಲದೇ, ನಿರ್ದಿಷ್ಟ ಕಾಲಾವಧಿಯಲ್ಲಿ ನ್ಯಾಯಾಲಯದ ನಿರ್ದೇಶನ ಪಾಲಿಸದಿರುವುದರಿಂದ ಮಧ್ಯಂತರ ಆದೇಶವು ಅಸ್ತಿತ್ವ ಕಳೆದುಕೊಂಡಿದೆ” ಎಂದು ಪ್ರತಿವಾದಿಗಳ ಪರ ವಕೀಲರು ವಾದಿಸಿದರು.

“ಟಿಪ್ಪು ನಿಜ ಕನಸುಗಳು” ಕೃತಿ ರಚಿಸಿರುವ ಅಡ್ಡಂಡ ಕಾರ್ಯಪ್ಪ, ಪುಸ್ತಕ ಪ್ರಕಟಿಸಿರುವ ಅಯೋಧ್ಯಾ ಪ್ರಕಾಶನ, ಪುಸ್ತಕ ಮುದ್ರಿಸಿರುವ ರಾಷ್ಟ್ರೋತ್ಥಾನ ಮುದ್ರಣಾಲಯವನ್ನು ಪುಸ್ತಕ ಹಂಚಿಕೆ ಮತ್ತು ಮಾರಾಟ ಮಾಡದಂತೆ ನ್ಯಾಯಾಲಯವು ಕಳೆದ ವಿಚಾರಣೆಯಲ್ಲಿ ನಿರ್ಬಂಧಿಸಿತ್ತು.

ಇದನ್ನೂ ಓದಿ | ಟಿಪ್ಪು ಬಗ್ಗೆ ಕಾರ್ನಾಡ್‌ ನಾಟಕ ಬರೆಯಬಹುದಾದರೆ ನಾನ್ಯಾಕೆ ಬರೆಯಬಾರದು: ಅಡ್ಡಂಡ ಕಾರ್ಯಪ್ಪ ಪ್ರಶ್ನೆ

Continue Reading

ಕರ್ನಾಟಕ

ಶೆಲ್ಟರ್‌ ಗುಂಬಜ್‌ | ಪ್ರತಾಪ್‌ ಸಿಂಹ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಎಂಪಿಯಾಗಲು ನಾಲಾಯಕ್‌ ಎಂದ ಸಲೀಂ ಅಹಮದ್‌

ಮೈಸೂರಿನಲ್ಲಿ ಎದ್ದಿರುವ ಶೆಲ್ಟರ್‌ ಗುಂಬಜ್‌ ವಿವಾದಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಸಿಟ್ಟಿಗೆದ್ದಿದ್ದಾರೆ. ಅವರ ಆಕ್ರೋಶದ ಗುರಿ ಸಂಸದ ಪ್ರತಾಪ್‌ ಸಿಂಹ ಅವರ ಹೇಳಿಕೆಗಳು.

VISTARANEWS.COM


on

saleem ahamad
Koo

ಗದಗ: ಮೈಸೂರು-ಕೊಡಗು ಸಂಸದರಾಗಿರುವ ಪ್ರತಾಪ್‌ ಸಿಂಹ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರು ಸಂಸದರಾಗಲು ನಾಲಾಯಕ್‌ ಎಂದಿದ್ದಾರೆ ಕಾಂಗ್ರೆಸ್‌ ನಾಯಕ, ಮೇಲ್ಮನೆ ಸದಸ್ಯ ಸಲೀಂ ಅಹ್ಮದ್‌.

ಮೈಸೂರಿನಲ್ಲಿ ಬಸ್‌ ಶೆಲ್ಟರ್‌ನ ಮೇಲೆ ಗುಂಬಜ್‌ ಮಾದರಿಯ ನಿರ್ಮಾಣಗಳನ್ನು ಮಾಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ಪ್ರತಾಪ್‌ ಸಿಂಹ ಅವರು ನೀಡುತ್ತಿರುವ ಹೇಳಿಕೆಗಳಿಗೆ ಸಂಬಂಧಿಸಿ ಅವರು ಪ್ರತಿಕ್ರಿಯಿಸಿದ್ದಾರೆ.

