ಕರ್ನಾಟಕ
Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್
ಕಾಂಗ್ರೆಸ್ ಮುಂದಿನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಸಿದ್ದರಾಮಯ್ಯ ಅವರಿಗೆ ವರುಣ ಕ್ಷೇತ್ರ ನೀಡಲಾಗಿದೆ. ಇದರ ಬಗ್ಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ʻಸಿದ್ದರಾಮಯ್ಯ ಅವರು ವರುಣಾ ಬೇಕು ಅಂದ್ರು ಅದನ್ನೇ ಕೊಟ್ಟಿದ್ದೀವಿ.. ಅವರು ಕೋಲಾರ ಬೇಕು ಅಂತಾ ಹೇಳಿದ್ರೆ ಅದನ್ನೇ ಕೊಡ್ತಿದ್ದೆವುʼʼ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದು ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ 124 ಕ್ಷೇತ್ರಗಳಿಗೆ ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿ (Congress Ticket list) ಬಗ್ಗೆ ನೀಡಿರುವ ಪ್ರತಿಕ್ರಿಯೆ.
ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಕೋಲಾರದಿಂದ ಸ್ಪರ್ಧಿಸಲು ಮುಂದಾಗಿದ್ದರು. ಅದರೆ, ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಕೋಲಾರದಲ್ಲಿ ಎದುರಾಗಬಹುದಾದ ಆತಂಕದ ಬಗ್ಗೆ ಚರ್ಚೆ ನಡೆದ ಬಳಿಕ ಅವರು ಮನಸು ಬದಲಿಸಿದ್ದರು. ಈಗ ಅವರು ಯತೀಂದ್ರ ಸಿದ್ದರಾಮಯ್ಯ ಶಾಸಕರಾಗಿರುವ ಮೈಸೂರಿನ ವರುಣ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಇದೇ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ʻʻಮೂರ್ನಾಲ್ಕು ದಿನಗಳ ಹಿಂದೆಯೇ ಮಾಡ್ಬೇಕು ಅಂತಾ ಇದ್ದೆವು. ಅಮವಾಸ್ಯೆ ಇದ್ದಿದ್ದರಿಂದ ಚಂದ್ರ ಕಾಣಲಿ ಅಂತಾ ಸುಮ್ಮನಿದ್ದೆವು. ಈಗ ಚಂದ್ರ ಕಾಣಿಸಿದ ಮೇಲೆ ಪಟ್ಟಿ ಬಿಡುಗಡೆ ಮಾಡಿದ್ದೇವೆʼʼ ಎಂದು ಪಟ್ಟಿ ಬಿಡುಗಡೆಗೆ ಚಂದ್ರನ ಹೋಲಿಕೆ ಮಾಡಿದ್ದಾರೆ.
ಯಾವುದೇ ಬಂಡಾಯವಿಲ್ಲ
ಈಗ ಬಿಡುಗಡೆಯಾಗಿರುವ 124 ಕ್ಷೇತ್ರಗಳ ಟಿಕೆಟ್‌ಗಳಿಗೆ ಸಂಬಂಧಿಸಿ ಯಾವುದೇ ಬಂಡಾಯ ಇಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಟಿಕೆಟ್ ಅಂತಿಮ ಮಾಡಿದ್ದೇವೆ. ಒಂದೊಮ್ಮೆ ಇದನ್ನು ಮೀರಿಯೂ ಏನಾದರೂ ಸಮಸ್ಯೆ ಎದುರಾದರೆ ಕೂತು ಚರ್ಚೆ ಮಾಡುತ್ತೇವೆ, ಎಲ್ಲವನ್ನು ಬಗೆಹರಿಸುತ್ತೇವೆʼʼ ಎಂದರು ಡಿ.ಕೆ. ಶಿವಕುಮಾರ್.
ʻʻ224 ಕ್ಷೇತ್ರಗಳ ಮೇಲೂ ನನಗೆ ಕಾಳಜಿ ಇದೆ. ಎಲ್ಲ ಕ್ಷೇತ್ರಗಳು ಬೇಕು. ಎಲ್ಲವರೂ ನನ್ನವರೇ. ಆದರೆ, 10-15 ಜನ ಆಕಾಂಕ್ಷಿಗಳು ಇದ್ದಾಗ, ಒನ್ಬರಿಗೆ ಮಾತ್ರ ಕೊಡುವುದಕ್ಕೆ ಸಾಧ್ಯʼʼ ಎಂದ ಡಿ.ಕೆ. ಶಿವಕುಮಾರ್, ʻʻವಿಧಾನಸೌಧದಲ್ಲಿ ನಮ್ಮ ಸರ್ಕಾರ, ಕಾಂಗ್ರೆಸ್ ಸರ್ಕಾರ ಬರಬೇಕುʼʼʼ ಅನ್ನೋದೊಂದೇ ಗುರಿ ಎಂದರು.
