Site icon Vistara News

Shivamogga terror: ಮಂಗಳೂರು ಸ್ಫೋಟ; ಭಾರತ-ಪಾಕ್‌ ನಡುವೆ ಉಗ್ರರ ಓಡಾಟಕ್ಕೆ ಸೇತುವೆಯಾದ ದುಬೈ!

abdul mateen terrorist

ಬೆಂಗಳೂರು: ತೀರ್ಥಹಳ್ಳಿಯನ್ನು ಮತ್ತೊಂದು ಭಟ್ಕಳ ಮಾಡಲು ಹೊರಟಿದ್ದ ಪ್ರಮುಖ ಶಂಕಿತ ಉಗ್ರ ಅರಾಫತ್ ವಿಚಾರಣೆ ವೇಳೆ ಹಲವು ಸ್ಫೋಟಕ‌ ಮಾಹಿತಿಗಳು ಎನ್‌ಐಎಗೆ (NIA trial) ದೊರೆತಿವೆ. ಉಗ್ರರು ಭಾರತ- ಪಾಕಿಸ್ತಾನ ನಡುವೆ ಓಡಾಡಲು ದುಬೈಯನ್ನು ಸೇತುವೆಯಂತೆ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಅವುಗಳಲ್ಲಿ ಒಂದಾಗಿದೆ.

ಅರಾಫತ್ ವಿಚಾರಣೆ ವೇಳೆ ಅಬ್ದುಲ್‌ ಮತೀನ್‌ ನೀಡುತ್ತಿದ್ದ ಟ್ರೈನಿಂಗ್ ಬಗ್ಗೆ ಮಾಹಿತಿಗಳು ಹೊರಬಿದ್ದಿವೆ. ಮಂಗಳೂರು ಕುಕ್ಕರ್‌ ಸ್ಫೋಟದ (Mangalore blast) ರೂವಾರಿಗಳಾದ ಅಬ್ದುಲ್ ಮತೀನ್ ಹಾಗು ಅರಾಫತ್ ಇಷ್ಟು ದಿನ ಪಾಕ್‌ ಆಕ್ರಮಿಕ ಕಾಶ್ಮೀರ (POK)ದಲ್ಲಿ ಇದ್ದರು. ಮತೀನ್‌, ಮತಾಂಧ ಮನಸ್ಥಿತಿಯ ಮುಸ್ಲಿಂ ಹುಡುಗರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ. ಅವರನ್ನು ನಕಲಿ ಪಾಸ್‌ಪೋರ್ಟ್ ನೀಡಿ ಫೇಕ್ ಹೆಸರಿನಲ್ಲಿ ಸಿದ್ಧಪಡಿಸಿ ಭಾರತೀಯ ಗುಪ್ತಚರ ಏಜೆನ್ಸಿ ರಾ (RAW) ಕಣ್ಣು ತಪ್ಪಿಸಿ ದುಬೈಗೆ ಕಳಿಸುತ್ತಿದ್ದ.

ಭಾರತದ ಪಾಸ್‌ಪೋರ್ಟ್‌ನಲ್ಲಿ ದುಬೈಗೆ ಹೋಗುತ್ತಿದ್ದ ಇವರು ನಂತರ ಪಾಕ್‌ ಪಾಸ್‌ಪೋರ್ಟ್‌ ತೋರಿಸಿ ದುಬೈನಿಂದ ಪಾಕಿಸ್ತಾನದ ಪಾಕ್ ಆಕ್ರಮಿತ ಕಾಶ್ಮೀರ ಹೋಗುತ್ತಿದ್ದರು. ಅಲ್ಲಿನ ಉಗ್ರ ತರಬೇತಿ ಕೇಂದ್ರಕ್ಕೆ (terror camps) ಕರೆಸಿ ತರಬೇತಿಗೆ ಒಳಪಡಿಸುತ್ತಿದ್ದ. ಪಿಒಕೆಯಲ್ಲಿ ಉಗ್ರ ಚಟುವಟಿಕೆಗೆ ಬೇಕಾದ ಎಲ್ಲಾ ತರಬೇತಿ ಸಿಗುತ್ತಿತ್ತು. ಮಿಲಿಟೆಂಟ್ ಮಾದರಿಯಲ್ಲಿ ತರಬೇತಿ ನೀಡಲಾಗುತ್ತಿತ್ತು. ಅದನ್ನು ಪಡೆದ ನಂತರ ಪಾಕಿಸ್ತಾನದ ಪಾಸ್‌ಪೋರ್ಟ್‌ನಲ್ಲಿ ದುಬೈಗೆ ಬಂದು ಅಲ್ಲಿಂದ ಭಾರತದ ಪಾಸ್‌ಪೋರ್ಟ್ ತೋರಿಸಿ ಭಾರತಕ್ಕೆ ಬರುತ್ತಿದ್ದರು. ಹೀಗೆ ದುಬೈ ಇವರಿಗೆ ಸೇತುವೆಯಾಗಿತ್ತು.