ಗದಗ ಜಿಲ್ಲೆ‌ ಮುಂಡರಗಿ ತಾಲೂಕಿನ ಕಲಕೇರಿ‌ ಗ್ರಾಮದಲ್ಲಿ ಮಾತನಾಡಿದ ಅವರು, ಗುಂಬಜ್‌ ಒಡೆಯುತ್ತೇವೆ ಎಂಬಿತ್ಯಾದಿ ಹೇಳಿಕೆಗಳ ಮೂಲಕ ನೀವು ಸಮಾಜಕ್ಕೆ ಏನು‌ ಸಂದೇಶ ಕೊಡ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ʻʻಬೆಂಗಳೂರಿನಲ್ಲಿ, ದೆಹಲಿಯಲ್ಲಿ ಗುಂಬಜ್ ರೀತಿಯಲ್ಲಿ ಕಟ್ಟಡಗಳಿವೆ. ಎಲ್ಲ ಗುಂಬಜ್ ರೀತಿಯ ಕಟ್ಟಡಗಳನ್ನು ಒಡೆಯುತ್ತಾರಾ‌ ಎಂಪಿ, ಒಬ್ಬ ಸಂಸದನಾಗಿ ಇಂಥ ಮಾತು ಆಡಬಾರದು..ಜನ ನಗ್ತಾರೆʼʼ ಎಂದು ಸಲೀಂ ಹೇಳಿದರು.

ʻʻಕರ್ನಾಟಕ ಇತಿಹಾಸದಲ್ಲಿಯೇ ಇಂಥ ಘಟನೆ ಯಾವತ್ತೂ ಆಗಿಲ್ಲ. ಸರ್ಕಾರಕ್ಕೆ ಯಾವುದೇ‌ ಸಿದ್ಧಾಂತ,ವಿಚಾರಗಳಿಲ್ಲ. ಭ್ರಷ್ಟಾಚಾರದಲ್ಲಿ ಉದಯವಾಗಿರೋ‌ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿದೆʼʼ ಎಂದು ವಾಗ್ದಾಳಿ ನಡೆಸಿದರು ಸಲೀಂ ಅಹ್ಮದ್‌.

bus shelter gumbz
bus shelter gumbz

ಕೇಸರಿ ಬಣ್ಣ ನಮ್ಮ ಧ್ವಜದಲ್ಲೂ ಇದೆ.. ಆದರೆ,
ವಿವೇಕ ಕೊಠಡಿ ಹೆಸರಿನಲ್ಲಿ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲು ಸರ್ಕಾರ ಮುಂದಾಗಿದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ʻʻಸರ್ಕಾರಿ ಶಾಲೆಗಳಲ್ಲಿ ಟೀಚರ್‌ಗಳಿಲ್ಲ.. ಕೊಠಡಿಗಳಿಲ್ಲ.. ಸರಿಯಾದ‌ ಸಮವಸ್ತ್ರ ಇಲ್ಲ.. ಮಧ್ಯಾಹ್ನ ಬಿಸಿಯೂಟ ಸಿಗ್ತಾಯಿಲ್ಲ.. ಇದೆಲ್ಲ ಬಿಟ್ಟು ಬಣ್ಣದ ಹಿಂದೆ ಬಿದ್ದಿದ್ದಾರೆʼʼ ಎಂದರು. ʻʻನಾವೂ ಸಹ‌ ಕೇಸರಿ‌ ಬಣ್ಣಕ್ಕೆ ಗೌರವ ಕೊಡ್ತೇವೆ.. ನಮ್ಮ ಕಾಂಗ್ರೆಸ್‌ ಧ್ವಜದಲ್ಲೂ ಕೇಸರಿ‌ ಇದೆ. ನಮ್ಮ ದೇಶದ ಧ್ವಜದಲ್ಲೂ ಕೇಸರಿ ಬಣ್ಣ ಇದೆ. ಆದರೆ ಇವರು‌ ಕೇಸರೀಕರಣ ಮಾಡೋದಕ್ಕೆ ಹೊರಟಿದ್ದಾರೆʼʼ ಎಂದು ಆಪಾದಿಸಿದರು. ʻʻಸಣ್ಣ‌ ಮಕ್ಕಳಿಗೆ ಈ ರೀತಿ ಮಾಡುವ ಬದಲು ಒಳ್ಳೆ ಶಿಕ್ಷಣ ನೀಡಿʼʼ ಎಂದು ಕಿವಿಮಾತು ಹೇಳಿದರು.