ಇದನ್ನೂ ಓದಿ : Congress First List: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: ವರುಣಾದಿಂದ ಸಿದ್ದರಾಮಯ್ಯ, ದೇವನಹಳ್ಳಿಯಲ್ಲಿ ಮುನಿಯಪ್ಪ
ಕರ್ನಾಟಕ
ರಾಜಾಪುರ ಬ್ಯಾರೇಜ್‌ನಿಂದ 1500 ಕ್ಯುಸೆಕ್ ನೀರು ಬಿಡುಗಡೆ; ಕೃಷ್ಣಾ ನದಿಗೆ ಮತ್ತೆ ಜೀವಕಳೆ
Krishna river: ಉತ್ತರ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರಿನ ಅಭಾವದ ಹಿನ್ನೆಲೆಯಲ್ಲಿ ಕೃಷ್ಣಾನದಿಗೆ 5 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಮಾಡಿದ್ದ ಮನವಿಗೆ ಮಹಾ ಸರ್ಕಾರ ಸ್ಪಂದಿಸಿದೆ.
ಬೆಳಗಾವಿ: ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 1500 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಪಕ್ಷಾತೀತವಾಗಿ ಮಹಾ ಸರ್ಕಾರಕ್ಕೆ ನೀರು ಬಿಡುವಂತೆ ಮನವಿ ರಾಜ್ಯದ ಜನಪ್ರತಿನಿಧಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ನೀರು ಬಿಡುಗಡೆಯಾಗಿದೆ. ಇದರಿಂದ ಬತ್ತುವ ಹಂತ ತಲುಪಿದ್ದ ಕೃಷ್ಣಾ ನದಿಗೆ ಮತ್ತೆ ಜೀವಕಳೆ ಬಂದಿದೆ.
ಬೇಸಿಗೆ ಹಿನ್ನೆಲೆಯಲ್ಲಿ ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನರು ಕುಡಿಯುವ ನೀರಿಲ್ಲದೆ ಹೈರಾಣಾಗಿದ್ದರು. ಹೀಗಾಗಿ ಕೃಷ್ಣಾನದಿಗೆ 5 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರು ಮೇ 31ರಂದು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಹೀಗಾಗಿ ಏಕನಾಥ್ ಶಿಂಧೆ ಸರ್ಕಾರವು, ರಾಜಾಪುರ ಬ್ಯಾರೇಜ್‌ನಿಂದ 1500 ಕ್ಯುಸೆಕ್ ನೀರು ಬಿಡುಗಡೆ ಮಾಡಿದೆ.
ಮಹಾರಾಷ್ಟ್ರದಿಂದ ಕೃಷ್ಣೆಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ನೀರಿಲ್ಲದೆ ಹೈರಾಣಾಗಿದ್ದ ಬೆಳಗಾವಿ ಭಾಗದ ನದಿ ತೀರದ ಜನರು ನಿರಾಳರಾಗಿದ್ದಾರೆ.
ಇದನ್ನೂ ಓದಿ | Loksabha 2024: ಹೇ ಕೂತ್ಕೊಳಪ್ಪ, ಮೋದಿ ಸೋತಾಗ ಗೊಬ್ಬರದ ರೇಟ್ ಕಡಿಮೆ ಮಾಡ್ತೀವಿ: ಅಭಿಮಾನಿಗೆ ರೇಗಿದ ಸಿಎಂ ಸಿದ್ದರಾಮಯ್ಯ
Viral news: ಮಳೆ ಬರದ ಊರಿನಲ್ಲಿ ಒಲ್ಲದ ವಧು- ವರನಿಗೆ ಕಂಕಣಯೋಗ!
ಬೆಳಗಾವಿ: ಮುಂಗಾರು ತಡವಾಗಿರುವುದರಿಂದ ಉತ್ತರ ಕರ್ನಾಟಕ ನೀರಿಗಾಗಿ ಪರಿತಪಿಸುತ್ತಿದೆ. ಹೀಗಾಗಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದವರು ಮಳೆ ಬರಲಿ ಎಂದು ಕತ್ತೆಗಳಿಗೆ ಮದುವೆ (donkey marriage) ಮಾಡಿಸಿದ್ದು, ವೈರಲ್ (Viral news) ಆಗಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಮಳೆಯಾಗದೇ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಬರಗಾಲದ ಆತಂಕವೂ ಮೂಡಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ವರುಣನ ಆಗಮನಕ್ಕೆ ಪ್ರಾರ್ಥಿಸಿ ಶಾಸ್ತ್ರೋಕ್ತವಾಗಿ ಕತ್ತೆಗಳಿಗೆ ಮದುವೆ ಮಾಡಿಸಲಾಯಿತು.
