Site icon Vistara News

PSI Scam‌ | ಜೈಲಿನಲ್ಲಿರುವ ಅಮೃತ ಪಾಲ್‌ಗೆ ಮಾನಸಿಕ ಖಿನ್ನತೆ; ನಿಮ್ಹಾನ್ಸ್ ವೈದ್ಯರಿಂದ ಚಿಕಿತ್ಸೆ

ಅಮೃತ್‌ ಪಾಲ್

ಬೆಂಗಳೂರು: ಪಿಎಸ್ಐ ಅಕ್ರಮ (PSI Scam) ನೇಮಕಾತಿ ಪ್ರಕರಣ ಸಂಬಂಧ ಸೆಂಟ್ರಲ್ ಜೈಲಿನಲ್ಲಿ ಆರೋಪಿ ಎಡಿಜಿಪಿ ಅಮೃತ ಪಾಲ್ ನ್ಯಾಯಾಂಗ ಬಂಧನದಲ್ಲಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಹೀಗಾಗಿ ಸೆಂಟ್ರಲ್‌ ಜೈಲಿನ ಅಧಿಕಾರಿಗಳು ನಿಮ್ಹಾನ್ಸ್ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದಾರೆ.

ಒತ್ತಡಕ್ಕೆ ಒಳಗಾಗಿರುವ ಅಮೃತ ಪಾಲ್ ಜೈಲಿನಲ್ಲಿ ಗಲಾಟೆ, ರಂಪಾಟ ಮಾಡುತ್ತಿದ್ದು, ಖಿನ್ನತೆಗೊಳಗಾಗಿ ಕೂಗಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಪ್ರತ್ಯೇಕ ಕೊಠಡಿಯಲ್ಲಿ ಬಂಧಿಯಾಗಿರುವ ಅಮೃತಪಾಲ್‌ರನ್ನು ನೋಡಿಕೊಳ್ಳಲು ಒಬ್ಬ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

ಶಾಂತಕುಮಾರ್‌ನನ್ನು ನಂಬಿ ಕೆಟ್ಟೆ

ಹಿರಿಯ ಅಧಿಕಾರಿಗಳನ್ನು ನಂಬಿ ನಾನು ಹಾಳಾಗಿರುವೆ, ಕಂಬಿ ಹಿಂದೆ ಬರಲು ನಮ್ಮ ಹಿರಿಯ ಅಧಿಕಾರಿಗಳೇ ಕಾರಣವೆಂದು ಆರೋಪಿ ಶಾಂತಕುಮಾರ್‌ನನ್ನು ಬೈದುಕೊಂಡು ಓಡಾಡುತ್ತಿದ್ದಾರೆ ಎನ್ನಲಾಗಿದೆ. ಶಾಂತಕುಮಾರ್ ನಂಬಿ ನನ್ನ ಜೀವನವೇ ಹಾಳಾಯಿತು. ಹೇಗಾದರೂ ಮಾಡಿ ಜೈಲಿನಿಂದ ನನ್ನ ಹೊರಗಡೆ ಕರೆತನ್ನಿ ಎಂದು ಹೇಳುತ್ತಿರುವ ಅವರು, ಕುಟುಂಬಸ್ಥರ ಬಳಿಯೂ ಅಳಲು ತೋಡಿಕೊಳ್ಳುತ್ತಿದ್ದಾರೆನ್ನಲಾಗಿದೆ.

ಇದನ್ನೂ ಓದಿ | PSI scam | ಅಮೃತ್‌ ಪಾಲ್‌ಗೆ 14 ದಿನಗಳ ನ್ಯಾಯಾಂಗ ಬಂಧನ: 1ನೇ ಎಸಿಎಂಎಂ ಕೋರ್ಟ್‌ ಆದೇಶ

ಅಮೃತ್‌ ಪಾಲ್‌ ಮೇಲಿರುವ ಆರೋಪವೇನು?

545 ಪಿಎಸ್‌ಐ ಅಕ್ರಮದಲ್ಲಿ ಎಡಿಜಿಪಿ ಅಮೃತ್‌ ಪಾಲ್‌ ಹಾಗೂ ಆರೋಪಿ ಶಾಂತಕುಮಾರ್‌ ನಡುವೆ 1.36 ಕೋಟಿ ರೂಪಾಯಿ ಹಣ ವರ್ಗಾವಣೆ ಆಗಿದ್ದು, ಮೊಬೈಲ್‌ ದತ್ತಾಂಶವನ್ನು ಅಳಿಸಿ ಹಾಕಲಾಗಿದೆ ಎಂದು ಸಿಐಡಿ ತಂಡ ಆರೋಪಿಸಿದೆ. ಸತತ ಮೂರು ಬಾರಿ ವಿಚಾರಣೆ ನಡೆಸಿದ ಸಿಐಡಿ ಜುಲೈ 4ರಂದು ಅಮೃತ್‌ ಪಾಲ್‌ರನ್ನು ವಶಕ್ಕೆ ಪಡೆದುಕೊಂಡಿತ್ತು. ಬಳಿಕ ಜುಲೈ 16ರಂದು ನ್ಯಾಯಾಂಗ ಬಂಧನಕ್ಕೆ ಕೋರ್ಟ್‌ ಆದೇಶಿಸಿದೆ.

ಕುಟುಂಬದವರ ಭೇಟಿಗೆ ಅವಕಾಶ

ಕುಟುಂಬದವರ ಭೇಟಿಗೆ ಕೋರ್ಟ್‌ ಅವಕಾಶ ಕಲ್ಪಿಸಿದ್ದು, ಜೈಲಿನಲ್ಲಿರುವ ಸಮಯದಲ್ಲಿ ದಿನದಲ್ಲಿ 30 ನಿಮಿಷ ಕುಟುಂಬಸ್ಥರ ಭೇಟಿಗೆ ಅನುಮತಿ ನೀಡಲಾಗಿದೆ. ಅನಾರೋಗ್ಯದ ಕಾರಣದಿಂದಾಗಿ ಮನೆಯಿಂದಲ್ಲೇ ಊಟದ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ | PSI Scam | ಎಡಿಜಿಪಿ ಅಮೃತ್‌‌ ಪಾಲ್ ಆಪ್ತರ ಹೆಸರಲ್ಲಿ ಕೋಟಿ ಕೋಟಿ ಆಸ್ತಿ

Exit mobile version