ʻʻಶಾಲೆಗಳ ಅಭಿವೃದ್ಧಿ ಮಾಡೋ ಬದಲು ಭ್ರಷ್ಟಾಚಾರ ಮಾಡುತ್ತಿದ್ದೀರಿ. ಸರ್ಕಾರದಲ್ಲಿ‌ ಭ್ರಷ್ಟಾಚಾರ ತಾಂಡವಾಡುತ್ತಿದೆ. 40% ಕಮೀಷನ್ ಸರ್ಕಾರ ಅಂತ‌ ಇಡೀ ಜಗಜ್ಜಾಹೀರಾಗಿದೆ. ಪ್ರಪಂಚದಲ್ಲೇ ಇದರ ಬಗ್ಗೆ ಚರ್ಚೆಯಾಗುತ್ತಿದೆ. 40 % ಕಮೀಷನ್ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಹುಬ್ಬಳ್ಳಿ ಗುತ್ತಿಗೆದಾರರೊಬ್ಬರು ರಾಷ್ಟ್ರಪತಿಗಳಿಗೆ ದಯಾಮರಣಕ್ಕೆ ಮನವಿ ಸಲ್ಲಿಸಿದಾರೆ. ಅದರ ಬಗ್ಗೆ ಮಾತನಾಡುವ ಧೈರ್ಯ ಈ‌ ಎಂಪಿಗಿದೆಯಾʼʼ ಎಂದು ಪ್ರಶ್ನಿಸಿದ್ದಾರೆ ಸಲೀಂ ಅಹಮದ್‌.

ಇದನ್ನೂ ಓದಿ | ಶೆಲ್ಟರ್‌ನಲ್ಲಿ ಗುಂಬಜ್‌!| ಇನ್ನು 2 ದಿನದಲ್ಲಿ ಬಸ್‌ ಶೆಲ್ಟರ್‌ ಮೇಲಿನ ಗುಂಬಜ್‌ ತೆಗೆಯದಿದ್ದರೆ ನಾನೇ ಒಡೀತೇನೆ ಎಂದ ಪ್ರತಾಪ್ ಸಿಂಹ

Continue Reading

ಕರ್ನಾಟಕ

ಟಿಪ್ಪು ವಿವಾದ| ಟಿಪ್ಪು ಸುಲ್ತಾನ್‌ ಕೈಯಿಂದ ಆ ಮೂರು ದೇವಾಲಯಗಳನ್ನು ರಕ್ಷಿಸಿದ್ದು ಅವನ ಪತ್ನಿ?

ಟಿಪ್ಪು ಸುಲ್ತಾನ್‌ ಹಲವಾರು ದೇವಾಲಯಗಳನ್ನು ( ಟಿಪ್ಪು ವಿವಾದ ) ಒಡೆದು ಹಾಕಿದ್ದರೂ ಮೂರು ದೇವಾಲಯಗಳನ್ನು ಉಳಿಸಿರುವ ಬಗ್ಗೆ ಸಾಕಷ್ಟು ಕಥೆಗಳಿದ್ದವು. ಈಗ ರಂಗಾಯಣ ನಿರ್ದೇಶಕರಾಗಿರುವ ಅಡ್ಡಂಡ ಸಿ ಕಾರ್ಯಪ್ಪ ಅವರು ಬರೆದಿರುವ ನಾಟಕದಲ್ಲಿ ಅದಕ್ಕೆ ಕೊಟ್ಟಿರುವ ಕಾರಣದ ವಿವರ ಇಲ್ಲಿದೆ.

VISTARANEWS.COM


on

court temperorily stays sales of tipu nija kansugalu book
Koo

ಮೈಸೂರು: ಮೈಸೂರನ್ನು ಆಳಿದ ಟಿಪ್ಪು ಸುಲ್ತಾನ್‌ ( ಟಿಪ್ಪು ವಿವಾದ ) ತನ್ನ ಆಡಳಿತಾವಧಿಯಲ್ಲಿ ಹಲವಾರು ದೇವಾಲಯಗಳನ್ನು ನಾಶ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಆದರೂ ಆತ ನಂಜನಗೂಡಿನ ಶ್ರೀ ನಂಜುಂಡೇಶ್ವರ, ಶ್ರೀರಂಗಪಟ್ಟಣದ ಶ್ರೀ ರಂಗನಾಥ, ಮೇಲುಕೋಟೆಯ ಚಲುವನಾರಾಯಣ ದೇವಾಲಯವನ್ನು ಮುಟ್ಟಿಲ್ಲ. ಇದಕ್ಕೆ ಕಾರಣವೇನು ಎನ್ನುವುದರ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳಿವೆ.

