ಮೈಸೂರು: ಮೊಬೈಲ್ ತಂದ ಆಪತ್ತು ವ್ಯಕ್ತಿಯೊಬ್ಬನ ಪ್ರಾಣವನ್ನೇ ಕಸಿದುಕೊಂಡಿದೆ. ಹಳಿ ಸಮೀಪದಲ್ಲಿ ಮಾತನಾಡುತ್ತಾ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಗೆ ರೈಲು ಬಡಿದಿದೆ. ಪರಿಣಾಮ ಬಿಹಾರ ಮೂಲದ ಮನು ಕುಮಾರ್(27) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೈಸೂರಿನ ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಗ್ರಾಮದಲ್ಲಿ ಈ ದುರ್ಘಟನೆ (Mysuru News) ನಡೆದಿದೆ.
ಮನು ಕುಮಾರ್ ದೊಡ್ಡ ಕವಲಂದೆ ಗ್ರಾಮದಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ. ಮಂಗಳವಾರ ಬೆಳಗ್ಗೆ 7.40ಕ್ಕೆ ಪತ್ನಿ ಜತೆಗೆ ಮಾತಾಡಲೆಂದು ಹೊರ ಬಂದಿದ್ದ. ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಮಾತನಾಡಿಕೊಂಡು ಹಳಿ ಸಮೀಪ ಬರುತ್ತಿದ್ದ. ಕಿವಿಗೆ ಹೆಡ್‌ಫೋನ್ ಹಾಕಿದ್ದರಿಂದಲೋ ಏನೋ ರೈಲು ಬರುವುದನ್ನೂ ಗಮನಿಸಿರಲಿಲ್ಲ.
ಚಾಮರಾಜನಗರ ಕಡೆಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ರೈಲು ತಾಕಿದೆ. ರೈಲು ತಾಕಿದ ರಭಸಕ್ಕೆ ಮನು ಕೆಳಗೆ ಬಿದ್ದವನೇ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಡಿಯೋ ಕಾಲ್‌ನಲ್ಲಿದ್ದ ಪತ್ನಿ ಕಣ್ಮುಂದೆಯೇ ದಾರುಣವಾಗಿ ಮೃತಪಟ್ಟಿದ್ದಾನೆ.
ಸ್ಥಳೀಯ ಮಾಹಿತಿ ಮೇರೆಗೆ ಸ್ಥಳಕ್ಕಾಮಿಸಿದ ನಂಜನಗೂಡು ರೈಲ್ವೆ ಪೊಲೀಸ್ ಠಾಣೆಯ ಆರ್‌ಪಿಎಫ್ ಜಗನ್ನಾಥ್, ಪೊಲೀಸ್ ಸಿಬ್ಬಂದಿ ಶ್ರೀನಿವಾಸ್, ಕುಮಾರ್ ಪರಿಶೀಲನೆ ನಡೆಸಿದ್ದಾರೆ. ಹಳಿ ಪಕ್ಕ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ನಂಜನಗೂಡು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Murder Case : ಪ್ರೀತಿ ವಿಚಾರಕ್ಕೆ ಕಿತ್ತಾಟ; ಯುವಕನ ಕೊಲೆಯಲ್ಲಿ ಅಂತ್ಯ
ರೈಲ್ವೆ ಕ್ರಾಸಿಂಗ್ ಕಾಮಗಾರಿ; 5 ದಿನ ಬೆಂಗಳೂರು-ಮೈಸೂರು ರೈಲು ಸಂಚಾರ ಬಂದ್
ಬೆಂಗಳೂರು: ಕೆಂಗೇರಿ-ಹೆಜ್ಜಾಲ ಮಾರ್ಗದಲ್ಲಿ ರೈಲ್ವೆ ಕ್ರಾಸಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ನಡುವಿನ ಕೆಲ ರೈಲುಗಳ ಕಾರ್ಯಾಚರಣೆ (Train services) ಐದು ದಿನಗಳ ಮಟ್ಟಿಗೆ ರದ್ದಾಗಲಿದೆ. ಮಾರ್ಚ್ 6, 7, 8 ಮತ್ತು 12, 13ರ ತನಕ ರೈಲು ಓಡಾಟವು ತಾತ್ಕಾಲಿಕವಾಗಿ ರದ್ದಾಗಲಿದೆ. ಕೆಲವು ರೈಲುಗಳ ಸಂಚಾರ ಭಾಗಶಃ ರದ್ದಾಗಲಿದೆ.
