Site icon Vistara News

ಬೇರೆ ದೇಶದ ಜನರಾಗಿದ್ದರೆ ಕಲ್ಲು ಹೊಡೆಯುತ್ತ, ಬೆಂಕಿ ಹಚ್ಚುತ್ತಾ ನಡೆಯುತ್ತಿದ್ದರು : ಭಾರತದ ಜನರ ಕುರಿತು ಬಿ.ಎಲ್‌. ಸಂತೋಷ್‌ ಪ್ರಶಂಸೆ

bjp-karnataka-meeting regarding assembly election

ಮೈಸೂರು: ಕೋವಿಡ್‌ ಸಮಯದಲ್ಲಿ ಆತಂಕದಿಂದಾಗಿ ದೂರದೂರುಗಳಿಗೆ ನಡೆದು ಹೋಗುತ್ತಿದ್ದ ಕೋಟ್ಯಂತರ ಭಾರತೀಯರು ಅತ್ಯಂತ ಸಂಯಮದಿಂದ ವರ್ತಿಸಿದರು ಎಂದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ಬೇರೆ ದೇಶದಲ್ಲಾಗಿದ್ದರೆ ಪರಿಸ್ಥಿತಿ ಭಯಾನಕವಾಗುತ್ತಿತ್ತು ಎಂದರು.

ಮೈಸೂರಿನಲ್ಲಿ ಆಯೋಜಿಸಿರುವ ಸುತ್ತೂರು ಜಾತ್ರೆ ಕಾರ್ಯಕ್ರಮದಲ್ಲಿ ʼಭಜನಾ ಮೇಳʼದ ಸಮಾರೋಪ ಭಾಷಣ ಮಾಡಿದರು.

ಕೋವಿಡ್‌ ಕಾರಣಕ್ಕೆ ಯಾವುದೇ ವಾಹನ ಇಲ್ಲದೆ, ಮನಸ್ಸಿನಲ್ಲಿದ್ದ ಯಾವುದೋ ಅಭದ್ರತೆಯ ಕಾರಣಕ್ಕೆ ಒಂದೂವರೆ ಕೋಟಿ ಜನರು ದೇಶದ ವಿವಿಧ ರಾಜ್ಯಗಳಿಂದ ತಮ್ಮ ರಾಜ್ಯಕ್ಕೆ ನಡೆದು ಹೊರಟತು. ಉತ್ತರ ಪ್ರದೇಶ, ಬಿಹಾರ ಸೇರಿ ಅನೇಕ ರಾಜ್ಯಗಳಿಗೆ ಸುಮಾರು 800-900 ಕಿ.ಮೀ. ನಡೆದು ಹೋಗುತ್ತಿದ್ದರೂ ಅತ್ಯಂತ ಸಂಯಮ ವಹಿಸಿದರು. ಇದೇ ಸ್ಥಿತಿ ಬೇರೆ ದೇಶಗಳಲ್ಲಿ ಈ ರೀತಿ ಜನರು ನಡೆದು ಹೋಗುತ್ತಿದ್ದರೆ ದಾರಿ ಮಧ್ಯದಲ್ಲಿ ಬೆಂಕಿ ಹಚ್ಚಿ, ಕಲ್ಲು ತೂರಿ ಹೋಗುತ್ತಿದ್ದರು.

ಇದನ್ನೂ ಓದಿ | Chat gpt : ಕಾಂಗ್ರೆಸ್‌ನಲ್ಲಿ ಯಾರು ಪವರ್‌ಫುಲ್‌? BSY ಮತ್ತೆ CM ಆಗ್ತಾರ? B.L. ಸಂತೋಷ್‌ ಶಕ್ತಿ ಏನು? HDK ಪ್ರಭಾವ ಎಷ್ಟು?; ಇಲ್ಲಿದೆ ಚಾಟ್‌ ಜಿಪಿಟಿ ʼಸಂದರ್ಶನʼ