ರಂಗಾಯಣ ನಿರ್ದೇಶಕರಾಗಿರುವ ಅಡ್ಡಂಡ ಸಿ. ಕಾರ್ಯಪ್ಪ ಅವರು ಬರೆದಿರುವ ʻಟಿಪ್ಪು ನಿಜ ಕನಸುʼ ನಾಟಕದಲ್ಲಿ ಈ ಬಗ್ಗೆ ದೃಶ್ಯವೊಂದನ್ನು ಸಂಯೋಜಿಸಿದ್ದು, ಇದನ್ನು ಉಳಿಸಿದ್ದು ಟಿಪ್ಪು ಸುಲ್ತಾನ್‌ ಪತ್ನಿ ರುಕಿಯಾ ಬಾನು ಬೇಗಂ ಎಂದು ಹೇಳುತ್ತಾರೆ. ಟಿಪ್ಪು ಈ ದೇವಸ್ಥಾನಗಳನ್ನು ನಾಶ ಮಾಡುವುದಿಲ್ಲ ಎಂದು ಪತ್ನಿಗೆ ಭಾಷೆ ಕೊಟ್ಟಿದ್ದ. ಹೀಗಾಗಿ ಆತ ಅದಕ್ಕೆ ಏನೂ ತೊಂದರೆ ಮಾಡಿಲ್ಲ ಎಂದಿದ್ದಾರೆ.

ʻʻಟಿಪ್ಪು ನಿಜ ಕನಸುʼ ನಾಟಕ ಕೃತಿಯ ೭೧ನೇ ಪುಟದಲ್ಲಿ ಟಿಪ್ಪು ಮತ್ತು ರುಕಿಯಾ ಬಾನು ನಡುವಿನ ಸಂಭಾಷಣೆ ಇದೆ. ರುಕಿಯಾ ಬೇಗಂ ಅನಾರೋಗ್ಯಕ್ಕೆ ಒಳಗಾಗಿ ಹಾಸಿಗೆ ಹಿಡಿದಿರುತ್ತಾಳೆ. ಆಗ ತನ್ನ ಬಳಿ ಬರುವ ಟಿಪ್ಪುವಿಗೆ ಆಕೆ ಸಾಕಷ್ಟು ಬುದ್ಧಿವಾದವನ್ನು ಹೇಳುತ್ತಾಳೆ.

ʻʻನೋಡಿ, ಇದು ಹಿಂದೂ ಪ್ರಾಬಲ್ಯದ ರಾಜ್ಯ, ನಾಳೆ ಅವರೆಲ್ಲಾ ಒಂದಾಗಿ ದಂಗೆ ಎದ್ದರೆ ಈ ಸಿಂಹಾಸನ ಉಳಿಯುವುದಿಲ್ಲ. ಹಿಂದೂ ದೇವಸ್ಥಾನ ಹನುಮಾನ್ ದೇವಾಲಯವನ್ನೇ ಜಾಮಿಯಾ ಮಸೀದಿ ಮಾಡಿದ್ದೀರಿ! ಚಿತ್ರದುರ್ಗದ ಪಾಪದ ಜನರ ಉಚ್ಚಂಗಮ್ಮನ ಗುಡಿಯನ್ನು ಕೆಡವಿ ಮಸೀದಿ ಕಟ್ಟಿಸಿದ್ದೀರಿ. ನರಸಿಂಹಸ್ವಾಮಿ ಆಲಯದ ರಾಜಗೋಪುರ, ಶ್ರೀ ಗಂಗಾಧರೇಶ್ವರನ ಗೋಪುರ, ಮೈಸೂರು ಅರಮನೆಯ ತ್ರಿನಯನೇಶ್ವರ, ವೆಂಕಟರಮಣಸ್ವಾಮಿ ದೇವಾಲಯಗಳ ಗೋಪುರವನ್ನು ಕೆಡವಿ ಹಾಕಿದ್ದೀರಿ. ಇನ್ನು ಸಾಕು, ನನ್ನ ಕೊನೆಯ ಆಸೆ ಶ್ರೀರಂಗಪಟ್ಟಣ, ಮೇಲುಕೋಟೆ, ನಂಜನಗೂಡು ದೇವಸ್ಥಾನಗಳನ್ನು ಮುಟ್ಟೋದಿಲ್ಲ.. ಅಂತ ಭಾಷೆ ಕೊಡಿ! ಇದನ್ನೊಂದು ನಡೆಸಿಕೊಡಿ ದಯಮಾಡಿʼʼ ಎನ್ನುತ್ತಾ ಕೆಮ್ಮುತ್ತಾಳೆ. ಸ್ವಲ್ಪ ಮಟ್ಟಿಗೆ ಪ್ರತಿರೋಧ ತೋರುವ ಟಿಪ್ಪು ಅಂತಿಮವಾಗಿ ಆಕೆಯ ಮಾತಿಗೆ ಒಪ್ಪುತ್ತಾನೆ, ಭಾಷೆ ಕೊಡುತ್ತಾನೆ. ʻʻನನ್ನ ಕನಸಿನ ಇಸ್ಲಾಂ ರಾಜ್ಯದ ಸ್ಥಾಪನೆ ನಿರ್ಧಾರ ಬದಲಾಗದುʼ ಎನ್ನುವ ಸಾಲಿನೊಂದಿಗೆ ದೃಶ್ಯ ಅಂತ್ಯವಾಗುತ್ತದೆ.

