Site icon Vistara News

‌PM Modi: ನಾಳೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್; ಪರ್ಯಾಯ ಮಾರ್ಗಗಳು ಯಾವುವು?

bengaluru mysuru highway to be completely suspended on march 12 effect of pm modi visit

ಮಂಡ್ಯ: ಈ ಭಾನುವಾರ (ಮಾ. 12) ಬೆಂಗಳೂರಿನಿಂದ ಮೈಸೂರಿಗೆ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ಲ್ಯಾನ್‌ ಮಾಡಿಕೊಂಡಿದ್ದರೆ ಜಾಗ್ರತೆ ವಹಿಸಿ, ನಿಮ್ಮ ಮಾರ್ಗವನ್ನು ಬದಲಾವಣೆ ಮಾಡಿಕೊಳ್ಳಿ. ಏಕೆಂದರೆ, ಭಾನುವಾರ ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ಸಂಚಾರವನ್ನು ಬಂದ್‌ ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (‌PM Modi) ಅವರು ಹೆದ್ದಾರಿ ಉದ್ಘಾಟನೆಗಾಗಿ ಆಗಮಿಸಲಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತ ಈ ಆದೇಶವನ್ನು ಹೊರಡಿಸಿದೆ.

ಅಂದು ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದ್ದು, ಆ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮಾ.12ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ.

ಮಾರ್ಗ ಬದಲಾವಣೆ ಹೇಗಿದೆ?

1-ಮೈಸೂರು-ಬೆಂಗಳೂರಿಗೆ ಬನ್ನೂರು-ಮಳವಳ್ಳಿ-ಹಲಗೂರು ಕನಕಪುರ ಮಾರ್ಗವಾಗಿ ಸಂಚಾರ
2-ಮೈಸೂರು-ತುಮಕೂರಿಗೆ ಮೈಸೂರು-ಶ್ರೀರಂಗಪಟ್ಟಣ-ಪಾಂಡವಪುರ-ನಾಗಮಂಗಲ ಮಾರ್ಗವಾಗಿ ಸಂಚಾರ
3-ತುಮಕೂರು-ಮೈಸೂರಿಗೆ ಬೆಳ್ಳೂರು ಕ್ರಾಸ್-ನಾಗಮಂಗಲ-ಶ್ರೀರಂಗಪಟ್ಟಣದ ಮಾರ್ಗವಾಗಿ ಸಂಚಾರ
4-ಬೆಂಗಳೂರು-ಮೈಸೂರಿಗೆ ಚನ್ನಪಟ್ಟಣ, ಹಲಗೂರು-ಮಳವಳ್ಳಿ-ಕಿರಗಾವಲು ಮಾರ್ಗವಾಗಿ ಸಂಚಾರ
5-ಬೆಂಗಳೂರು-ಮಹದೇಶ್ವರ ಬೆಟ್ಟಕ್ಕೆ ಚನ್ನಪಟ್ಟಣ-ಹಲಗೂರು-ಮಳವಳ್ಳಿ-ಕೊಳ್ಳೇಗಾಲದ ಮಾರ್ಗವಾಗಿ ಸಂಚಾರ

ಇದನ್ನೂ ಓದಿ: Karnataka Election 2023: 80 ವರ್ಷ ಮೇಲ್ಪಟ್ಟ ನಾಗರಿಕರು, ವಿಕಲಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ; ಹೇಗಿರಲಿದೆ ಪ್ರಕ್ರಿಯೆ?

ಮಾರ್ಗ ಬದಲಾವಣೆ ಆದೇಶ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದ್ದು, ಆದೇಶವನ್ನು ಉಲ್ಲಂಘಿಸಿದರೆ ಅಂಥವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Exit mobile version