ಮತೀನ್‌ ನೀಡುತ್ತಿದ್ದ ಟ್ರೈನಿಂಗ್‌ಗಳಲ್ಲಿ ಸರ್ವೈವಲ್ ಟಾಸ್ಕ್ (survival task) ಕೂಡ ಒಂದಾಗಿತ್ತು. ಸರ್ವೈವಲ್ ಟಾಸ್ಕ್ ಅಂದರೆ ಕೃತ್ಯ ಎಸಗಿದ ಬಳಿಕ ಪೊಲೀಸರು ಹಾಗೂ ತನಿಖಾ ಸಂಸ್ಥೆಗಳಿಂದ ತಪ್ಪಿಸಿಕೊಳ್ಳುವ ವಿಧಾನ. ಕಾಡುಗಳಲ್ಲಿ ತಲೆ ತಪ್ಪಿಸಿಕೊಂಡು ಊಟ ನಿದ್ದೆ ಇಲ್ಲದೆ ಇರುವ ಸರ್ವೈವಲ್‌ ಟಾಸ್ಕ್‌ ತರಬೇತಿ ನೀಡುತ್ತಿದ್ದ. ಇದರಲ್ಲಿ ಕಾಡುಗಳಲ್ಲಿ ಕೆಲ ದಿನಗಳ ಕಾಲ ತರಬೇತಿ ನೀಡಲಾಗುತ್ತಿತ್ತು.

ಮಂಗಳೂರು ಕುಕ್ಕರ್ ಸ್ಫೋಟ ಬಳಿಕ ಇದೇ ರೀತಿ ಸರ್ವೈವಲ್ ಟಾಸ್ಕ್‌ನತ್ತ ಪರಾರಿಯಾಗುವ ಉದ್ದೇಶವನ್ನು ಈ ಶಂಕಿತರು ಹೊಂದಿದ್ದರು. ಅದಾಗಿ ಕೆಲ ದಿನಗಳ ಬಳಿಕ ಬೇರೆ ಪಾಸ್‌ಪೋರ್ಟ್ ಮೂಲಕ ವಿದೇಶಕ್ಕೆ ಪರಾರಿಯಾಗುವ ಪ್ಲಾನ್ ಮಾಡುತ್ತಿದ್ದರು. ಬಾಂಬ್‌ ತಯಾರಿಕೆಯನ್ನು ಗೂಗಲ್‌ ಸರ್ಚ್‌ ಮೂಲಕವೇ ಇವರು ಕಲಿಯುತ್ತಿದ್ದುದು ಕೂಡ ತನಿಖೆಯ ವೇಳೆ ತಿಳಿದುಬಂದಿದೆ. ಎನ್‌ಐಎ ಇದೀಗ ಉಗ್ರರ ಸುತ್ತ ಮತ್ತಷ್ಟು ಕಠಿಣ ವಿಚಾರಣೆಯ ಉರುಳು ಬಿಗಿದಿದೆ.

ಇದನ್ನೂ ಓದಿ: Shivamogga terror | ಎಂಥಾ ಅಪ್ಪನಿಗೆ ಎಂಥಾ ಮಗ: ಐಸಿಸ್‌ ಉಗ್ರ ಮತೀನ್‌ನ ತಂದೆ 26 ವರ್ಷ ಸೇನೆಯಲ್ಲಿದ್ದರು!

Exit mobile version