ಟಿಪ್ಪು ಸುಲ್ತಾನ್‌ ಹಲವಾರು ದೇವಸ್ಥಾನಗಳನ್ನು ಒಡೆದಿದ್ದ, ಆದರೆ, ಕೆಲವು ದೇವಸ್ಥಾನಗಳಿಗೆ ಒಳಿತನ್ನೂ ಮಾಡಿದ್ದ ಎಂದು ಹೇಳಲಾಗುತ್ತಿದೆ. ಈ ರೀತಿ ಮಾಡಿದ್ದೇಕೆ ಎನ್ನುವುದಕ್ಕೆ ನಾಟಕದಲ್ಲಿ ದೃಶ್ಯವೊಂದರ ಮೂಲಕ ಉತ್ತರ ನೀಡಲಾಗಿದೆ.

ಕೃತಿಯ ೭೧ ಮತ್ತು ೭೨ನೇ ಪುಟದಲ್ಲಿರುವ ಸಂಭಾಷಣೆ ಈ ರೀತಿ ಇದೆ.
ಟಿಪ್ಪು: ಬೇಗಂ, ಅವರು ಹುಲಿಯ ಮಕ್ಕಳು ಹುಲಿಯ ಹೊಟ್ಟೆಯಲ್ಲಿ ನರಿಗಳು ಹುಟ್ಟುವುದಿಲ್ಲ. ನಾಳೆ ಇತಿಹಾಸ ಟಿಪ್ಪುವಿನ ಮಕ್ಕಳು ʻಹೇಡಿಗಳುʼ ಎನ್ನಬಾರದು, ಹಿಂದೂಗಳ ಕಥೆಯಂತೆ ನನ್ನ ಮಕ್ಕಳು ಉತ್ತರ ಕುಮಾರ ಆಗಬಾರದು.

ಬೇಗಂ: ಅರ್ಥವಿಲ್ಲದ ಮಾತುಗಳು ಕೇವಲ ಗಾಳಿಗೆ ಗುದ್ದು ಅಷ್ಟೇ, ಬನ್ನಿ.. ಮಲಗಿ, ಸಾಕಷ್ಟು ಹೊತ್ತಾಗಿದೆ. ನಾನು ನಿಮಗಾಗಿ, ಈ ರಾಜ್ಯದ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ.

ಟಿಪ್ಪು: (ವ್ಯಂಗ್ಯವಾಗಿ) ಪ್ರಾರ್ಥಿಸು! ಪ್ರಾರ್ಥಿಸು! (ಮೌನ, ಸಂಗೀತ ಕೇಳಿಸುತ್ತದೆ)
(ಬೇಗಂ ಹತ್ತಿರ ಬಂದು ಅವಳ ಕೈಹಿಡಿದು ತಲೆ ನೇವರಿಸುತ್ತಾ) ನಿನ್ನ ಆರೋಗ್ಯ ನನಗೆ ಮುಖ್ಯ ಬೇಗಂ. ನೀನು ನನ್ನ ಶಕ್ತಿ. ನನ್ನ ಪ್ರೀತಿಯ ರುಕಿಯಾ! ನಿನ್ನ ಹೃದಯ ಕೋಮಲವಾದದ್ದು, ಕಣ್ಣೀರು ಕಂಡಾಗ ಕರಗುತ್ತದೆ. ನನ್ನ ಹಿತ ಬಯಸಿಯೇ ಎಲ್ಲವನ್ನೂ ಹೇಳಿದ್ದೀಯಾ! ಆದರೆ, ಬೇಗಂ ನಾನು ತುಂಬಾ ದೂರ ಕ್ರಮಿಸಿದ್ದೇನೆ. ಮತ್ತೆ ವಾಪಸ್ಸು ಬರಲು ಸಾಧ್ಯವಿಲ್ಲ. ನನ್ನ ಕನಸಿನತ್ತ, ನಿಶ್ಚಿತ ಗುರಿಯತ್ತ ನನ್ನ ಧರ್ಮದತ್ತ, ನನ್ನ ಇಸ್ಲಾಂನತ್ತ. ಇದು ಜಿಹಾದ್!

