ಬೆಂಗಳೂರು: ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಪಿಎಫ್‌ಐ ಸಂಘಟನೆಯ ನಿಷೇಧವೂ(PFI BANNED) ನಿರೀಕ್ಷಿತವಾದದ್ದು. ಜನ ಸಾಮಾನ್ಯರು ಮಾತ್ರವಲ್ಲದೇ ವಿರೋಧ ಪಕ್ಷಗಳು ಕೂಡ ದೇಶ ವಿರೋಧಿ ಸಂಘಟನೆಯನ್ನು ಬ್ಯಾನ್ ಮಾಡುವಂತೆ ಆಗ್ರಹಿಸಿದ್ದವು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಇದಕ್ಕೆ ಉತ್ತರ ಸಿಕ್ಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ದೇಶಾದ್ಯಾಂತ ಪಿಎಫ್‌ಐ ಮೇಲಿಂದ ಮೇಲೆ ವಿಧ್ವಂಸಕ ಕೃತ್ಯಗಳನ್ನು ಮಾಡುತ್ತಾ ಬಂದಿದೆ. ಕೆಎಫ್‌ಡಿ, ಸಿಮಿ ಸೇರಿದಂತೆ 16 ರೂಪಾಂತರಿಗಳ ಫಲಶೃತಿ ಪಿಎಫ್‌ಐ ಸಂಘಟನೆಗೆ ಈ ದೇಶದ ಕಾನೂನು ಮೇಲೆ ಗೌರವ, ನಂಬಿಕೆಯೇ ಇರಲಿಲ್ಲ. ವಿದೇಶಿಗಳಿಂದ ಆಜ್ಞೆ ಪಡೆದು ರಿಮೋಟ್ ಕಂಟ್ರೋಲ್‌ನಲ್ಲಿದ್ದ ಇವರು ಗಡಿ ಆಚೆಗೆ ಹೋಗಿ ಟ್ರೈನಿಂಗ್ ಪಡೆದುಕೊಂಡು ಬಂದಿದ್ದಾರೆ. ಹಲವಾರು ಕೇಸ್‌ಗಳಲ್ಲಿ ಭಾಗಿಯಾಗಿರುವುದು ಬಹಿರಂಗವಾಗಿದೆ.
ಈ ದೇಶದ್ರೋಹ ಸಂಘಟನೆಯ ನಿಷೇಧಕ್ಕೆ ಪಕ್ಷಾತೀತವಾಗಿ ಎಲ್ಲ ನಾಯಕರು ಒತ್ತಾಯ ಮಾಡಿದ್ದರು. ಕಾಂಗ್ರೆಸ್, ಜೆಡಿಎಸ್, ಸಿಪಿಐ, ಸಿಪಿಎಂ ಎಲ್ಲ ಪಕ್ಷಗಳೂ ಯಾವಾಗ ಬ್ಯಾನ್ ಮಾಡುತ್ತೀರಿ ಎಂದು ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರಿಗೆಲ್ಲ ಈಗ ಉತ್ತರ ಸಿಕ್ಕಿದೆ ಎಂದರು.
ಇದನ್ನೂ ಓದಿ | ವಿಸ್ತಾರ Explainer : ಏನಿದು ಪಿಎಫ್‌ಐ? ಕೇಂದ್ರ ಸರ್ಕಾರ 5 ವರ್ಷಗಳ ಅವಧಿಗೆ ನಿಷೇಧಿಸಿದ್ದೇಕೆ?