ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟು ಬಳಿ ಈಜಲು ಹೋಗಿದ್ದ ಐವರು ಪ್ರವಾಸಿಗರು ದಾರುಣವಾಗಿ ಮೃತಪಟ್ಟಿರುವ ಘಟನೆ (Drown in Mekedatu) ಸೋಮವಾರ ನಡೆದಿದೆ. ಬೆಂಗಳೂರು ಮೂಲದ ಮೂವರು ಯುವಕರು, ಇಬ್ಬರು ಯುವತಿಯರು ನೀರಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ.
ರಾಜಾಜಿನಗರ 2ನೇ ಹಂತದ ಕೆಎಲ್ಇ ಕಾಲೇಜಿನ ವರ್ಷ (20), ಬಿಹಾರ ಮೂಲದ ಮಲ್ಲೇಶ್ವರ ಸರ್ಕಾರಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಅಭಿಷೇಕ್ (20), ಮಂಡ್ಯ ಮೂಲದ ಚಿಕ್ಕಬಾಣಾವರ ಆರ್.ಆರ್ ಕಾಲೇಜಿನ 2ನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಅರ್ಪಿತಾ ಎನ್.ಎಲ್, ಚಿತ್ರದುರ್ಗ ಮೂಲದ ವಿಜಯನಗರ ಸರ್ಕಾರಿ ಪದವಿ ಕಾಲೇಜಿನ ಬಿಸಿಎ 2ನೇ ವರ್ಷದ ವಿದ್ಯಾರ್ಥಿ ತೇಜಸ್ (21), ಆರ್.ಆರ್ ನಗರದ ಕೆಎಲ್ಇ ಕಾಲೇಜಿನ ನೇಹಾ (19) ಮೃತರು.
5 ಜನರ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರಕ್ಕೆ ತೆಗೆದಿದ್ದಾರೆ. ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಅರಣ್ಯಾಧಿಗಳು ಹಾಗೂ ಸಾತನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ದಯಾನಂದ ವಿದ್ಯಾಸಾಗರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕಾವೇರಿ ನದಿ ದಾಟುವಾಗ ಕಾಲುಜಾರಿ ನೀರಿಗೆ ಬಿದ್ದು ಐವರು ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಒಟ್ಟು 12 ಕಾಲೇಜು ವಿದ್ಯಾರ್ಥಿಗಳು ಟಿಟಿ ವಾಹನದಲ್ಲಿ ಮೇಕೆದಾಟು ನೋಡಲು ಹೋಗಿದ್ದರು. ಸಂಗಮದಲ್ಲಿ ಕೈ ಹಿಡಿದು ಮತ್ತೊಂದು ದಡಕ್ಕೆ ಹೋಗುವಾಗ ದುರ್ಘಟನೆ ನಡೆದಿದೆ.
ಕೆರೆಯಲ್ಲಿ ಕಾಲು ಜಾರಿ ಬಿದ್ದು ತಂದೆ-ಮಗಳು ಸಾವು
ಕೋಲಾರ: ಕೆರೆಯಲ್ಲಿ ಕಾಲು ಜಾರಿ ಬಿದ್ದು ತಂದೆ-ಮಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಗ್ರಾಮದ ವೃಷಭಾವತಿ ಕರೆಯಲ್ಲಿ ನಡೆದಿದೆ. ಮಜರಾಗೊಲ್ಲಹಳ್ಳಿ ಗ್ರಾಮದಲ್ಲಿ ಮದುವೆ ಕಾರ್ಯಕ್ರಮಕ್ಕೆಂದು ಬಂದಿದ್ದ ತಂದೆ-ಮಗಳು, ಕೆರೆ ಬಳಿ ಸೆಲ್ಫಿ ತೆಗದುಕೊಳ್ಳಲು ಹೋದಾಗ, ಮಗಳು ಕಾಲು ಜಾರಿ ನೀರಗೆ ಬಿದ್ದಿದ್ದಾಳೆ. ಹೀಗಾಗಿ ಮಗಳನ್ನು ರಕ್ಷಿಸಲು ಹೋದ ತಂದೆಯೂ ಮುಳುಗಿದ್ದಾರೆ
ಬೆಂಗಳೂರು ಮೂಲದ ಸಯ್ಯದ್ ಅಯ್ಯೂಬ್ (35) ಹಾಗೂ ಫಾತಿಮಾ (10) ಮೃತ ತಂದೆ, ಮಗಳು. ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ | Physical Abuse: ಮದುವೆಗೊಪ್ಪದ ಬಾಲಕಿಯ ಅತ್ಯಾಚಾರ; ಕೆನ್ನೆಯ ಮೇಲೆ ಬಿಸಿ ಕಬ್ಬಿಣದಿಂದ ಪಾಗಲ್ ಪ್ರೇಮಿ ಹೆಸರು!
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್; ಬಾಲಕಿಯನ್ನು ಪುಸಲಾಯಿಸಿ ಕರೆತಂದ ಅನ್ಯಕೋಮಿನ ಯುವಕ!
ಹುಬ್ಬಳ್ಳಿ: ನೇಹಾ ಹಿರೇಮಠ್ ಹತ್ಯೆ ಪ್ರಕರಣದ ಬೆನ್ನಲ್ಲೇ ನಗರದಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ (Love Jihad Case) ಬೆಳಕಿಗೆ ಬಂದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ಕರೆತಂದಿದ್ದ ಅನ್ಯಕೋಮಿನ ಯುವಕನಿಗೆ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ | Jatra Rathotsava: ಇಂಡಿಯ ಕಮರಿಮಠದ ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ದುರ್ಮರಣ; ಮತ್ತೊಬ್ಬ ಗಂಭೀರ
ಹುಬ್ಬಳ್ಳಿಯ ಗಬ್ಬೂರನಲ್ಲಿ ಅನ್ಯಕೋಮಿನ ಯುವಕನ ಜತೆ ಬಾಲಕಿ ಇದ್ದಳು. ಬಾಗಲಕೋಟೆ ಜಿಲ್ಲೆಯಿಂದ ಹುಬ್ಬಳ್ಳಿಗೆ ಬಾಲಕಿಯನ್ನು ಯುವಕ ಕರೆತಂದಿದ್ದ. ಗಬ್ಬೂರ ಹೋಟೆಲ್‌ನಲ್ಲಿ ಇದ್ದವನನ್ನು ಗಮನಿಸಿ ಸ್ಥಳೀಯರು ಪೊಲೀಸ್ ಸ್ಟೇಷನ್‌ಗೆ ಕರೆದೊಯ್ದಿದ್ದಾರೆ. ಈ ವೇಳೆ ಹಿಂದು ಜಾಗರಣಾ ವೇದಿಕೆ ಮುಖಂಡರು, ಯುವಕನಿಗೆ ಥಳಿಸಿ, ಹುಬ್ಬಳ್ಳಿಯ ಬೇಂಡಿಗೇರಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಅಪ್ರಾಪ್ತ ಬಾಲಕಿ ಕಾಣೆಯಾಗಿರುವ ಕುರಿತು ಕೇಸ್ ದಾಖಲಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.