ಡಾ.ಎಂ.ಜಿ.ಆರ್ ಚೆನ್ನೈ ಸೆಂಟ್ರಲ್- ಮೈಸೂರು ಎಕ್ಸ್‌ಪ್ರೆಸ್ ರೈಲು ಮಾ.6, 7ರಂದು ಸಂಚಾರ ಸಂಪೂರ್ಣ ಬಂದ್ ಆಗಲಿದೆ. ಇನ್ನೂ ಮಾ.7, 8ರಂದು ಮೈಸೂರು-ಕೆಎಸ್‌ಆರ್ ಬೆಂಗಳೂರು ಹಾಗೂ ಮಾ.7, 12ರಂದು ಅರಸೀಕೆರೆ-ಮೈಸೂರು ಎಕ್ಸ್‌ಪ್ರೆಸ್ ಭಾಗಶಃ ರದ್ದಾಗಲಿದೆ. ಮಾ.7, 12ರಂದು ಮೈಸೂರು- ಎಸ್‌ಎಂವಿಟಿ ಬೆಂಗಳೂರು ಪ್ರತಿದಿನದ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ಮಾರ್ಗಗಳಲ್ಲಿ ವ್ಯತ್ಯಯವಾಗಲಿದೆ.
ತಾತ್ಕಾಲಿಕ ರೈಲುಗಳ ಸಂಚಾರ ರದ್ದು
ಮಾ. 6-7ರಂದು ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಎಕ್ಸ್‌ಪ್ರೆಸ್
ಮಾ. 7-8ರಂದು ಮೈಸೂರು-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್
ಮಾ. 7-8ರಂದು ಕೆಎಸ್‌ಆರ್ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್
ಮಾ. 7-8ರಂದು ಮೈಸೂರು-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್
ಮಾ. 7-8ರಂದು ಅರಸೀಕೆರೆ-ಮೈಸೂರು ಪ್ರತಿದಿನದ ಎಕ್ಸ್‌ಪ್ರೆಸ್ ರೈಲು
ಮಾ. 7-12ರಂದು ಮೈಸೂರು-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್
ಮಾ. 7-12ರಂದು ಮೈಸೂರು-ಕೆಎಸ್‌ಆರ್ ಬೆಂಗಳೂರು ಮೆಮು
ಮಾ. 7-12ರಂದು ಎಸ್‌ಎಂವಿಟಿ ಬೆಂಗಳೂರು-ಮೈಸೂರು ವಿಶೇಷ ಎಕ್ಸ್‌ಪ್ರೆಸ್
ಮಾ. 7-12ರಂದು ಮೈಸೂರು-ಅರಸೀಕೆರೆ ಪ್ರತಿ ದಿನದ ವಿಶೇಷ ಎಕ್ಸ್‌ಪ್ರೆಸ್
ಮಾ. 7-12ರಂದು ಚನ್ನಪಟ್ಟಣ ಮತ್ತು ಕೆಎಸ್‌ಆರ್ ಬೆಂಗಳೂರು
ಮಾ. 8-13ರಂದು ಕೆಎಸ್‌ಆರ್ ಬೆಂಗಳೂರು-ಮೈಸೂರು ಮೆಮು ವಿಶೇಷ ರೈಲು
ಮಾ.8-13ರಂದು ಕೆಎಸ್‌ಆರ್ ಬೆಂಗಳೂರು-ಚನ್ನಪಟ್ಟಣ ಮೆಮು ಸ್ಪೆಷಲ್
ಮಾ. 8-13ರಂದು ಮೈಸೂರು-ಕೆಎಸ್‌ಆರ್ ಬೆಂಗಳೂರು ಮೆಮು ವಿಶೇಷ ರೈಲು
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