ಇದನ್ನೂ ಓದಿ | Free Bus: ನಾಳೆ ಮಹಿಳೆಯರಲ್ಲಿ ‘ಶಕ್ತಿ’ ಸಂಚಾರ! ಉಚಿತ ಪ್ರಯಾಣಕ್ಕೆ ಇರಲಿ ಈ ದಾಖಲೆ, ಸ್ಮಾರ್ಟ್‌ಕಾರ್ಡ್ ಸಿಗೋದು ಯಾವಾಗ?
ಕತ್ತೆಗಳಿಗೆ ಮದುವೆ ಮಾಡಿಸಿದರೆ ಮಳೆ ಬರುತ್ತೆ ಎಂಬ ನಂಬಿಕೆ ಈ ಭಾಗದ ರೈತಾಪಿ ಜನರಲ್ಲಿದೆ. ಈ ಹಿಂದೆ ಹೀಗೆ ಮಾಡಿದಾಗ ಮಳೆ ಬಂದ ನಿದರ್ಶನಗಳನ್ನು ಜನ ನೆನೆಯುತ್ತಾರೆ. ಈ ಹಿನ್ನೆಲೆಯಲ್ಲಿ, ಕತ್ತೆಗಳಿಗೆ ಮದುವೆ ಮಾಡಿಸಿ ದೇವರಲ್ಲಿ ಪ್ರಾರ್ಥನೆ ಜನ ಮಾಡಿದ್ದಾರೆ. ಕತ್ತೆಗಳಿಗೆ ಬಿಳಿ ಪಂಚೆ, ಸೀರೆ ತೊಡಿಸಿ ತಿಲಕವಿಟ್ಟು ತಾಳಿ ಕಟ್ಟಿಸಿ ವಾದ್ಯಮೇಳದೊಂದಿಗೆ ಮದುವೆ ಗ್ರಾಮಸ್ಥರು ಮಾಡಿದರು. ಕತ್ತೆಗಳು ನಾಚಿಕೊಂಡು ನಿಂತಿದ್ದವು!
ಕರ್ನಾಟಕ
Siddaramaiah: ಡೋಂಟ್ ಡೂ ದಟ್!: ಮೈಸೂರು ಪೊಲೀಸರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದೇಕೆ ಸಿಎಂ ಸಿದ್ದರಾಮಯ್ಯ?
ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಕಾರಿನಿಂದ ಇಳಿದ ಕೂಡಲೆ ಪೊಲೀಸರನ್ನು ಹತ್ತಿರಕ್ಕೆ ಕರೆದರು. ಕೋಪಗೊಂಡವರಾಗಿಯೇ, ಜೀರೊ ಟ್ರಾಫಿಕ್ ಏಕೆ ಮಾಡಿದಿರಿ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಮೈಸೂರು: ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಸಿಎಂ ಆದ ನಂತರದಲ್ಲಿ, ತಮ್ಮ ಪ್ರಯಾಣಕ್ಕೆ ಜೀರೊ ಟ್ರಾಫಿಕ್ ಮಾಡುವುದು ಬೇಡ ಎಂದು ಪೊಲೀಸರಿಗೆ ತಿಳಿಸಿದ್ದರು. ಆದರೂ ಶನಿವಾರ ಮೈಸೂರಿನಲ್ಲಿ ಸಿದ್ದರಾಮಯ್ಯ ಪ್ರಯಾಣಕ್ಕೆ ಜೀರೊ ಟ್ರಾಫಿಕ್ ಮಾಡಿದ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಆದ ನಂತರ ವರುಣ ಕ್ಷೇತ್ರಕ್ಕೆ ಸಿದ್ದರಾಮಯ್ಯ ಮೊದಲ ಬಾರಿಗೆ ಭೇಟಿ ನೀಡಿದರು. ಅಲ್ಲಿ ಕೃತಜ್ಞತಾ ಸಮಾವೇಶನವನ್ನು ಮುಗಿಸಿ ಮೈಸೂರು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯತ್ತ ಸಾಗಿದರು. ಮೈಸೂರು ವಿಮಾನ ನಿಲ್ದಾಣದಿಂದ ಜಿಲ್ಲಾ ಪಂಚಾಯಿತಿ ಕಚೇರಿವರೆಗೂ ಪೊಲೀಸರು ಜೀರೊ ಟ್ರಾಫಿಕ್ ಮಾಡಿದ್ದರು.
ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಕಾರಿನಿಂದ ಇಳಿದ ಕೂಡಲೆ ಪೊಲೀಸರನ್ನು ಹತ್ತಿರಕ್ಕೆ ಕರೆದರು. ಕೋಪಗೊಂಡವರಾಗಿಯೇ, ಜೀರೊ ಟ್ರಾಫಿಕ್ ಏಕೆ ಮಾಡಿದಿರಿ? ಎಂದು ಪ್ರಶ್ನಿಸಿದರು. ಯಾರೂ ಪೊಲೀಸರು ಮಾತನಾಡಲಿಲ್ಲ. ನನ್ನ ಸಂಚಾರಕ್ಕೆ ಜೀರೊ ಟ್ರಾಫಿಕ್ ಬೇಡ ಎಂದು ಈಗಾಗಲೆ ಹೇಳಿದ್ದೇನೆ. ಅದಾದರೂ ಗೊತ್ತೋ ಇಲ್ಲವೋ ನಿಮಗೆ? ಎಂದು ಗದರಿದರು. ಸ್ವಲ್ಪ ಹೊತ್ತು ಮೌನವಾಗಿದ್ದು, don’t do that ಎನ್ನುತ್ತಾ ಸಭೆಯತ್ತ ಸಾಗಿದರು.
ನಂತರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಸಚಿವರಾದ ಹೆಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಶಾಸಕರಾದ ಜಿ.ಟಿ. ದೇವೇಗೌಡ, ತನ್ವೀರ್‌ಸೇಠ್, ಶ್ರೀವತ್ಸ, ರವಿಶಂಕರ್, ಅನಿಲ್ ಚಿಕ್ಕಮಾದು, ಜಿ.ಡಿ.ಹರೀಶ್‌ಗೌಡ, ವಿಧಾನ ಪರಿಷತ್ ಸದಸ್ಯ ತಿಮ್ಮಯ್ಯ ಸೇರಿ ಹಲವರು ಭಾಗಿಯಾಗಿದ್ದರು.
ಇದನ್ನೂ ಓದಿ: Free Bus Service: ನನ್ ಒಂದೇ ಓಟಲ್ಲ ಸ್ವಾಮಿ, ನಮ್ ಫ್ಯಾಮಿಲಿದೆಲ್ಲ ಇದೆ ಹುಷಾರ್: ಸಿದ್ದರಾಮಯ್ಯಗೆ ಆಟೋ ಡ್ರೈವರ್ ವಾರ್ನಿಂಗ್
ಕರ್ನಾಟಕ
Weather Report: ಕರ್ನಾಟಕಕ್ಕೆ ಕಾಲಿಟ್ಟ ಮುಂಗಾರು; ಕರಾವಳಿಯಲ್ಲಿ ಮಳೆ ಜೋರು
Southwest Monsoon: ಜೂ.10ರಂದು ಕರ್ನಾಟಕಕ್ಕೆ ನೈರುತ್ಯ ಮುಂಗಾರು (weather report) ಪ್ರವೇಶವಾಗಿದೆ ಎಂದು ಹವಾಮಾನ ಇಲಾಖೆ (Weather Update) ಅಧಿಕೃತವಾಗಿ ಪ್ರಕಟಿಸಿದೆ. ಕಾರವಾರ ಮತ್ತು ಮಡಿಕೇರಿಗೆ ಮುಂಗಾರು ಪ್ರವೇಶಿಸಿದ್ದು, ಇನ್ನೆರಡು ದಿನಗಳಲ್ಲಿ ಕೆಲವು ಭಾಗಗಳಲ್ಲಿ ಮುಂಗಾರು (Rain News) ಆವರಿಸಲಿದೆ.
ಬೆಂಗಳೂರು: ಕರ್ನಾಟಕಕ್ಕೆ ನೈರುತ್ಯ ಮುಂಗಾರು (Southwest Monsoon) ಕಾಲಿಟ್ಟಿದ್ದು, ಕಾರವಾರ ಮತ್ತು ಮಡಿಕೇರಿಯನ್ನು ಪ್ರವೇಶಿಸಿದೆ. ಇನ್ನೆರಡು ದಿನಗಳಲ್ಲಿ ಕೆಲವು ಭಾಗಗಳಲ್ಲಿ ಆವರಿಸಲಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಕರಾವಳಿಯಲ್ಲಿ ಭಾರಿ ಮಳೆಯಾಗುವ (Rain news) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather Report) ನೀಡಿದೆ.
ಈ ವರ್ಷ ನೈರುತ್ಯ ಮುಂಗಾರು ವಾಡಿಕೆಯ ಮಳೆಯಾಗುವ ನಿರೀಕ್ಷೆ ಇದೆ. ಜೂನ್ ಮೊದಲೆರಡು ವಾರದೊಳಗೆ ಪ್ರವೇಶಿಸುವ ಮುಂಗಾರು ಮಳೆಯು ಜುಲೈ ಹಾಗೂ ಆಗಸ್ಟ್, ಸೆಪ್ಟೆಂಬರ್‌ವರೆಗೆ ಇರಲಿದೆ. ಸಾಮಾನ್ಯವಾಗಿ ವಾಡಿಕೆಯ ಪ್ರಕಾರ ಈ ನಾಲ್ಕು ತಿಂಗಳಲ್ಲಿ ರಾಜ್ಯಕ್ಕೆ 83 ಸೆಂ.ಮೀ ನಷ್ಟು, ಬೆಂಗಳೂರಲ್ಲಿ ನಾಲ್ಕು ತಿಂಗಳಲ್ಲಿ 60 ಸೆಂ.ಮೀ ಮಳೆಯಾಗಬೇಕೆಂದು ತಜ್ಞರು ತಿಳಿಸಿದ್ದಾರೆ.
