ಮೈಸೂರು: ಮುಂಬರುವ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ಜಯರಾಂ ಕೀಲಾರ ಅವರಿಗೆ ಟಿಕೆಟ್ ನೀಡದಿರುವುದಕ್ಕೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯುದ್ದೇಶಿಸಿ ಮಾತನಾಡಿದರು. ಕಳೆದ 35 ವರ್ಷಗಳಿಂದ ಪರೋಕ್ಷವಾಗಿ ಜೆಡಿಎಸ್ ಕಾರ್ಯಕರ್ತರಾಗಿ ಜಯರಾಂ ಕೀಲಾರ ಕೊಡುಗೆ ನೀಡಿದ್ದಾರೆ. ಆದರೆ ಜಯರಾಂ ಕೀಲಾರ ಬಳಿ ಚುನಾವಣಾ ವೆಚ್ಚಕ್ಕೆ ಹಣವಿಲ್ಲವೆಂಬ ನೆಪ ಹೇಳಿ ಟಿಕೆಟ್ ನಿರಾಕರಿಸಲಾಗಿದೆ. ಯಾರಿಗೂ ಪರಿಚಯವಿಲ್ಲದ, ಒಂದು ದಿನವೂ ಜೆಡಿಸ್ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡದ ಎಚ್.ಕೆ. ರಾಮುಗೆ ಟಿಕೆಟ್ ನೀಡಿರುವುದು ಬೇಸರ ತಂದಿದೆ ಎಂದು ಹೇಳಿದರು.
ಇದನ್ನೂ ಓದಿ | JDSಗೆ ಟಕ್ಕರ್ ನೀಡಲು ಮುಂದಾದ ಲಕ್ಷ್ಮೀ ಅಶ್ವಿನ್‌ಗೌಡ: ಇಂದು BJP ಸೇರ್ಪಡೆ
ಈ ವಿಚಾರಕ್ಕೆ ಸಂಭಂದಿಸಿದಂತೆ ಕುಮಾರಸ್ವಾಮಿ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ನೆಲಮಂಗಲದಲ್ಲಿ ನಡೆದ ಜನತಾ ಜಲಧಾರೆ ಸಮಾವೇಶದಲ್ಲೂ ಕುಮಾರಸ್ವಾಮಿ ಭಾಷಣ ಮಾಡುವಾಗ ಇದೇ ವಿಷಯ ಪ್ರಸ್ತಾಪಿಸಿದ್ದಾರೆ. ಚಾಮುಂಡೇಶ್ವರಿ ತಾಯಿ ಎಲ್ಲವನ್ನೂ ನೋಡಿಕೊಳ್ಳಲಿ ಎಂದು ಹೇಳಿದರು.
ಇದನ್ನೂ ಓದಿ | BJPಗೆ ಹೊರಟ್ಟಿ ಅಧಿಕೃತ ಸೇರ್ಪಡೆ: ದೇವೇಗೌಡರಿಗೆ ಮುಖ ತೋರಿಸೋ ಧೈರ್ಯವಿಲ್ಲವೆಂದ ನಾಯಕ