Site icon Vistara News

Praveen Nettaru | ಬಂಧಿತ ಆರೋಪಿ ಶಫೀಕ್‌ ಪ್ರವೀಣ್‌ ತಂದೆ ಜತೆ ಕೆಲಸ ಮಾಡುತ್ತಿದ್ದ

Praveen Nettaru

ಮಂಗಳೂರು: ಪ್ರವೀಣ್ ಹತ್ಯೆ (Praveen Nettaru) ಪ್ರಕರಣದಲ್ಲಿ ಆರೋಪಿಗಳ ಬಂಧನವಾಗಿರುವ ಹಿನ್ನೆಲೆಯಲ್ಲಿ ಆರೋಪಿ ಶಫೀಕ್ ಪತ್ನಿ ಪೊಲೀಸ್‌ ಠಾಣೆಗೆ ಆಗಮಿಸಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ಪತಿಯ ಯಾವುದೇ ಕೈವಾಡ ಇಲ್ಲ ಎಂದು ಹೇಳಿದ್ದಾರೆ.

ಮಂಗಳವಾರ ರಾತ್ರಿ ಬೆಳ್ಳಾರೆಯಲ್ಲಿ ಪ್ರವೀಣ್‌ ನೆಟ್ಟೂರು ಹತ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ಸುಮಾರು 27ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದರು. ಇದರಲ್ಲಿ ಶಫೀಕ್‌ ಪತ್ನಿ ಗುರುವಾರ ಪೊಲೀಸ್‌ ಠಾಣೆಗೆ ಆಗಮಿಸಿದ್ದು, ತನ್ನ ಪತಿಯ ಕೈವಾಡ ಇಲ್ಲ. ಅವರನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿದ್ದಾರೆ.

ನನ್ನ ಗಂಡ ಪಿಎಫ್‌ಐನಲ್ಲಿ ಇರೋದು ನಿಜ. ಆದರೆ, ಅವರು ಈ ಕೊಲೆ ಮಾಡಿರಲು ಸಾಧ್ಯವಿಲ್ಲ. ಅವರು ಪ್ರವೀಣ್ ಕೊಲೆಯಲ್ಲಿ ಭಾಗಿಯಾಗಿರಲು ಸಾಧ್ಯವಿಲ್ಲ. ಅವರ ತಂದೆ ಪ್ರವೀಣ್ ಅವರ ಜತೆಗೆ ಕೆಲಸ ಮಾಡುತ್ತಿದ್ದರು. ನನ್ನ ಪತಿಗೆ ಪ್ರವೀಣ್ ಜತೆಗೆ ಉತ್ತಮ ಸಂಬಂಧ ಇತ್ತು. ವಿನಾಕಾರಣ ನನ್ನ ಪತಿಯನ್ನು ಆರೋಪಿಯನ್ನಾಗಿ ಮಾಡಬೇಡಿ ಎಂದು ಶಫೀಕ್‌ ಪತ್ನಿ ಮನವಿ ಮಾಡಿದ್ದಾರೆ.

Exit mobile version