ಕರಾವಳಿಯಲ್ಲಿ ಭರ್ಜರಿ ಮಳೆ
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಐದು ದಿನಗಳು ಗಾಳಿಯ ವೇಗವು ಗಂಟೆಗೆ 40-50ಕಿ.ಮೀ ತಲುಪುವ ಸಾಧ್ಯತೆ ಇದೆ. ಈ ವೇಳೆ ಅಲೆಗಳ ಅಬ್ಬರ ಇರಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಜತೆಗೆ ಪ್ರವಾಸಿಗರು, ಸಮುದ್ರ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ.
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯಂದು ಗುಡುಗು, ಮಿಂಚಿನ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಬಿರುಗಾಳಿಯು ಬೀಸಲಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಮರದಡಿ ನಿಲ್ಲದಂತೆ ಎಚ್ಚರಿಸಲಾಗಿದೆ.
ಇದನ್ನೂ ಓದಿ: Viral news: ಮಳೆ ಬರದ ಊರಿನಲ್ಲಿ ಒಲ್ಲದ ವಧು- ವರನಿಗೆ ಕಂಕಣಯೋಗ!
ಧಾರವಾಡ, ಮಂಡ್ಯ, ಶಿವಮೊಗ್ಗ, ವಿಜಯನಗರ ಸೇರಿದಂತೆ ಬಾಗಲಕೋಟೆ, ಬಳ್ಳಾರಿ, ಬೆಳಗಾವಿಯಲ್ಲಿ ವ್ಯಾಪಕ ಮಳೆಯಾಗಲಿದೆ. ಚಿತ್ರದುರ್ಗ, ದಾವಣಗೆರೆ, ಗದಗ, ಹಾವೇರಿ, ಕೊಪ್ಪಳದಲ್ಲೂ ಮಳೆಯ ಅಬ್ಬರ ಇರಲಿದೆ. ತುಮಕೂರು, ಮೈಸೂರು, ರಾಯಚೂರು, ಕಲಬುರಗಿಗೂ ಮಳೆ ಅಲರ್ಟ್ ನೀಡಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Monsoon Travel: ಉತ್ತರ ಕರ್ನಾಟಕದ ವಾಸ್ತುಶಿಲ್ಪದ ಬೆಡಗು, ಮಳೆಗಾಲದಲ್ಲಿ ಮತ್ತಷ್ಟೂ ಸೊಬಗು!
ಉತ್ತರ ಕರ್ನಾಟಕವನ್ನು ಮಳೆಗಾಲದಲ್ಲಿ ಇನ್ನಷ್ಟು ಚಂದಗಾಣಿಸುವಲ್ಲಿ, ಕೃಷ್ಣೆ, ಭೀಮ, ತುಂಗಭದ್ರ, ಘಟಪ್ರಭ, ಮಲಪ್ರಭ ನದಿಗಳ ಕಾಣಿಕೆಯೂ ಇದೆ. ಹಾಗಾಗಿ ತಡವೇಕೆ, ಈ ಮಳೆಗಾಲದಲ್ಲಿ ಒಮ್ಮೆ ಉತ್ತರ ಕರ್ನಾಟಕದೆಡೆಗೆ ನಿಮ್ಮ ಕಾರು ತಿರುಗಿಸಿ!