ಬೇಗಂ: ನೋಡಿ, ಇದು ಹಿಂದೂ ಪ್ರಾಬಲ್ಯದ ರಾಜ್ಯ, ನಾಳೆ ಅವರೆಲ್ಲಾ ಒಂದಾಗಿ ದಂಗೆ ಎದ್ದರೆ ಈ ಸಿಂಹಾಸನ ಉಳಿಯುವುದಿಲ್ಲ. ಹಿಂದೂ ದೇವಸ್ಥಾನ ಹನುಮಾನ್ ದೇವಾಲಯವನ್ನೇ ಜಾಮಿಯಾ ಮಸೀದಿ ಮಾಡಿದ್ದೀರಿ! ಚಿತ್ರದುರ್ಗದ ಪಾಪದ ಜನರ ಉಚ್ಚಂಗಮ್ಮನ ಗುಡಿಯನ್ನು ಕೆಡವಿ ಮಸೀದಿ ಕಟ್ಟಿಸಿದ್ದೀರಿ. ನರಸಿಂಹಸ್ವಾಮಿ ಆಲಯದ ರಾಜಗೋಪುರ, ಶ್ರೀ ಗಂಗಾಧರೇಶ್ವರನ ಗೋಪುರ, ಮೈಸೂರು ಅರಮನೆಯ ತ್ರಿನಯನೇಶ್ವರ, ವೆಂಕಟರಮಣಸ್ವಾಮಿ ದೇವಾಲಯಗಳ ಗೋಪುರವನ್ನು ಕೆಡವಿ ಹಾಕಿದ್ದೀರಿ. ಇನ್ನು ಸಾಕು, ನನ್ನ ಕೊನೆಯ ಆಸೆ ಶ್ರೀರಂಗಪಟ್ಟಣ, ಮೇಲುಕೋಟೆ, ನಂಜನಗೂಡು ದೇವಸ್ಥಾನಗಳನ್ನು ಮುಟ್ಟೋದಿಲ್ಲ.. ಅಂತ ಭಾಷೆ ಕೊಡಿ! ಇದನ್ನೊಂದು ನಡೆಸಿಕೊಡಿ… ದಯಮಾಡಿ… (ಕೆಮ್ಮುತ್ತಾಳೆ.)

ಟಿಪ್ಪು: ಏನು ಹೇಳುತ್ತಿದ್ದೀಯಾ? ಇದೇನು ಮುಸ್ಲಿಮರ ಪ್ರಾರ್ಥನಾ ಸ್ಥಳಗಳೇ? ಕಾಫಿರರ ಮಂದಿರಗಳು, ಅರ್ಥ ಮಾಡಿಕೋ, ನನ್ನನ್ನು ಧರ್ಮಭ್ರಷ್ಟನನ್ನಾಗಿ ಮಾಡಬೇಡ!

ಬೇಗಂ: ನನ್ನ ಸಾವನ್ನು ನೀವು ನಿರೀಕ್ಷಿಸುತ್ತಿದ್ದೀರಾ? ಒಳ್ಳೆಯ ಮಾತುಗಳು ನಿಮಗೆ ಹರಾಮ್ ಆಗಿದೆ. ನಿಮ್ಮಿಷ್ಟದಂತೆ ಮಾಡಿ. ಆದರೆ ಇದನ್ನೆಲ್ಲಾ ನೋಡುವುದಕ್ಕಿಂತ ನನಗೆ ಬೇಗ ಸಾವು ಬರಲಿ! ಅಲ್ಲಾ… ಓ ಪರವಾರಧಿಕಾ‌ರ್! (ಟಿಪ್ಪು ಮೌನ)

ಟಿಪ್ಪು: ಆಯಿತು ನಿನಗಾಗಿ ಈ ಮೂರು ದೇವಾಲಯಗಳನ್ನು ಮುಟ್ಟೋದಿಲ್ಲ ಇದು ನಿನಗಾಗಿ ಮಾತ್ರ! ನಿನ್ನ ಆರೋಗ್ಯಕ್ಕಾಗಿ ಮಾತ್ರ ಆದರೆ ನನ್ನ ಕನಸಿನ ಇಸ್ಲಾಂ ರಾಜ್ಯದ ಸ್ಥಾಪನೆ ಬದಲಾಗದು!
(ಹಿನ್ನೆಲೆಯಲ್ಲಿ ಸಂಗೀತ ಕೇಳಿಸುತ್ತದೆ. ರಂಗದಲ್ಲಿ ಕತ್ತಲಾಗುತ್ತದೆ.)

