ಮೈಸೂರು: ಪ್ರಧಾನಿ ಮೋದಿ ನೇತೃತ್ವದ 8 ವರ್ಷದ ಸಾಧನೆಗಳ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆಗೆ ಮೈಸೂರುಕೊಡಗು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ತಾಲೂಕು ಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದ ಸಿದ್ದರಾಮಯ್ಯಗೆ ದೇಶದ ಎಕಾನಮಿ ಅರ್ಥ ಆಗೋದು ಹೇಗೆ? ಎಂದು ಲೇವಡಿ ಮಾಡಿದ್ದಾರೆ.
ಪ್ರಧಾನಿ ಮೋದಿ ಸರ್ಕಾರದ 8 ವರ್ಷದ ಸಾಧನೆಗಳ ಕುರಿತು ವಿವರಿಲು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪ್ರತಾಪ್ ಸಿಂಹ ಮಾತನಾಡಿದರು. ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದಲ್ಲಿ ಉಪಮುಖ್ಯಮಂತ್ರಿಯಾಗಿ ಹಾಗೂ ಮುಖ್ಯಮಂತ್ರಿಯಾಗಿ ಒಟ್ಟು 13 ಬಾರಿ ರಾಜ್ಯ ಬಜೆಟ್ ಮಂಡನೆ ಮಾಡಿದ್ದಾರೆ.
ಇದನ್ನೂ ಓದಿ | ಯೋಗದಿನದಲ್ಲಿ ರಾಜ್ಯ ಸರ್ಕಾರದ್ದು ಕೇವಲ ಪೋಷಕ ಪಾತ್ರ: ಸಂಸದ ಪ್ರತಾಪ್ ಸಿಂಹ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಯಾವುದೋ ಒಂದು ಲಾ ಕಾಲೇಜಿನಲ್ಲಿ ಲಾ ಓದಿದವರಿಗೆ ದೇಶದ ಎಕಾನಮಿ ಅರ್ಥ ಆಗೋದು ಹೇಗೆ? 13 ಬಜೆಟ್ ಬಿಡುಗಡೆ ಮಾಡಿದ್ದ ವ್ಯಕ್ತಿ ಈ ರೀತಿಯ ಅಸಂಬದ್ಧ ಹೇಳಿಕೆ ನೀಡುತ್ತಾರೆ. ಮೈಸೂರಿನಿಂದ ಇಂತಹ ಒಬ್ಬ ವಿಚಾರಹೀನ ವ್ಯಕ್ತಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಇವರು ನಮ್ಮೂರಿನವರು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ ಎಂದರು.
ಮೈಸೂರು ಮಹಾರಾಜರು ತಮ್ಮ ಸ್ವಂತ ದುಡ್ಡಿನಿಂದ ಮಾರುಕಟ್ಟೆ ನಿರ್ಮಾಣ ಮಾಡಿದ್ದರ ಎಂಬ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಸಿದ ಪ್ರತಾಪ್ ಸಿಂಹ, ಅನ್ನ ಭಾಗ್ಯ ಕೊಟ್ಟೆ ಅನ್ನ ಭಾಗ್ಯ ಕೊಟ್ಟೆ ಅನ್ನುವ ಸಿದ್ದರಾಮಯ್ಯ, ಅದನ್ನು ಸ್ವಂತ ದುಡ್ಡಿನಿಂದ ಮಾಡಿದ್ರ ? ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸ್ವಂತ ದುಡ್ಡಿನಲ್ಲಿ ಮಾಡಿದ್ದೇನು ? ಎಂದು ಪ್ರಶ್ನೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, 8 ವರ್ಷಗಳ ಕಾಲದಲ್ಲಿ ಭಾರತದ ಗೌರವ, ಘನತೆ ಹೆಚ್ಚಾಗಿದೆ. ಮೈಸೂರಿನಲ್ಲಿ 100% ನರೇಗಾ ಯಶಸ್ವಿಯಾಗಿದೆ. ಬಡವರಿಗೆ 5 ಕೋಟಿ ಮನೆ ಮಂಜೂರು ಮಾಡಲಾಗಿದೆ. ಪ್ರಧಾನ ಮಂತ್ರಿ ಅವಾಸ್ ಯೋಜನೆಯಲ್ಲಿ ಕರ್ನಾಟಕ ಅತ್ಯುತ್ತಮ ಸಾಧನೆ ಮಾಡಿದೆ. ಭಾರತ 2025ಕ್ಕೆ 5 ಬಿಲಿಯನ್ ಡಾಲರ್ ಎಕಾನಮಿ ಹೊಂದುತ್ತದೆ. ಜನೌಷಧಿ ಕೇಂದ್ರಗಳಿಂದ ಜನಸಾಮಾನ್ಯರಿಗೆ ಅನುಕೂಲವಾಗಿವೆ. ಕೇಂದ್ರದ ಜನೌಷಧ ಬಳಕೆಯಲ್ಲಿ ಮೈಸೂರು 7ನೇ ಸ್ಥಾನದಲ್ಲಿದೆ. ಮೈಸೂರಿಗೆ ₹1600 ಕೋಟಿ ಪೇಪರ್ ಮಿಲ್ ಅಭಿವೃದ್ಧಿಗೆ ನೀಡಿದ್ದಾರೆ ಎಂಬುದೂ ಸೇರಿ ಅನೇಕ ಯೋಜನೆಗಳನ್ನು ವಿವರಿಸಿದರು.
ಇದನ್ನೂ ಓದಿ | ʼಮೈಸೂರು ಹುಲಿʼಯನ್ನು ಕೈಬಿಟ್ಟಿಲ್ಲ: ಟಿಪ್ಪು ಸುಲ್ತಾನ್ ಪಾಠ ಇರಲಿದೆ ಎಂದ ನಾಗೇಶ್