Site icon Vistara News

Neha Murder Case: ನನ್ನ ಮಗನಿಗೆ ಶಿಕ್ಷೆ ಆಗಬೇಕು; ಯಾರೂ ಇಂಥ ಕೃತ್ಯ ಎಸಗಬೇಡಿ ಎಂದು ಫಯಾಜ್‌ ತಂದೆ ಕಣ್ಣೀರು

Neha Murder Case

ಹುಬ್ಬಳ್ಳಿ: ಹುಬ್ಬಳ್ಳಿಯ ಕಾರ್ಪೊರೇಟರ್‌ ಪುತ್ರಿ ಕೊಲೆ ಪ್ರಕರಣ (Neha Murder Case) ದೇಶಾದ್ಯಂತ ಸದ್ದು ಮಾಡುತ್ತಿದೆ. ಪ್ರಕರಣ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಗಳು ಕೇಳಿಬರುತ್ತಿವೆ. ಈ ನಡುವೆ ಘಟನೆ ಬಗ್ಗೆ ಆರೋಪಿ ಫಯಾಜ್‌ ತಂದೆ ಬಾಬಾ ಸಾಹೇಬ್‌ ಸುಬಾನಿ ಪ್ರತಿಕ್ರಿಯಿಸಿದ್ದು, ಮಗನ ತಪ್ಪಿನಿಂದ ಊರಿಗೇ ಕೆಟ್ಟ ಹೆಸರು ಬಂದಿದೆ. ನನ್ನ ಮಗ ಫಯಾಜ್‌ಗೆ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.

ವಿಸ್ತಾರ ನ್ಯೂಸ್‌ ಜತೆ ಮಾತನಾಡಿರುವ ಬಾಬಾ ಸಾಹೇಬ್‌ ಸುಬಾನಿ, ನನ್ನ ಮಗ ಮಾಡಿದ ತಪ್ಪಿಗೆ ನಾನು ಮುನವಳ್ಳಿ ಹಾಗೂ ರಾಜ್ಯದ ಜನರ ಬಳಿ ಕ್ಷಮೆ ಕೇಳುತ್ತೇನೆ. ನಮ್ಮನ್ನು ಮುನವಳ್ಳಿ ಜನ ಬೆಳೆಸಿದ್ದಾರೆ. ಅವರ ಋಣ ತೀರಿಸಲು ಸಾಧ್ಯವಿಲ್ಲ. ಹೀಗಾಗಿ ನಮ್ಮೂರಿನ ಜನ ನನ್ನನ್ನು ಕ್ಷಮಿಸಬೇಕು. ದಯವಿಟ್ಟು ಯಾವುದೇ ಯುವಕರು, ನನ್ನ ಮಗನ ರೀತಿಯಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡಬಾರದು ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ.

ನಾನು ಯಾವತ್ತೂ ಯಾರಿಗೂ ಕೆಟ್ಟದ್ದು ಮಾಡಿಲ್ಲ, ಈಗ ನನ್ನ ಮಗ ದೇಶದ ಮುಂದೆ ತಲೆ ತಗ್ಗಿಸುವ ಕೆಲಸ ಮಾಡಿಬಿಟ್ಟಿದ್ದಾನೆ. ಹೀಗಾಗಿ ನನ್ನನ್ನು ಮುನವಳ್ಳಿ ಗ್ರಾಮದ ಜನರು ಕ್ಷಮಿಸಬೇಕು ಎಂದು ಕಣ್ಣೀರು ಹಾಕಿರುವ ಅವರು, ನಾನು ಸಾಯೋವರೆಗೆ ಮುನವಳ್ಳಿ ಜನರ ಸೇವೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಯಾರೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಮಾಡುತ್ತಾರೋ ಅಂತಹವರಿಗೆ ಮುಂದಿನ ದಿನಗಳಲ್ಲಿ ಯಾರೂ ಅಂಥ ಕೃತ್ಯ ಮಾಡಬಾರದು, ಆ ರೀತಿಯ ಶಿಕ್ಷೆ ಆಗಬೇಕು. ಇಂತಹ ಘಟನೆಗಳಿಂದ ನಾಳಿನ ದಿನ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಜನ ಭಯಪಡುತ್ತಾರೆ. ಹೀಗಾಗಿ ನನ್ನ ಜನ್ಮಭೂಮಿ ಮುನವಳ್ಳಿ, ಅವರಿಗಾಗಿ ನಾನು ಬದುಕುತ್ತೇನೆ ಎಂದು ಹೇಳಿದ್ದಾರೆ.

ವರ್ಷದ ಹಿಂದೆ ನೇಹಾ ಅವರ ತಂದೆ ನನಗೂ ಎರಡು ಬಾರಿ ಫೋನ್‌ ಮಾಡಿದ್ದರು. ನನ್ನ ಮಗಳಿಗೆ ನಿಮ್ಮ ಮಗ ಕಿರುಕುಳ ನೀಡುತ್ತಿದ್ದಾನೆ ಎಂದು ಹೇಳಿದ್ದರು. ಅವರ ತುಂಬಾ ಒಳ್ಳೆಯವರು. ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ ಎಂದು ಮಗ ಹೇಳಿದ್ದ. ಆದರೆ, ನಾನು ಮಾಡಲ್ಲ ಎಂದಿದ್ದೆ. ಹೀಗಾಗಿ ಅವನು ಜಗಳ ಮಾಡಿದ್ದ. ಈಗ ಅವನು ನನ್ನ ಬಳಿ ಮಾತನಾಡಲ್ಲ. ನಮ್ಮ ದಾಂಪತ್ಯ ಜೀವನ ಸರಿಯಿಲ್ಲದ ಕಾರಣ ಅವರ ತಾಯಿ ಜತೆ ಅವನು ಪ್ರತ್ಯೇಕವಾಗಿ ವಾಸವಾಗಿದ್ದ ಎಂದು ಹೇಳಿದರು.

ಇದನ್ನೂ ಓದಿ | Neha Murder Case: ನೇಹಾ ಕೊಲೆಗಾರ ಫಯಾಜ್‌ಗೆ 14 ದಿನ ನ್ಯಾಯಾಂಗ ಬಂಧನ; ʼಲವ್‌ ಜಿಹಾದ್‌ ಕೊಲೆʼ ವಿರೋಧಿಸಿ ಮೂರು ದಿನ ಮುನವಳ್ಳಿ ಬಂದ್

ನಾನು ಸೈನಿಕನಾಗಿ ದೇಶ ಸೇವೆ ಸಲ್ಲಿಸಬೇಕು ಅಂದುಕೊಂಡಿದ್ದೆ. ಆದರೆ, ನಮ್ಮ ತಾಯಿ ಬೇಡ ಅಂದಿದ್ದರು. ಹೀಗಾಗಿ ನನ್ನ ಮಗನನ್ನು ಸೇನೆಗೆ ಸೇರಿಸಬೇಕು ಅಂದುಕೊಂಡಿದ್ದೆ. ಆದರೆ ಅವನು ಈ ರೀತಿಯ ಕೆಲಸ ಮಾಡಿದ್ದಾನೆ ಎಂದು ತಿಳಿಸಿದರು.

Exit mobile version