Site icon Vistara News

NIA Raid: ಬೆಂಗಳೂರಿನಲ್ಲಿ ಮತ್ತೆ ಎನ್‌ಐಎ 20 ಕಡೆ ದಾಳಿ; ಶಂಕಿತ ಉಗ್ರನ ಲಿಂಕೇ ಆಧಾರ

NIA Raid in bangalore

ಬೆಂಗಳೂರು: ರಾಜಧಾನಿಯಲ್ಲಿ ಎನ್‌ಐಎ ಅಧಿಕಾರಿಗಳು ಮತ್ತೆ ದಾಳಿ (NIA Raid) ನಡೆಸಿದ್ದಾರೆ. ನಗರದ ಸುಮಾರು 20 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.

ಹಿಂದಿನ ಸಲ ಎನ್‌ಐಎ ನಡೆಸಿದ ದಾಳಿಗಳಲ್ಲಿ ಸಿಕ್ಕಿಬಿದ್ದ ಶಂಕಿತ ಐಸಿಸ್ ಉಗ್ರ (‌ISIS Terrorist) ಅಲಿ ಅಬ್ಬಾಸ್‌ ಪೇಟಿವಾಲ (Ali Abbas Petiwala) ಹಾಗೂ ಇನ್ನಿತರ ಕಡೆ ದೊರೆತ ಮಾಹಿತಿಯೇ ಈಗಿನ ದಾಳಿಗಳಿಗೆ ಕಾರಣ ಎನ್ನಲಾಗಿದೆ. ಸುಲ್ತಾನ್ ಪಾಳ್ಯ, ಆರ್‌ಟಿ ನಗರ, ಶಿವಾಜಿನಗರ, ಪುಲಿಕೇಶಿನಗರ ಸೇರಿದಂತೆ ಹಲವು ಕಡೆ ದಾಳಿ ನಡೆಸಲಾಗಿದೆ.

ಈ ಹಿಂದೆ ಆರ್‌ಟಿ ನಗರದ ಸುಲ್ತಾನ್ ಪಾಳ್ಯದಲ್ಲಿ ಎನ್‌ಐಎ ತಂಡ ದಾಳಿ‌ ನಡೆಸಿತ್ತು. ಅಲ್ಲಿ ಪಡೆದ ಮಾಹಿತಿಯಂತೆ ಪುಲಿಕೇಶಿ ನಗರದ ಅಲಿ ‌ಅಬ್ಬಾಸ್ ಮನೆ ಮೇಲೆ‌ ಎನ್‌ಐಎ ಟೀಂ ರೇಡ್‌ ಮಾಡಿತ್ತು. ಇದೀಗ ಅಲಿ ಅಬ್ಬಾಸ್‌ ಪೇಟಿವಾಲ ಬಳಿ ಹಲವಾರು ಸ್ಫೋಟಕ ಮಾಹಿತಿಗಳು ದೊರೆತಿವೆ. ಪೇಟಿವಾಲ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಕಳೆದ ವಾರ ಬೆಂಗಳೂರಿನಲ್ಲಿ ಎನ್‌ಐಎ ಅಧಿಕಾರಿಗಳು (NIA Raid) ವಶಕ್ಕೆ ಪಡೆದು ವಿಚಾರಿಸಿ ಬಿಟ್ಟು ಕಳಿಸಿದ್ದ ಶಂಕಿತ ಉಗ್ರ ಅಲಿ ಅಬ್ಬಾಸ್‌ನನ್ನು ಎನ್​ಐಎ ಅಧಿಕಾರಿಗಳು ಮತ್ತೆ ಅರೆಸ್ಟ್ ಮಾಡಿದ್ದಾರೆ. ಕಳೆದ ವಾರ ಬೆಂಗಳೂರು ಸೇರಿದಂತೆ ಮಹಾರಾಷ್ಟ್ರದ 44 ಸ್ಥಳಗಳಲ್ಲಿ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು ಐಸಿಸ್‌ನೊಂದಿಗೆ ಸಂಪರ್ಕದಲ್ಲಿದ್ದ 15 ಶಂಕಿತರನ್ನ ಬಂಧಿಸಿ, ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ನಡೆದಿದ್ದ ದಾಳಿಯ ವೇಳೆ ಅಲಿ ಅಬ್ಬಾಸ್​ನನ್ನು ವಶಕ್ಕೆ ಪಡೆದು ಕರೆದೊಯ್ಯಲಾಗಿತ್ತು. ನಂತರ ವಿಚಾರಣೆ ನಡೆಸಿ ಕಳುಹಿಸಲಾಗಿತ್ತು.

