Site icon Vistara News

Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್‌

Siddaramaiah And DK Shivakumar

The uproar of guarantee promises across the state, let the new government clear the confusion

ಬೆಂಗಳೂರು: ʻಸಿದ್ದರಾಮಯ್ಯ ಅವರು ವರುಣಾ ಬೇಕು ಅಂದ್ರು ಅದನ್ನೇ ಕೊಟ್ಟಿದ್ದೀವಿ.. ಅವರು ಕೋಲಾರ ಬೇಕು ಅಂತಾ ಹೇಳಿದ್ರೆ ಅದನ್ನೇ ಕೊಡ್ತಿದ್ದೆವುʼʼ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ‌ ಶಿವಕುಮಾರ್ ಹೇಳಿದ್ದಾರೆ. ಇದು ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ 124 ಕ್ಷೇತ್ರಗಳಿಗೆ ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿ (Congress Ticket list) ಬಗ್ಗೆ ನೀಡಿರುವ ಪ್ರತಿಕ್ರಿಯೆ.

ಹಿರಿಯ ಕಾಂಗ್ರೆಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಕೋಲಾರದಿಂದ ಸ್ಪರ್ಧಿಸಲು ಮುಂದಾಗಿದ್ದರು. ಅದರೆ, ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಕೋಲಾರದಲ್ಲಿ ಎದುರಾಗಬಹುದಾದ ಆತಂಕದ ಬಗ್ಗೆ ಚರ್ಚೆ ನಡೆದ ಬಳಿಕ ಅವರು ಮನಸು ಬದಲಿಸಿದ್ದರು. ಈಗ ಅವರು ಯತೀಂದ್ರ ಸಿದ್ದರಾಮಯ್ಯ ಶಾಸಕರಾಗಿರುವ ಮೈಸೂರಿನ ವರುಣ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಇದೇ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಹೇಳಿದ್ದಾರೆ.

ʻʻಮೂರ್ನಾಲ್ಕು ದಿನಗಳ ಹಿಂದೆಯೇ ಮಾಡ್ಬೇಕು ಅಂತಾ ಇದ್ದೆವು. ಅಮವಾಸ್ಯೆ ಇದ್ದಿದ್ದರಿಂದ ಚಂದ್ರ ಕಾಣಲಿ‌ ಅಂತಾ ಸುಮ್ಮನಿದ್ದೆವು. ಈಗ ಚಂದ್ರ ಕಾಣಿಸಿದ ಮೇಲೆ ಪಟ್ಟಿ ಬಿಡುಗಡೆ ಮಾಡಿದ್ದೇವೆʼʼ ಎಂದು ಪಟ್ಟಿ ಬಿಡುಗಡೆಗೆ ಚಂದ್ರನ ಹೋಲಿಕೆ ಮಾಡಿದ್ದಾರೆ.

ಯಾವುದೇ ಬಂಡಾಯವಿಲ್ಲ

ಈಗ ಬಿಡುಗಡೆಯಾಗಿರುವ 124 ಕ್ಷೇತ್ರಗಳ ಟಿಕೆಟ್‌ಗಳಿಗೆ ಸಂಬಂಧಿಸಿ ಯಾವುದೇ ಬಂಡಾಯ ಇಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಟಿಕೆಟ್‌ ಅಂತಿಮ ಮಾಡಿದ್ದೇವೆ. ಒಂದೊಮ್ಮೆ ಇದನ್ನು ಮೀರಿಯೂ ಏನಾದರೂ ಸಮಸ್ಯೆ ಎದುರಾದರೆ ಕೂತು ಚರ್ಚೆ ಮಾಡುತ್ತೇವೆ, ಎಲ್ಲವನ್ನು ಬಗೆಹರಿಸುತ್ತೇವೆʼʼ ಎಂದರು ಡಿ.ಕೆ. ಶಿವಕುಮಾರ್‌.

ʻʻ224 ಕ್ಷೇತ್ರಗಳ‌ ಮೇಲೂ ನನಗೆ ಕಾಳಜಿ ಇದೆ. ಎಲ್ಲ ಕ್ಷೇತ್ರಗಳು ಬೇಕು. ಎಲ್ಲವರೂ ನನ್ನವರೇ. ಆದರೆ, 10-15 ಜನ ಆಕಾಂಕ್ಷಿಗಳು ಇದ್ದಾಗ, ಒನ್ಬರಿಗೆ ಮಾತ್ರ ಕೊಡುವುದಕ್ಕೆ ಸಾಧ್ಯʼʼ ಎಂದ ಡಿ.ಕೆ. ಶಿವಕುಮಾರ್‌, ʻʻವಿಧಾನಸೌಧದಲ್ಲಿ ನಮ್ಮ ಸರ್ಕಾರ, ಕಾಂಗ್ರೆಸ್ ಸರ್ಕಾರ ಬರಬೇಕುʼʼʼ ಅನ್ನೋದೊಂದೇ ಗುರಿ ಎಂದರು.

ಇದನ್ನೂ ಓದಿ : Congress First List: ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: ವರುಣಾದಿಂದ ಸಿದ್ದರಾಮಯ್ಯ, ದೇವನಹಳ್ಳಿಯಲ್ಲಿ ಮುನಿಯಪ್ಪ

Exit mobile version