ಉತ್ತರ ಕರ್ನಾಟಕ ಎಂದಾಕ್ಷಣ ಮನಸ್ಸು ಬಗೆಬಗೆಯ ವಾಸ್ತುಶಿಲ್ಪ, ದೇವಾಲಯ ಶಿಲ್ಪಗಳ ಕಡೆಗೆ ಓಡುವುದುಂಟು. ಆದರೆ ಬಹುತೇಕರು ಯಾವ ಕಾಲದಲ್ಲಿ ಇವನ್ನು ನೋಡಿದರೆ ಚಂದ ಎಂಬ ಬಗ್ಗೆ ಊಹಿಸಿರಲಿಕ್ಕಿಲ್ಲ. ಅದ್ಭುತ ವಾಸ್ತುಶಿಲ್ಪದ ದೇವಾಲಯಗಳು, ರಾಜಮಹಾರಾಜುರುಗಳು ಕಟ್ಟಿಸಿದ ಅದ್ಭುತ ಕೆತ್ತನೆಗಳು ನಮ್ಮ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿರುವಾಗ ಎಲ್ಲ ಕಾಲದಲ್ಲೂ ನಾವವನ್ನು ಕಣ್ತುಂಬಿಕೊಳ್ಳುತ್ತೇವೆ. ಆದರೆ, ಒಮ್ಮೆಯಾದರೂ ಯೋಚಿಸಿದ್ದೀರಾ? ಹಂಪಿಯಾಗಲಿ, ಐಹೊಳೆ ಪಟ್ಟದಕಲ್ಲು ಇತ್ಯಾದಿಗಳ ಗತವೈಭವವನ್ನು ಪೂರ್ಣವಾಗಿ ಕಣ್ತುಂಬಿಕೊಳ್ಳಲು ಪ್ರಕೃತಿ ಮಾತೆಯೂ ನಮ್ಮ ಜೊತೆ ಸಹಕರಿಸಬೇಕು. ಮಳೆ ಬಂದು ತಂಪಾಗಿ, ಗಿಡಮರ ಚಿಗುರಿ, ಹುಲ್ಲುಕಡ್ಡಿಗಳೂ ಜೀವತುಂಬಿಕೊಂಡು ನಳನಳಿಸುವಾಗ ಈ ವಾಸ್ತುಶಿಲ್ಪಗಳೂ ಜೀವಪಡೆದಂತೆ ಕಾಣುತ್ತವೆ ಎಂದರೆ ಒಪ್ಪುತ್ತೀರಾ? ಒಪ್ಪಬೇಕೆಂದರೆ ಒಮ್ಮೆ ಇವಕ್ಕೆಲ್ಲ ನೀವು ಮಳೆಗಾಲದಲ್ಲಿ ಪಯಣ (monsoon travel) ಬೆಳೆಸಬೇಕು. ಅಷ್ಟೇ ಅಲ್ಲ, ಉತ್ತರ ಕರ್ನಾಟಕವನ್ನು ಮಳೆಗಾಲದಲ್ಲಿ ಇನ್ನಷ್ಟು ಚಂದಗಾಣಿಸುವಲ್ಲಿ, ಕೃಷ್ಣೆ, ಭೀಮ, ತುಂಗಭದ್ರ, ಘಟಪ್ರಭ, ಮಲಪ್ರಭ ನದಿಗಳ ಕಾಣಿಕೆಯೂ ಇದೆ. ಹಾಗಾಗಿ ತಡವೇಕೆ, ಈ ಮಳೆಗಾಲದಲ್ಲಿ ಒಮ್ಮೆ ಉತ್ತರ ಕರ್ನಾಟಕದೆಡೆಗೆ ನಿಮ್ಮ ಕಾರು ತಿರುಗಿಸಿ!
1. ಹಂಪೆ: ಕರ್ನಾಟಕದ ಚರಿತ್ರೆಯನ್ನು ಹೊಂಬಣ್ಣದಲ್ಲಿ ಕಾಣುವಂತೆ ಮಾಡುವ, ಸದಾ ವಿಶ್ವದೆಲ್ಲೆಡೆಯ ಪ್ರವಾಸಿಗರನ್ನು ತನ್ನತ್ತ ಸೆಳೆಯು ಶಕ್ತಿ ಹೊಂದಿರುವ ಕರ್ನಾಟಕದ ಪ್ರಮುಖ ಆಕರ್ಷಣೆಗಳಲ್ಲಿ ಮುಂಚೂಣಿಯಲ್ಲಿರುವ ಸ್ಥಳ ಎಂದರೆ ಅದು ಹಂಪೆ. ಹಂಪೆಗೆ ಹೋದಿರೆಂದರೆ ಅದು ಒಂದು ದಿನದಲ್ಲಿ ನೋಡಿ ಮುಗಿಯುವಂಥದ್ದಲ್ಲ ಎಂಬ ಸತ್ಯವನ್ನು ಅರಗಿಸಿಕೊಂಡೇ ನೀವು ಹಂಪೆಯತ್ತ ಪಯಣ ಬೆಳೆಸಬೇಕು. ವೀಕೆಂಡಿನ ಎರಡು ದಿನಗಳ ಜೊತೆಗೆ ಇನ್ನೊಂದಿಷ್ಟು ದಿನಗಳನ್ನು ಸೇರಿಸಿಕೊಳ್ಳುವುದಾಗಿದ್ದರೆ ಮಾತ್ರ ಹಂಪೆಗೆ ಹೋಗಿ. ವಿಜಯನಗರ ಸಾಮ್ರಾಜ್ಯದ ಗತವೈಭವ ಮಳೆಗಾಲದಲ್ಲಿ ನೋಡುವುದೇ ಕಣ್ಣಿಗೆ ಹಬ್ಬ. ಮುಖ್ಯವಾಗಿ ಮೈದುಂಬಿ ಹರಿವ ತುಂಗಭದ್ರೆಯೂ ಇಲ್ಲಿನ ಜೀವನದಿ. ಇಲ್ಲಿನ ವಿರೂಪಾಕ್ಷ, ವಿಠ್ಠಲ ದೇಗುಲಗಳು, ಕಮಲ ಮಹಲ್, ಕಲಿನ ರಥ, ರಾಣಿಯರ ಸ್ನಾನಗೃಹ, ಆನೆಲಾಯ ಸೇರಿದಂತೆ ಹಂಪೆಯ ಎಲ್ಲವನ್ನೂ ನೋಡುವುದೇ ಸೊಗಸು. ಅಷ್ಟೇ ಅಲ್ಲ, ರಾಮಾಯಣದ ಕಿಷ್ಕಿಂಧೆಯಾಗಿದ್ದ ಹಂಪೆಯ ಅಂಜನಾದ್ರಿ ಬೆಟ್ಟದ ಪುಟ್ಟ ದೇಗುಲ, ತುಂಗಭದ್ರೆಯ ತೀರ, ಮಾತಂಗ ಬೆಟ್ಟ, ಹಿಪ್ಪೀ ದ್ವೀಪ ಹೀಗೆ ಹಂಪೆಯೊಂದರಲ್ಲೇ ಸುತ್ತಾಡಿ ನೋಡಲು ಮನದಣಿಯೆ ಜಾಗಗಳಿವೆ. ಸಮಯವಿದ್ದರೆ, ದಾರೋಜಿ ಕರಡಿ ಧಾಮದಲ್ಲೂ ಕಾದು ಅದೃಷ್ಟವಿದ್ದರೆ ಕರಡಿಗಳನ್ನೂ ನೋಡಿ ಬರಬಹುದು.
2. ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆ: ಉತ್ತರ ಕರ್ನಾಟಕಕ್ಕೆ ಒಮ್ಮೆ ಕಾಲಿಟ್ಟರೆ, ಹಂಪೆಯ ಹಾಗೆ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯನ್ನು ನೋಡದಿದ್ದರೆ ಉತ್ತರ ಕರ್ನಾಟಕ ಪೂರ್ತಿಯಾಗದು. ಮಳೆಗಾಲದಲ್ಲಿ ಬಾದಾಮಿಯ ಗುಹೆಗಳಲ್ಲಿ ಅಂಥ ವಿಶೇಷವೇನಿದೆ ಎಂದು ಹುಬ್ಬೇರಿಸಬೇಡಿ. ಮಳೆಗೆ ಬಂಡೆಕಲ್ಲಿಗೂ ಕೂಡಾ ಜೀವಕಳೆ ಬರುತ್ತದೆ ಎಂಬುದು ನಿಮಗೆ ಬಾದಾಮಿ ನೋಡಿದರೆ ಅರಿವಾಗುತ್ತದೆ. ಸುತ್ತಮುತ್ತಲ ಇಡೀ ಪರಿಸರ ಜೀವಕಳೆಯಂದ ತುಂಬುವುದೇ ಸಾಕು, ಇಡಿಯ ಪಯಣವನ್ನು ಚಂದವಾಗಿಸಲು. ಪಟ್ಟದಕಲ್ಲಿನ ದೇಗುಲಗಳ ಅಮೋಘ ವಾಸ್ತುಶಿಲ್ಪ, ಐಹೊಳೆಯ ದುರ್ಗಾ ದೇವಸ್ಥಾನ, ಲಾಡ್‌ಖಾನ್ ದೇವಾಲಯ ಹೀಗೆ ಒಂದೊಂದೇ ಕೆತ್ತನೆಗಳನ್ನು ಕಣ್ತುಂಬಿಕೊಂಡು ಮಳೆಗಾಲದ ತಂಪಿನಲ್ಲಿ ಪಯಣಿಸುವುದೇ ಆನಂದ.
3. ಬಿಜಾಪುರದ ಗೋಲ್‌ಗುಂಬಜ್: ಗೋಲ್‌ಗುಂಬಜ್ ನೋಡಲು ಇಂಥದ್ದೇ ಕಾಲ ಎಂಬುದು ಬೇಕಿಲ್ಲ ನಿಜ. ಆದರೆ ಒಂದು ಪಯಣವನ್ನು ಮಧುರವನ್ನಾಗಿಸುವ ಸಾಮರ್ಥ್ಯ ಮಳೆಗಿದೆ. ಸುತ್ತಲ ಇಡೀ ಪರಿಸರಕ್ಕೆ ಜೀವಕಳೆ ತುಂಬಿಸುವ ಶಕ್ತಿಯೂ ಮಳೆಗಿದೆ. ಹಾಗಾಗಿ ಮಳೆಯಲ್ಲಿ ಗೋಲ್‌ಗುಂಬಜ್ ನೋಡಬೇಕು.