ಅಬ್ಬಾಸ್‌ ಅಲಿ ಮನೆಯಲ್ಲಿ ದೊರೆತ ದಾಖಲೆಗಳ‌ ಪರಿಶೀಲನೆ ನಡೆಸಿದ ಬಳಿಕ ಮತ್ತಷ್ಟು ವಿಚಾರಣೆಗಾಗಿ ಕರೆಸಿದ್ದಲ್ಲದೆ, ಈಗ ಅಬ್ಬಾಸ್ ಅಲಿಯನ್ನ ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈತ ಐಎಸ್‌ (ಇಸ್ಲಾಮಿಕ್ ಸ್ಟೇಟ್) ಸಂಘಟನೆ ಜೊತೆ ನಂಟು ಹೊಂದಿ ಯುವಕರನ್ನು ಅದಕ್ಕೆ ಸೇರಲು ಪ್ರಚೋದಿಸುತ್ತಿದ್ದ ಎಂಬ ಆರೋಪವಿದೆ.

ಪುಲಿಕೇಶಿನಗರದ ಮೋರ್ ರಸ್ತೆಯಲ್ಲಿ ವಾಸವಾಗಿದ್ದ ಅಲಿ ಅಬ್ಬಾಸ್ ಪೇಟಿವಾಲ, ಮೂಲತಃ ಮುಂಬೈ ಮೂಲದವನು. ಈತ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದು‌, ಈತ ಟ್ಯಾನರಿ ರಸ್ತೆಯಲ್ಲಿ ಉರ್ದು ಶಾಲೆ ನಡೆಸುತ್ತಿದ್ದ. ಹೆಂಡತಿ ಡಯಾಟಿಕ್ ಹಾಸ್ಪಿಟಲ್ ನಡೆಸುತ್ತಿದ್ದಾರೆ. ಇವರು ಶಾಮಾಜ್ ಎಂಬವರಿಂದ 2018ರಲ್ಲಿ 62 ಲಕ್ಷಕ್ಕೆ ಫ್ಲ್ಯಾಟ್ ಖರೀದಿ ಮಾಡಿದ್ದರು. ಹೆಂಡತಿ, ಮೂವರು ಮಕ್ಕಳು ಹಾಗು ತಂದೆ ಜೊತೆ ಅಬ್ಬಾಸ್ ವಾಸವಾಗಿದ್ದಾನೆ. ದಾಳಿ ಸಂದರ್ಭದಲ್ಲಿ ಪೇಟಿವಾಲ ಮನೆಯಿಂದ 16,42,000 ಹಣವನ್ನು ಸೀಜ್ ಮಾಡಲಾಗಿತ್ತು. ಮೊಬೈಲ್​, ಲ್ಯಾಪ್​ಟಾಪ್​​​ ಪರಿಶೀಲನೆ ನಡೆಸಿದ ಬಳಿಕ ಅಬ್ಬಾಸ್​ನನ್ನ ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: NIA Raid: ಓದಿದ್ದು IIT, ಕೋಟಿ ರೂ. ಸಂಬಳ; ಆದರೂ ಅಬ್ಬಾಸ್‌ಗೆ ತೀರದ ಐಸಿಸ್‌ ಮೋಹ!

Exit mobile version