Site icon Vistara News

ಸೆಲ್ಫಿ ತೆಗೆಯಲು ಹೋದ ಕಾಲೇಜು ವಿದ್ಯಾರ್ಥಿಗಳಿಬ್ಬರು ನೀರುಪಾಲು

ಉಡುಪಿ: ಸೈಂಟ್ ಮೇರಿಸ್ ದ್ವೀಪದಲ್ಲಿ ಸೆಲ್ಫಿ ತೆಗೆಯಲು ಹೋಗಿ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳಿಬ್ಬರು ನೀರುಪಾಲಾಗಿದ್ದಾರೆ.
ಮಲ್ಪೆ ಬೀಚ್ ಸಮೀಪದ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಬಂದಿದ್ದ ಬೆಂಗಳೂರಿನ GKVK ಕೃಷಿ ಕಾಲೇಜು ವಿದ್ಯಾರ್ಥಿಗಳು ಇವರಾಗಿದ್ದು, ಲೈಫ್ ಗಾರ್ಡ್ ಸಿಬ್ಬಂದಿಗಳ ಸೂಚನೆ ಮೀರಿ ಸಮುದ್ರದ ಕಡಿದಾದ ಅಂಚಿಗೆ ಸೆಲ್ಫಿ ತೆಗೆಯಲು ಹೋಗಿದ್ದರು. ಅಲೆಯ ಹೊಡೆತಕ್ಕೆ ಇಬ್ಬರೂ ಕೊಚ್ಚಿಕೊಂಡು ಹೋಗಿದ್ದಾರೆ.
ತಕ್ಷಣವೇ ಅವರ ರಕ್ಷಣೆಗೆ ಮುಂದಾದ ಜೀವರಕ್ಷಕ ಸಿಬ್ಬಂದಿ ಹರಸಾಹಸ ಮಾಡಿದರೂ ಇಬ್ಬರ ಜೀವ ಉಳಿಸಲಾಗಲಿಲ್ಲ. ಇಬ್ಬರಲ್ಲಿ ಒಬ್ಬನ ಶವವನ್ನು ಲೈಫ್ ಗಾರ್ಡ್ ಸಿಬ್ಬಂದಿ ನೀರಿನಿಂದ ಮೇಲಕ್ಕೆತ್ತಿದ್ದಾರೆ. ನೀರು ಪಾಲದ ಮತ್ತೊಬ್ಬ ಯುವಕನಿಗೆ ಶೋಧ ನಡೆದಿದೆ.
ಮೃತರಾದವರನ್ನು ಸತೀಶ್ (21) ಹಾಗೂ ಸತೀಶ್ (21) ಎಂದು ಗುರುತಿಸಲಾಗಿದೆ. ಬೆಂಗಳೂರಿನ GKVK ಕೃಷಿ ಕಾಲೇಜಿನ 68 ವಿದ್ಯಾರ್ಥಿಗಳು ಇಲ್ಲಿಗೆ ಪ್ರವಾಸ ಬಂದಿದ್ದರು. ಸೇಂಟ್‌ ಮೇರೀಸ್‌ ದ್ವೀಪದಲ್ಲಿ ಜೀವರಕ್ಷಕ ಸಿಬ್ಬಂದಿಯ ಎಚ್ಚರಿಕೆ ಮೀರಿ ಸೆಲ್ಫಿ ತೆಗೆಯಲು ಮುಂದಾಗುವುದು, ಅಲೆಗಳ ಅಬ್ಬರವನ್ನು ಅಂದಾಜಿಸದೆ ಸಮುದ್ರಕ್ಕೆ ಇಳಿದು ನೀರುಪಾಲಾಗುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ.

ಇದನ್ನೂ ಓದಿ: ‘ತೆಲುಗಿನ ಕ್ರೈಮ್ ಸಿನೆಮಾಗಳೇ ಪ್ರೇರಣೆ’; ನಿವೃತ್ತ ಯೋಧ ಸುರೇಶ್ ಕೊಲೆ ಆರೋಪಿಗಳು ಅರೆಸ್ಟ್

Exit mobile version