ರಾಮನಗರ: ಒಂದೇ ಕುಟುಂಬದಲ್ಲಿ ಒಬ್ಬರಿಗೊಬ್ಬರು ಕ್ಷೇತ್ರವನ್ನು ಬಿಟ್ಟುಕೊಡುವ ಕುರಿತು ವ್ಯಂಗ್ಯವಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ(C.T. Ravi) , ಕುಮಾರಣ್ಣ ಮತ್ತು ಅನಿತಾ ಕುಮಾರಸ್ವಾಮಿ ಅವರ ಎದುರು ಶಿಬಿ ಚಕ್ರವರ್ತಿ ಹಾಗೂ ದಧೀಚಿ ಮಹರ್ಷಿಯೂ ಲೆಕ್ಕಕ್ಕಿಲ್ಲ ಎಂದು ಹೇಳಿದ್ದಾರೆ. ರಾಮನಗರದ ಅಚಲು ಗ್ರಾಮದಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯಸಂಕಲ್ಪ ಅಭಿಯಾನದಲ್ಲಿ ಭಾಗವಹಿಸಿ ಸಿ.ಟಿ. ರವಿ ಮಾತನಾಡಿದರು.
ಈ ಹಿಂದೆ ಒಂದು ಪಾರಿವಾಳಕ್ಕಾಗಿ ತನ್ನ ದೇಹದ ಮಾಂಸವನ್ನೇ ಕಿತ್ತುಕೊಟ್ಟ ಶಿಬಿ ಚಕ್ರವರ್ತಿ ಇದ್ದ. ಅಸುರನ ಸಂಹಾರಕ್ಕೆ ತನ್ನ ಬೆನ್ನು ಮೂಳೆಯನ್ನೇ ಕೊಟ ದಧೀಚಿ ಮಹರ್ಷಿ ಇದ್ದರು. ಆದರೆ ಈಗ ರಾಮನಗರದಲ್ಲಿ ಒಂದು ತ್ಯಾಗದ ನಾಟಕ ನಡೀತಿದೆ. ಈ ತ್ಯಾಗ ರಾಮನಗರದ ಜನರ ಹಿತಕ್ಕಾಗಿ ತ್ಯಾಗವಲ್ಲ. ಕುಮಾರಸ್ವಾಮಿ ಅನಿತಾಕುಮಾಸ್ವಾಮಿ ಅವರಿಗೆ ಕ್ಷೇತ್ರ ಬಿಟ್ಟಿದ್ದು ತ್ಯಾಗ. ಈಗ ಅಮ್ಮ ಮಗನಿಗಾಗಿ ಬಿಟ್ಟದ್ದು ಬಹುದೊಡ್ಡ ತ್ಯಾಗ. ಇವರ ಮುಂದೆ ಶಿಬಿ ಚಕ್ರವರ್ತಿ, ದಧೀಚಿ ತ್ಯಾಗ ಎಲ್ಲವೂ ಕಳೆದುಹೋದವು. ಈಗ ತ್ಯಾಗದ ಪರಮಮೂರ್ತಿಗಳಾಗಿ ಇರುವುದು ಕುಮಾರಣ್ಣ, ಅನಿತಾ ಅಕ್ಕ ಎಂದು ವ್ಯಂಗ್ಯವಾಡಿದರು.