Continue Reading

ಟಿಪ್ಪು ವಿವಾದ

ಮೈಸೂರಿನಲ್ಲಿ ಟಿಪ್ಪು ಹೆಸರು ಇಲ್ಲದಂತೆ ಮಾಡುತ್ತೇನೆ: ಪ್ರತಾಪ್‌ಸಿಂಹ

ಇನ್ನು ಮುಂದೆ ಮೈಸೂರಿನಲ್ಲಿ ಗುಂಬಜ್ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸುವಂತಿಲ್ಲ, ನಿರ್ಮಿಸಿದ್ದರೆ ಅದನ್ನು ಒಡೆಸಿ ಹಾಕುತ್ತೇವೆ ಎಂದೂ ಪ್ರತಾಪ್‌ಸಿಂಹ ಎಚ್ಚರಿಸಿದ್ದಾರೆ.

VISTARANEWS.COM


on

prathap simha
Koo

ಮೈಸೂರು: ಮೈಸೂರಲ್ಲಿ ಟಿಪ್ಪು ಹೆಸರು ಇಲ್ಲದಂತೆ ಮಾಡುತ್ತೇನೆ. ಟಿಪ್ಪುವಿನ ಯಾವ ಗುರುತೂ ಸಿಗದ ಹಾಗೆ ಮಾಡುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಅಬ್ಬರಿಸಿದ್ದಾರೆ. ಇನ್ನು ಮುಂದೆ ಮೈಸೂರಿನಲ್ಲಿ ಗುಂಬಜ್ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸುವಂತಿಲ್ಲ, ನಿರ್ಮಿಸಿದ್ದರೆ ಅದನ್ನು ಒಡೆಸಿ ಹಾಕುತ್ತೇವೆ ಎಂದೂ ಪ್ರತಾಪ್‌ ಎಚ್ಚರಿಸಿದ್ದಾರೆ.

ಟಿಪ್ಪು ವೀರನಲ್ಲ. ಅವನು ಯಾವ ಯುದ್ಧದಲ್ಲೂ ಹೋರಾಡಿಲ್ಲ. ಯಾವ ಯುದ್ಧವನ್ನೂ ಗೆಲ್ಲಲಿಲ್ಲ. ಅಂಥವನು ಹೇಗೆ ಸುಲ್ತಾನ ಆಗಲು ಸಾಧ್ಯ? ಅವನು ಬರಿಗೈಯಲ್ಲಿ ಹುಲಿಯ ಜತೆ ಸೆಣಸಿ ಬದುಕಲು ಸಾಧ್ಯವಿಲ್ಲ. ಅವನು ಯಾವಾಗ ಹುಲಿಯ ಜೊತೆ ಹೋರಾಡಿದ್ದ? ಹೊಯ್‌ಸಳ ಕೂಡ ಹುಲಿಯನ್ನು ಮಣಿಸಿದ್ದು ಭರ್ಜಿಯಿಂದ ಎಂದು ಮೈಸೂರಿನಲ್ಲಿ ಭಾಷಣ ಮಾಡಿದ ಅವರು ಹೇಳಿದರು.