4. ಗೋಕಾಕ್ ಜಲಪಾತ: ಘಟಪ್ರಭ ನದಿ ಬೆಳಗಾವಿಯ ಬಳಿ ಎತ್ತರದಿಂದ ಧುಮುಕುವ ಪರಿಯನ್ನು, ಅದರ ವೇಗವನ್ನು ಕಣ್ತುಂಬಿಕೊಳ್ಳಬೇಕಾದರೆ ಮಳೆಗಾಲವೇ ಆಗಬೇಕು. ಗೋಕಾಕ್‌ನಿಂದ ಆರೇಳು ಕಿಮೀ ದೂರದಲ್ಲಿರುವ ಗೋಕಾಕ್ ಜಲಪಾತ ಮಳೆಗಾಲದಲ್ಲಿ ನಯಾಗಾರ ಜಲಪಾತದ ಹಾಗೆಯೇ ಕಾಣುತ್ತದೆ.
5. ಕೂಡಲ ಸಂಗಮ: ಬಾಗಲಕೋಟೆ ಜಿಲ್ಲೆಯಲ್ಲಿರುವ ಕೂಡಲ ಸಂಗಮವೂ ಕೂಡಾ ಒಂದು ನೋಡಲೇಬೇಕಾದ ಸ್ಥಳ. ಅಲಮಟ್ಟಿ ಅಣೆಕಟ್ಟಿನಿಂದ ಸುಮಾರು 15 ಕಿಮೀ ದೂರದಲ್ಲಿರುವ ಇಲ್ಲಿ ಬಸವಣ್ಣನವರ ಸಮಾಧಿ ಇದೆ. ಐಕ್ಯ ಮಂಟಪ ಹೆಸರಿನಲ್ಲಿ ಕರೆಯುವ ಈ ಸ್ಥಳ ಮನೋಹರವಾಗಿದೆ. ಕುಳಿತು ಧ್ಯಾನ ಮಾಡುವ ಶಾಂತಿ ಇಲ್ಲಿ ಸಿಗಬಹುದಾಗಿದ್ದು ಇಲ್ಲಿ ಉದ್ಭವ ಲಿಂಗವೂ ಇದೆ.
ಇದನ್ನೂ ಓದಿ: Monsoon weekend: ಬೆಂಗಳೂರಿಗರಿಗೆ ಇದೋ ಮಳೆಗಾಲದ ಒಂದು ದಿನದ ಜಾಲಿ ರೈಡ್!
-
ಸುವಚನ14 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ14 hours ago
Horoscope Today: ಈ ರಾಶಿಯವರು ಸಾಲ ಕೊಟ್ಟಿದ್ದರೆ ಇಂದು ಹಣ ಹಿಂದಿರುಗುತ್ತದೆ!
-
ಪ್ರಮುಖ ಸುದ್ದಿ20 hours ago
ವಿಸ್ತಾರ ಸಂಪಾದಕೀಯ: ಪಠ್ಯ ಪುಸ್ತಕ ಪರಿಷ್ಕರಣೆ ಆಟ, ವಿದ್ಯಾರ್ಥಿಗಳಿಗೆ ಸಂಕಟ
-
ಕರ್ನಾಟಕ20 hours ago
Bellary News: ಮೆಂಥೋಪ್ಲಸ್ ಡಬ್ಬಿ ನುಂಗಿ 9 ತಿಂಗಳ ಮಗು ಸಾವು
-
ಅಂಕಣ12 hours ago
ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?
-
ದೇಶ21 hours ago
ಒಡಿಶಾ ರೈಲು ದುರಂತದ ಶವಗಳನ್ನು ಇರಿಸಿದ್ದ ಶಾಲೆಗೆ ಬರಲು ಹೆದರಿದ ಮಕ್ಕಳು; ಕಟ್ಟಡ ನೆಲಸಮ
-
ಕ್ರಿಕೆಟ್9 hours ago
Viral News: ಲಬುಶೇನ್ರನ್ನು ನಿದ್ರೆಯಿಂದ ಬಡಿದೆಬ್ಬಿಸಿದ ಸಿರಾಜ್; ಸಖತ್ ಮಜವಾಗಿದೆ ವಿಡಿಯೊ
-
ಕರ್ನಾಟಕ21 hours ago
300ರಿಂದ 1800 ರೂ.ಗೆ ಜಂಪ್; ಕರೆಂಟ್ ಬಿಲ್ ಕಟ್ಟೋದಿಲ್ಲ, ಏನಾದ್ರೂ ಆಗ್ಲಿ ಎಂದ ಮಹಿಳೆಯರು!