ನಾನು ಹಿಂದು ಎಂದು ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿ, ಈಗ ಹೇಳುತ್ತಿದ್ದಾರೆ. ಹಿಂದೂ ಆದವರು ರಾಮಮಂದಿರ ಕಟ್ಟಲು ವಿರೋಧ ಮಾಡ್ತಾರ? ಹಿಂದೂ ಆದವರೂ ಟಿಪ್ಪು ಜಯಂತಿ ಆಚರಿಸಲ್ಲ. ನಾಲ್ವಡಿ ಕೃಷ್ಣರಾಜ ಅರಸ್ ಜಯಂತಿ ಆಚರಣೆ ಮಾಡ್ತಾರೆ. ಕುಂಕುಮ ಕಂಡರೆ ಆಗದವರು ಯಾವ ಸೀಮೆ ಹಿಂದೂ? ಕೇಸರಿ ಕಂಡರೆ ಅಲರ್ಜಿ ಇರೋರು ಎಲ್ಲರನ್ನ ಪ್ರೀತ್ಸೋ? ಜನರಾ? ನಮ್ಮ ರಾಷ್ಟ್ರಧ್ವಜದಲ್ಲೇ ಕೇಸರಿ ಇದೇ, ಅದನ್ನು ದೂರ ಇಡ್ತಾರ? ನಮ್ಮ ಎಲ್ಲಾ ಸ್ವಾಮೀಜಿಗಳು ಧರಿಸುವ ಬಟ್ಟೆಯೂ ಕೇಸರಿ. ಇವರಿಗೆ ಅವರ ಆರ್ಶೀವಾದ ಬೇಕು, ಕೇಸರಿ ಆಗಲ್ವ? ಎಂದರು.
ಇದನ್ನೂ ಓದಿ : Chikkamagakuru Jilla Utsava: ಜಿಲ್ಲಾ ಉತ್ಸವದಲ್ಲಿ ಎತ್ತಿನ ಗಾಡಿ ಓಡಿಸಿದ ಸಿ.ಟಿ. ರವಿ; ಕೃಷಿ ಕಾರ್ಯಕ್ರಮಕ್ಕಾಗಿ ಅಣ್ಣಾಮಲೈ ಭಾಗಿ
ನನ್ನ ಹೆಣ ಸಹ ಬಿಜೆಪಿಗೆ ಹೋಗಲ್ಲ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮನುಷ್ಯನ ಹೆಣಕ್ಕೆ ಮೂರುಕಾಸಿನ ಬೆಲೆಯಿಲ್ಲ ಎಂದು ಅವರಿಗೆ ಗೊತ್ತಿದೆ. ಹೆಣ ತಗೊಂಡು ರಾಜಕಾರಣ ಮಾಡಲು ಆಗಲ್ಲ. ಹೆಣ ಎದ್ದು ಬಂದು ಓಟ್ ಹಾಕುತ್ತ? ಹೆಣನಾ ಯಾರು ಸಹ ಅವರ ಮನೆಯಲ್ಲೂ ಮೂರು ದಿನ ಇಟ್ಟುಕೊಳ್ಳಲ್ಲ. ಅವರು ನೂರು ವರ್ಷ ಬದುಕಿರಲಿ, ನಮಗೆ ಆ ಅವಶ್ಯಕತೆ ಇಲ್ಲ. ಅವರು ಇಲ್ಲದೇ ಕೇಂದ್ರದಲ್ಲಿ ಬಿಜೆಪಿ 4 ನೇ ಬಾರಿ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ 3 ನೇ ಬಾರಿ ಅಧಿಕಾರಕ್ಕೆ ಬಂದಿದೆ. ಹತಾಷೆಯಿಂದ ಅವರು ಮಾತನಾಡ್ತಿದ್ದಾರೆ ಎಂದರು.
