ಮೈಸೂರು: ಬಾವಿ ಪತ್ನಿಯನ್ನು ಕೊಂದು ನೇಣು ಹಾಕಿರುವ (Murder Case) ಆರೋಪವೊಂದು ಕೇಳಿ ಬಂದಿದೆ. ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಕವಿತಾ (20) ಕೊಲೆಯಾದ ದುರ್ದೈವಿ. ನಿರಂಜನ ಅಲಿಯಾಸ್ ಜಗ್ಗ ಎಂಬಾತನ ಮೇಲೆ ಕೊಲೆ ಆರೋಪವಿದೆ.
ಪುಟ್ಟಮಲ್ಲಪ್ಪ ಹಾಗೂ ಶಿವನಂಜಮ್ಮ ದಂಪತಿ ಪುತ್ರಿ ಕವಿತಾಳಿಗೆ ಇದೇ ಅಕ್ಟೋಬರ್ 21ಕ್ಕೆ ನಿರಂಜನ ಜತೆಗೆ ಮದುವೆ ದಿನಾಂಕ ನಿಶ್ಚಯವಾಗಿತ್ತು. ಕವಿತಾ ಪೋಷಕರು ಜಮೀನಿಗೆ ಹೋದಾಗ ನಿರಂಜನ ಮನೆಗೆ ಬಂದಿದ್ದ. ಈ ವೇಳೆ ಕವಿತಾ ಜತೆಗೆ ಜಗಳ ಮಾಡಿ ಕೊಲೆ ಮಾಡಿ ನೇಣು ಹಾಕಿ ಪರಾರಿ ಆಗಿದ್ದಾನೆ. ಮನೆಯ ಹೆಂಚು ತೆಗೆದು ಓಡಿ ಹೋಗುವಾಗ ಗ್ರಾಮಸ್ಥರಿಂದ ತಡೆಯುವ ಯತ್ನ ನಡೆದಿದೆ.
ಎಚ್.ಡಿ.ಕೋಟೆ ಅಂತರಸಂತೆ ಠಾಣೆಗೆ ತೆರಳಿ ಪೊಲೀಸರಿಗೆ ಆರೋಪಿ ಶರಣಾಗಿದ್ದಾನೆ. ನಾನು ಕೊಲೆ ಮಾಡಿಲ್ಲ. ಜನರು ಹೊಡೆದು ಸಾಯಿಸಿ ಬಿಡುತ್ತಾರೆ ಎಂದು ಓಡಿ ಹೋದೆ ಅಷ್ಟೇ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಆದರೆ ಕವಿತಾ ಆತ್ಮಹತ್ಯೆ ಮಾಡಿಕೊಂಡಳಾ ಅಥವಾ ಕೊಲೆ ಆಗಿದ್ಯಾ ? ಆಗಿದ್ದರೆ ಯಾಕಾಗಿ ಎಂಬ ಪ್ರಶ್ನೆ ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.
ಹಾಸನದಲ್ಲಿ ಶಿಕ್ಷಕ ಆತ್ಮಹತ್ಯೆ
ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಂಗಸ್ವಾಮಿ (57) ಆತ್ಮಹತ್ಯೆಗೆ ಶರಣಾದವರು. ಹಾಸನ ನಗರದ ಬಿ.ಎಂ.ರಸ್ತೆಯಲ್ಲಿರುವ ಗೋಕುಲ್ ಲಾಡ್ಜ್‌ನಲ್ಲಿ ಘಟನೆ ನಡದಿದೆ. ನಿನ್ನೆ ಗೋಕುಲ್ ಲಾಡ್ಜ್‌ನಲ್ಲಿ ರೂಂ ಪಡೆದು ಉಳಿದುಕೊಂಡಿದ್ದರು. ರಂಗಸ್ವಾಮಿ ಬೇಲೂರು ತಾಲೂಕಿನ, ತೊಳಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರು. ನಿವೃತ್ತಿಯಾಗಲು ಮೂರು ವರ್ಷ ಬಾಕಿಯಿತ್ತು. ಶಿಕ್ಷಕ ರಂಗಸ್ವಾಮಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