ಮೈಸೂರು: ಖ್ಯಾತ ಡ್ಯಾನ್ಸ್ ಮಾಸ್ಟರ್, ಬಹುಭಾಷ ನಟ ಪ್ರಭುದೇವ (Prabhu Deva) ಅವರ ಅಜ್ಜಿ ಪುಟ್ಟಮ್ಮಣ್ಣಿ (97) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಮೈಸೂರು ತಾಲೂಕಿನ ದೂರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಅಜ್ಜಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರಭುದೇವ ಹಾಗೂ ಸಹೋದರರು ಆಗಮಿಸಿದ್ದಾರೆ.
ಪುಟ್ಟಮ್ಮಣ್ಣಿ ಅವರು ಪ್ರಭುದೇವರ ತಾಯಿ ಮಹದೇವಮ್ಮ ಅವರ ತಾಯಿ. ಪಾರ್ಥಿವ ಶರೀರ ದರ್ಶನ ಮಾಡಲು ಚೆನ್ನೈನಿಂದ ಮೈಸೂರಿಗೆ ಪ್ರಭುದೇವ ಆಗಮಿಸಿದ್ದಾರೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಕಾರಿನ ಮೂಲಕ ದೂರ ಗ್ರಾಮಕ್ಕೆ ತೆರಳಿದ ಪ್ರಭುದೇವ ಸಹೋದರರು ತೆರಳಿದ್ದಾರೆ. ಇಂದು ದೂರ ಗ್ರಾಮದಲ್ಲಿ ಪುಟ್ಟಮ್ಮಣ್ಣಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಹಿರಿಯ ನೃತ್ಯ ಸಂಯೋಜಕ ಮೂಗೂರು ಸುಂದರಂ ಅವರು ಮೂಲತಃ ಟಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದವರು. ಅವರು ದೂರ ಗ್ರಾಮದ ವೈಸ್ ಚೇರ್ಮನ್ ಮಹದೇವಪ್ಪ ಮತ್ತು ಪುಟ್ಟಮ್ಮಣ್ಣಿ ಅವರ ಮಗಳು ಮಹದೇವಮ್ಮ ಅವರನ್ನು ವಿವಾಹವಾಗಿದ್ದರು. ನಂತರ ಚಿತ್ರರಂಗದಲ್ಲಿ ಯಶಸ್ಸು ಕಂಡು ಚೆನ್ನೈನಲ್ಲಿ ನೆಲೆಸಿದ್ದರು. ಅವರಿಗೆ ರಾಜು, ಪ್ರಭುದೇವ, ನಾಗೇಂದ್ರ ಸೇರಿ ಮೂವರು ಪುತ್ರರಿದ್ದಾರೆ.
ವಿದ್ಯಾರ್ಥಿನಿ ಆತ್ಮಹತ್ಯೆ; ಈಕೆ ಜೀವ ತೆಗೆದುಕೊಳ್ಳುವಂಥದು ಏನಾಗಿತ್ತು?
ಉಡುಪಿ: ಮಣಿಪಾಲದ ಹೆರ್ಗದಲ್ಲಿ ವೈಯಕ್ತಿಕ ಕಾರಣಕ್ಕೆ ಚಾರ್ಟರ್ಡ್ ಅಕೌಂಟೆಂಟ್ (chartered accountant) ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ (Student Self Harming) ಮಾಡಿಕೊಂಡಿದ್ದಾರೆ. ಕೌಟುಂಬಿಕ ಅಸೌಖ್ಯದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಚಿಕ್ಕಮಗಳೂರು ಕೊಪ್ಪ ತಾಲೂಕಿನ ಹರಂದೂರು ಗ್ರಾಮದ ಶ್ರೀನಿಧಿ ಶೆಟ್ಟಿ (20) ಆತ್ಮಹತ್ಯೆ ಮಾಡಿಕೊಂಡವರು. ಇವರು ಮಂಗಳೂರಿನ ಆಳ್ವಾಸ್ ಕಾಲೇಜಿನಲ್ಲಿ ಸಿಎ ವ್ಯಾಸಂಗ ಮಾಡುತ್ತಿದ್ದರು. ಬಾಡಿಗೆ ಮನೆಯ ರೂಮ್‌ನಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ | Hit and Run Case: ಮೈನಡುಗಿಸುವ ಆಕ್ಸಿಡೆಂಟ್ ವಿಡಿಯೊ; ಸೈಕಲ್ ಸವಾರನ ಜೀವ ತೆಗೆದ ಬಸ್
ಇವರು ಕೊಪ್ಪ ಹರಂದೂರು ಗ್ರಾಮದ ಮಹೇಶ್ ಎನ್ನುವವರ ಮಗಳಾಗಿದ್ದಾರೆ. ಮಹೇಶ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಡಯಾಲಿಸಿಸ್ ಹಿನ್ನಲೆಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೆರ್ಗ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ಮಗಳೊಂದಿಗೆ ವಾಸವಾಗಿದ್ದರು. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.