ಮೈಸೂರಿನಲ್ಲಿ ಗುಂಬಜ್ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಬಿಡುವುದಿಲ್ಲ. ಮಧ್ಯದಲ್ಲಿ ದೊಡ್ಡ ಗುಂಬಜ್, ಅಕ್ಕ ಪಕ್ಕ ಚಿಕ್ಕ ಗುಂಬಜ್ ಇದ್ದರೆ ಅದು ಮಸೀದಿಯಾಗುತ್ತದೆ, ನಿಲ್ದಾಣ ಆಗುವುದಿಲ್ಲ. ಕೆಆರ್‌ಐಡಿಎಲ್ ಇಂಜಿನಿಯರ್‌ಗಳಿಗೆ ಇದನ್ನು ಹೇಳಿದ್ದು, ಇಂಥದ್ದನ್ನು ತೆಗೆಸಿ ಹಾಕಲು ಮೂರು ನಾಲ್ಕು ದಿನ ಸಮಯ ಕೊಟ್ಟಿದ್ದೇನೆ. ತೆಗೆಯದಿದ್ದರೆ ಜೆಸಿಬಿ ತಂದು ನಾನೇ ಒಡೆದು ಹಾಕುತ್ತೇನೆ. ಇಲ್ಲಿನ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಶಿಫಾರಸು ಆಗಿದೆ. ರೈಲ್ವೆ ಸ್ಟೇಷನ್‌ಗೆ 10ನೇ ಚಾಮರಾಜ ಒಡೆಯರ್ ಹೆಸರು ಇಡುತ್ತೇವೆ ಎಂದು ಅವರು ನುಡಿದರು.

Continue Reading
Advertisement
karnataka Weather Forecast
ಮಳೆ3 ಗಂಟೆಗಳು ago

Karnataka Weather : ರಾಜ್ಯದಲ್ಲಿ ಮುಂದುವರಿಯಲಿದೆ ಮಳೆಯಾಟ; ಗುಡುಗು, ಮಿಂಚು ಸಾಥ್‌

Dina Bhavishya
ಭವಿಷ್ಯ3 ಗಂಟೆಗಳು ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

navaratri
ಬೆಂಗಳೂರು14 ಗಂಟೆಗಳು ago

Navaratri : ನವರಾತ್ರಿ ಸಂಭ್ರಮದಲ್ಲಿ ಗೊಂಬೆಗಳಂತೆ ಮಿಂಚಿದ ಹೆಂಗಳೆಯರು

Mysuru News
ಮೈಸೂರು15 ಗಂಟೆಗಳು ago

Mysuru News : ಪರ್ಯಾವರಣ ಸಂರಕ್ಷಣ ಗತಿವಿಧಿಯಿಂದ ತ್ಯಾಜ್ಯ ಸಂಗ್ರಹಣ ಅಭಿಯಾನಕ್ಕೆ ಚಾಲನೆ

Kodagu News
ಕೊಡಗು15 ಗಂಟೆಗಳು ago

Kodagu News : ದಸರಾದಲ್ಲಿ ಡಿಜೆ ಬಳಕೆಗೆ ನಿರ್ಬಂಧ; ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್

Actor Darshan Renukaswamy murder case
ಬೆಂಗಳೂರು16 ಗಂಟೆಗಳು ago

Actor Darshan : ತನಿಖಾಧಿಕಾರಿಗಳ ವಿರುದ್ಧ ಬ್ಯಾಟಿಂಗ್‌ ಮಾಡಿದ ದರ್ಶನ್‌ ಪರ ವಕೀಲ; ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Bomb threat to BMS, MS Ramayya and four other colleges in Basavanagudi Bengaluru
ಬೆಂಗಳೂರು16 ಗಂಟೆಗಳು ago

Bomb Threat : ಬೆಂಗಳೂರಿನ ಬಸವನಗುಡಿಯ ಬಿಎಂಎಸ್‌ ಸೇರಿ ನಾಲ್ಕು ಕಾಲೇಜುಗಳಿಗೆ ಬಾಂಬ್‌ ಬೆದರಿಕೆ

Medical Seat
ಬೆಂಗಳೂರು17 ಗಂಟೆಗಳು ago

Medical Seat : ಬೆಂಗಳೂರಿನಲ್ಲಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ಉದ್ಯಮಿಗೆ 1.5 ಕೋಟಿ ರೂ. ವಂಚನೆ

Murder case
ಚಿತ್ರದುರ್ಗ18 ಗಂಟೆಗಳು ago

Murder Case : ಪ್ರಿಯಕರನಿಗಾಗಿ ಪತಿಗೆ ಚಟ್ಟ ಕಟ್ಟಿದ್ದಳು ಪಾಪಿ ಪತ್ನಿ; ಹೊಟ್ಟೆ ಉರಿಯಿಂದ ಸತ್ತ ಎಂದವಳು ಈಗ ಜೈಲುಪಾಲು

Namma metro ticket prices will be hiked soon
ಬೆಂಗಳೂರು19 ಗಂಟೆಗಳು ago

Namma Metro : ಸಿಟಿ ಮಂದಿಗೆ ಮತ್ತೊಂದು ಶಾಕ್‌; ಶೀಘ್ರದಲ್ಲೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯ ಬರೆ!

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 ದಿನಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