ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಯ್ಕೆ ಪರೀಕ್ಷೆ ಅಕ್ರಮದಲ್ಲಿ (PSI Scam) ಇನ್ನೊಂದು ಬಂಧನವಾಗಿದೆ. PSI ಹುದ್ದೆಗೆ ಆಯ್ಕೆಯಾಗಿದ್ದ 545 ಅಂತಿಮ ಪಟ್ಟಿಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ ಕುಶಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪಿಎಸ್‌ಐ ಅಕ್ರಮದಲ್ಲಿ (PSI Scam) ಅನೇಕ ರ‍್ಯಾಂಕ್ ಪಡೆದವರನ್ನು ಈಗಾಗಲೆ ಪೊಲೀಸರು ಬಂಧಿಸಿದ್ದಾರೆ. ಲಂಚ ನೀಡಿ ಒಎಂಆರ್ ಶೀಟ್ ತಿದ್ದಿ ರ‍್ಯಾಂಕ್ ಗಿಟ್ಟಿಸಿಕೊಂಡವರಿದ್ದಾರೆ. ಆದರೆ ಇದೀಗ ಪಟ್ಟಿಯಲ್ಲಿ ಮೊದಲ ರ‍್ಯಾಂಕ್ ಪಡೆದವನನ್ನೇ ಪೊಲೀಸರು ಬಂಧಿಸಿರುವುದು ಇಡೀ ಅಕ್ರಮ ಯಾವ ಮಟ್ಟಿಗೆ ನಡೆದಿರಬಹುದು ಎಂಬುದರ ಸೂಚನೆಯನ್ನು ನೀಡಿದೆ.
ಇದನ್ನೂ ಓದಿ | ದರ್ಶನ್ ಗೌಡ ಅಕ್ರಮವಾಗಿ ಪಿಎಸ್ಐ ಹುದ್ದೆ ಗಿಟ್ಟಿಸಿದ್ದಕ್ಕೆ ಸಿಕ್ತು ಪುರಾವೆ: ಎಫ್‌ಎಸ್‌ಎಲ್ ವರದಿಯಲ್ಲಿ ಇರೋದೇನು?
ಇದೀಗ ಬಂಧಿತ ಕುಶಾಲ್ ಮಾಗಡಿಯ ಜುಟ್ಟನಹಳ್ಳಿಯವನು. 200 ಅಂಕಗಳಿಗೆ 168 ಅಂಕ ಪಡೆದಿದು ಫಸ್ಟ್ ರ‍್ಯಾಂಕ್ ಪಡೆದಿದ್ದ. ಕುಶಾಲ್, ಸರ್ಕಾರದ ಸಚಿವರೊಬ್ಬರ ರೂರದ ಸಂಬಂಧಿ ಎಂದೂ ಹೇಳಲಾಗುತ್ತಿದೆ. ಕುಶಾಲ್ ತಂದೆ ಸ್ಥಳೀಯ ರಾಜಕಾರಣಿಯಾಗಿದ್ದು, ಜುಟ್ಟನಹಳ್ಳಿ ಜಯರಾಮಣ್ಣ ಎಂದು ಪರಿಚಿತರು.
ಈಗಾಗಲೆ ಪ್ರಕರಣದಲ್ಲಿ ಬಂಧಿತನಾಗಿರುವ ಮಾಗಡಿ ಮೂಲದ ದರ್ಶನ್ ಗೌಡ ಹಾಗೂ ಕುಶಾಲ್ ಇಬ್ಬರೂ ಸ್ನೇಹಿತರು. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಕುಶಾಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | PSI Scam | ಸಚಿವರ ಹೆಸರು ಹೇಳಿ ತಪ್ಪಿಸಿಕೊಂಡಿದ್ದ ಅಭ್ಯರ್ಥಿ ಬಂಧನ