Site icon Vistara News

ಸಿಎಂಗೆ ಶಿವಸೇನೆ ಠಾಕ್ರೆ ಬಣ ಧಮಕಿ, ಕರ್ನಾಟಕ ಭವನಕ್ಕೆ ಆಕ್ಷೇಪ

shivsena

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶಿವಸೇನೆಯ ಠಾಕ್ರೆ ಬಣ ಆಕ್ಷೇಪ ವ್ಯಕ್ತಪಡಿಸಿದ್ದು, ಕರ್ನಾಟಕದ ಹೆಸರು ಅಳಿಸುವುದಾಗಿ ಧಮಕಿ ಹಾಕಿದೆ.

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಿವಸೇನೆ ಠಾಕ್ರೆ ಬಣದ ಕೊಲ್ಲಾಪುರ ಜಿಲ್ಲಾಧ್ಯಕ್ಷ ರವಿಕಿರಣ ಇಂಗವಳ್ಳಿ ಈ ಹೇಳಿಕೆ ನೀಡಿದ್ದಾರೆ.

ಕನ್ನೇರಿ ಸಿದ್ದಗಿರಿ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಅಲ್ಲಿ ಕರ್ನಾಟಕ ಭವನ ಮಾಡುವುದಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಠಾಕ್ರೆ ಬಣ ಕಾರ್ಯಕರ್ತರು ಕಿಡಿ ಕಾರಿದ್ದಾರೆ.

ಮಹಾರಾಷ್ಟ್ರ ಏಕೀಕರಣ ಸಮಿತಿ ಹೋರಾಟದಲ್ಲಿ ಸಾಕಷ್ಟು ನಮ್ಮ ಜನರು ಮೃತರಾಗಿದ್ದಾರೆ. ಆದರೆ ಅವರಿಗೆ ನ್ಯಾಯ ಕೊಡಿಸುವ ಕೆಲಸ ಕರ್ನಾಟಕದಿಂದ ಆಗಿಲ್ಲ. ಈಗ ಕರ್ನಾಟಕ ಸಿಎಂ ಮಹಾರಾಷ್ಟ್ರದಲ್ಲಿ ಬಂದು ಕರ್ನಾಟಕ ಭವನ ಕಟ್ಟಿದರೆ ನಮಗೂ ಅವರು ಕರ್ನಾಟಕದಲ್ಲಿ ಮಹಾರಾಷ್ಟ್ರ ಭವನ ಕಟ್ಟಲು ಅವಕಾಶ ನೀಡಬೇಕು. ಮೊದಲು ನೀವು ನಮಗೆ ಭವನ ಕಟ್ಟಲು ಅವಕಾಶ ನೀಡಿ ಆಮೇಲೆ ನಿಮ್ಮ ಭವನ ಇಲ್ಲಿ ಕಟ್ಟಿ. ನೀವು ಕರ್ನಾಟಕ ಭವನ ಕಟ್ಟಿದರೆ ನಾವು ಅದರಲ್ಲಿರುವ ಕರ್ನಾಟಕದ ಹೆಸರು ತೆಗೆದು ಹಾಕುತ್ತೇವೆ ಎಂದು ಶಿವಸೇನೆಯ ಠಾಕ್ರೆ ಬಣದ ಮುಖಂಡ ರವಿಕಿರಣ ಹೇಳಿದ್ದಾರೆ.

ಇದನ್ನೂ ಓದಿ | ಗಣಪತಿ ಬಪ್ಪಾ ಮೋರ‍್ಯಾ ಎಂದರೇನು ಗೊತ್ತಾ? ಈ ಮರಾಠಿ ಘೋಷಣೆಗಿದೆ ಕರ್ನಾಟಕದ ಲಿಂಕ್‌!

Exit mobile version