ಆದರೆ ಈ ಜನರು ದುಃಖದ ನಡುವೆಯೂ ಸಮಾಧಾನದಿಂದ ಹೋಗುತ್ತಿದ್ದರು. ಅನೇಕರ ಕಾಲಿಗೆ ಚಪ್ಪಲಿಯೇ ಇರಲಿಲ್ಲ. ನಮ್ಮ ಸಂಘಟನೆ ವತಿಯಿಂದಲೇ ಅನೇಕರಿಗೆ ಚಪ್ಪಲಿ ನೀಡಿದೆವು. ಕೊರೊನಾ ಪರಿಸ್ಥಿತಿ ಬಗ್ಗೆ ಬೇಜಾರಿದೆಯೇ ಹೊರತು ಸರ್ಕಾರದ ಬಗ್ಗೆ ಅಲ್ಲ. ಸರ್ಕಾರ ಕೂಡ ಎಷ್ಟು ಮಾಡಲಾಗುತ್ತದೆ? ಎಂದು ಅನೇಕರು ಹೇಳುತ್ತಿದ್ದರು.

ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಜನರು ಸಂಯಮ ತೋರಿದರು. ಏಳು ಲಕ್ಷಕ್ಕೂ ಹೆಚ್ಚು ಜನರು ವಿದೇಶಗಳಿಂದ ಭಾರತಕ್ಕೆ ಆಗಮಿಸಿದರು. ಒಂದಿಬ್ಬರು ಕೊಂಕು ಮಾತನಾಡಿದ್ದು ಬಿಟ್ಟರೆ ಎಲ್ಲರೂ ಸುಮ್ಮನಿದ್ದರು. ಭಾರತ ಸರ್ಕಾರ ಮಾಡಿದ ಕಾರ್ಯ, ಅನೇಕ ಕಡೆಗಳಲ್ಲಿ ಮಾಧ್ಯಮಗಳು ಮಾಡಿದ ಸೇವೆ ಮಾತ್ರ ಇದಕ್ಕೆ ಕಾರಣೌಲ್ಲ. ಈ ಸಮಾಜದ ಮಾನಸಿಕತೆಯನ್ನು ಕಾಪಾಡಿಕೊಳ್ಳುವ, ಸುತ್ತೂರು ಕ್ಷೇತ್ರದಂತಹ ಲಕ್ಷಾಂತರ ದೇವಸ್ಥಾನಗಳು ಈ ದೇಶದಲ್ಲಿವೆ. ಅವುಗಳ ಕಾರಣಕ್ಕಾಗಿ ಸಮಾಜದಲ್ಲಿ ಸಂಯಮ, ಶಿಸ್ತು ಇದೆ. ಸಾಮಾಜಿಕ ವ್ಯವಸ್ಥೆಯನ್ನು ಮಠಗಳು ಕಾಯುತ್ತಿವೆ ಎಂದು ಸಂತೋಷ್‌ ಹೇಳಿದರು.

ಸಮಾಜದ ಆರೋಗ್ಯd ದೃಷ್ಟಿಯಿಂದ ಸತ್ಯ – ಸುಳ್ಳಿನ ಅಂತರ ಹೆಚ್ಚಾಗಬೇಕು. ಒಬ್ಬನೆ ಮನುಷ್ಯ ಕಾಲಕ್ಕೆ ತಕ್ಕಂತೆ ಒಳ್ಳೆಯದು ಮಾಡುತ್ತಾನೆ, ಕೆಟ್ಟದು ಮಾಡುತ್ತಾನೆ. ಒಬ್ಬನೇ ಮನುಷ್ಯನೊಳಗೆ ಒಳ್ಳೆಯವನೂ ಕೆಟ್ಟವನೂ ಇದ್ದಾನೆ.
ಸುತ್ತೂರಿನಂತh ಧಾರ್ಮಿಕ ಕ್ಷೇತ್ರಗಳ ಮೂಲಕ ಮಾತ್ರ ಮನುಷ್ಯನ ಈ ವರ್ತನೆಗಳು ಬದಲಾಗುತ್ತವೆ ಎಂದರು.

Exit mobile version