ನಾನು ಸಿದ್ರಾಮುಲ್ಲಾಖಾನ್ ಎಂದು ಹೆಸರು ಇಟ್ಟಿಲ್ಲ ಎಂದ ಸಿ.ಟಿ. ರವಿ, ಜನರು ಅವರಿಗೆ ಇಟ್ಟಿರುವ ಹೆಸರು ಅದು. ಈಗ ಹುಲಿಯಾ ಅಂತಾರೆ ಅವರನ್ನ. ಅವರ ತಂದೆ ತಾಯಿ ಇಟ್ಟಿದ್ದರ ಆ ಹೆಸರನ್ನು? ನನ್ನನ್ನ ಹಿಂದೂ ಹುಲಿ ಅಂತಾರೆ. ನಮ್ಮಪ್ಪ ಇಟ್ಟ ಹೆಸರು ಇದು, ಪ್ರೀತಿಯಿಂದ ಜನ ಇಟ್ಟಿದ್ದು ಅದು. SDPI, PFI ಗೆ ಬೆಂಬಲ ಕೊಟ್ರು. ಅವರು ಯಾರ ಮೇಲೆ ಕತ್ತಿ ಇಟ್ಟರು? ನಮ್ಮ ಬಿಜೆಪಿ ಶಾಸಕರ ಮೇಲೆ ಕತ್ತಿ ಇಟ್ರಾ? ತನ್ವೀರ್ ಸೇಠ್ ಮೇಲೆ ಕತ್ತಿ ಇಟ್ಟರು. ಡಿಜೆ ಹಳ್ಳಿ – ಕೆಜೆ ಹಳ್ಳಿ ಗ್ಯಾಂಗ್ ಗೆ ಬೆಂಬಲ ಕೊಡೋ ಕಾಂಗ್ರೆಸ್ ನೀತಿ. ಆ ನೀತಿ ಮತ್ತೆ ಬರಬೇಕಾ, ವಿಸ್ತರಣೆ ಆಗಬೇಕಾ? ಅದು ಬರಬಾರದು, ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.
ಉಪಕಾರ ಮಾಡಿದವರಿಗೆ ಅಪಕಾರ ಮಾಡುವುದಿಲ್ಲ
ಇವತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡವರಿಗೆ ಬಲ ಕೊಡುವ ಕೆಲಸ ಮಾಡ್ತಿದೆ. ಬ್ಯಾಂಕ್ ಅಕೌಂಟ್ ಇರಲಿಲ್ಲ ಜನ್ ದನ್ ಖಾತೆ ಮಾಡಿದೆ. ಕೋವಿಡ್ ಸಂಕಟದಲ್ಲಿ 500 ರೂ. ಮೂರು ಬಾರಿ ಹಣ ಹಾಕಿತ್ತು. ನಮ್ಮ ಪಕ್ಕದ ಪಾಕಿಸ್ತಾನ ಗೋದಿ ಹಿಟ್ಟಿಗೆ ದರೋಡೆ ಮಾಡ್ತಿದೆ. ಸಿನಿಮಾ ನಟಿ ರಮ್ಯಾ ಪಾಕಿಸ್ತಾನ ಸ್ವರ್ಗಕ್ಕೆ ಹೋಲಿಕೆ ಮಾಡ್ತಾರೆ. ಕೊರೋನಾ ಕಾಲದಲ್ಲಿ 88 ಕೋಟಿ ಜನರಿಗೆ ಉಚಿತ ಪಡಿತರ ಕೊಡಲಾಯಿತು. ರೈತರಿಗೆ ಬಲ ಕೊಡಲು ಕಿಸಾನ್ ಸಮ್ಮಾನ್ ಯೋಜನೆ ಕೊಟ್ರು. ಪ್ರಧಾನಿ ಮೋದಿ ಎಲ್ಲೂ ಕೂಡ ಡಂಗೂರ ಮಾಡಲಿಲ್ಲ. ಆದ್ರೆ ಕೆಲವರು ರೈತರ ಹೆಸರು ಹೇಳಿಕೊಂಡರೇ ಹೊರತು ರಾಜಕೀಯ ಮಾಡಲಿಲ್ಲ. ರಾಮನಗರ, ಮಂಡ್ಯದಲ್ಲಿ ಬಿಜೆಪಿ ಒಂದು ಸೀಟು ಗಳು ಗೆದ್ದಿರಲಿಲ್ಲ, ಈಗ ಒಂದು ಗೆದ್ದಿದೆ. ಆದ್ರೆ ಈ ಭಾಗದಲ್ಲೇ ಅತೀ ಹೆಚ್ಚು ಜನರು ಹೈನುಗಾರಿಕೆ ಮಾಡ್ತಾರೆ. ಆದ್ರೆ ಹಾಲಿನ ಸಬ್ಸಿಡಿ ಹೆಚ್ಚು ಮಾಡಿದ್ದು ಯಡಿಯೂರಪ್ಪ ಸಿಎಂ ಆಗಿದ್ದಾಗ. ಕೋವಿಡ್ ಹಂಚಿದ್ದು ಚೀನಾ ದೇಶ, ನಮ್ಮ ದೇಶದ ಜನಸಂಖ್ಯೆ 150 ಕೋಟಿ. ನಮ್ಮಲ್ಲಿ ಇಂಜೆಕ್ಷನ್ ಕಂಡುಹಿಡಿಯುವ ಮೊದಲು ಅಮೆರಿಕದಲ್ಲಿ ಇಂಜೆಕ್ಷನ್ ಗೆ 7 ಸಾವಿರ ಆಗಿತ್ತು. ಆದ್ರೆ ಈಗ ನಮ್ಮ ದೇಶದಲ್ಲಿ ಎಲ್ಲರೂ ಎರಡು ಇಂಜೆಕ್ಷನ್ ತಗೊಂಡು ಈ ಡೋಸ್ ಲಸಿಕೆ ಪಡೆಯುತ್ತಿದ್ದಾರೆ. ಇದಕ್ಕೆಲ್ಲಾ ಸಹಕಾರಿಯಾಗಿದ್ದು ಬಿಜೆಪಿ ಸರ್ಕಾರ, ಪ್ರಧಾನಿ ಮೋದಿಯವರು. ನಮ್ಮ ಹಿಂದೂ ಧರ್ಮದಲ್ಲಿ ಉಪಕಾರ ಮಾಡಿದವರಿಗೆ ಅಪಕಾರ ಮಾಡಲ್ಲ ಎಂದರು.
ನಾನು ಉತ್ತರ ಪ್ರದೇಶದಲ್ಲಿ ಎಲೆಕ್ಷನ್ ಪ್ರಚಾರಕ್ಕೆ ಹೋಗಿದ್ದೆ. ಅಲ್ಲಿನ ಜನ ಮೋದೀಜಿ, ಯೋಗೀಜಿಯಿಂದ ಅನ್ನ ತಿಂದಿದ್ದೀವಿ ಮೋಸ ಮಾಡಲ್ಲ ಅಂದ್ರು. ಬುಲ್ಡೋಜರ್ ಅಂದ್ರೆ ಚಪ್ಪಾಳೆ ಹೊಡೆತ್ತಿದ್ರು ಯಾಕೆ ಗೊತ್ತಾ..? ಯಾರು ದಬ್ಬಾಳಿಕೆ ಮಾಡ್ತಿದ್ರು, ದಲಿತರ ಮೇಲೆ ದರ್ಪ ಮಾಡದತಿದ್ರು ಅವರ ಮನೆಮೇಲೆ ಬುಲ್ಡೋಜರ್ ಹತ್ತಿದ್ದು. ಶ್ರೀಮಂತರ ಮನೆ ಮೇಲೆ ಬುಲ್ಡೋಜರ್ ಹೋಗಲಿಲ್ಲ. ನನಗೆ ವಿಶ್ವಾಸ ಇದೆ, ರಾಮನಗರದಲ್ಲಿ ಕಮಲ ಅರಳುತ್ತೆ. ಪಕ್ಷ ಯಾರಿಗೇ ಟಿಕೆಟ್ ಕೊಟ್ರು ಒಗ್ಗಟ್ಟಿನಿಂದ ಕೆಲಸ ಮಾಡಿ. ಜೆಡಿಎಸ್ ಭದ್ರಕೋಟೆಯನ್ನ ಬಿಜೆಪಿ ಭೇದಿಸಲಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಕಮಲ ಅರಳೋದು ಪಕ್ಕಾ ಎಂದರು.