Site icon Vistara News

Karnataka Elections : ಸಿದ್ದು ಒಂದೇ ಕಡೆ ನಿಂತ್ರೆ ಡೇಂಜರ್‌, ಎರಡೂ ಕಡೆ ನಿಂತ್ರೆ ಡಬಲ್‌ ಗೆಲುವು; ಇದು ದೇವಿ ಅರ್ಚಕನ ಭವಿಷ್ಯ

siddaramaiah

#image_title

ಮಂಡ್ಯ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka Elections) ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದರೆ ಮಾತ್ರ ಸೇಫ್‌. ಒಂದೇ ಕಡೆ ನಿಂತ್ರೆ ಡೇಂಜರಿದೆ: ಹೀಗಂತ ಭವಿಷ್ಯ ನುಡಿದಿದ್ದಾರೆ ಚೊಟ್ಟನಹಳ್ಳಿ ಶ್ರೀ ಆದಿನಾಡು ಚಿಕ್ಕಮ್ಮ ತಾಯಿ ದೇವರ ಅರ್ಚಕ ಲಿಂಗಣ್ಣ.

ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ನಿಲ್ಲಬೇಕು ಎಂದು ಈ ಹಿಂದೆಯೂ ಹೇಳಿದ್ದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ.ಯ ಅರ್ಚಕ ಲಿಂಗಣ್ಣ ಅವರು ಈಗ ಮತ್ತೆ ಅದೇ ಮಾತು ಪುನರುಚ್ಚರಿಸಿದ್ದಾರೆ. ಸಾಲದ್ದಕ್ಕೆ ಒಂದೇ ಕಡೆ ನಿಂತ್ರೆ ಸುರಕ್ಷಿತವಾಗಿಲ್ಲ. ಎರಡೂ ಕಡೆ ನಿಂತ್ರೆ ಎರಡೂ ಕಡೆ ಗೆಲುವಾಗುತ್ತದೆ ಎಂದಿದ್ದಾರೆ.

ಕಳೆದ ಜನವರಿ 7ರಂದು ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಅವರು ಚೊಟ್ಟಹಳ್ಳಿಗೆ ಭೇಟಿ ನೀಡಿದ್ದರು. ಆಗ ಅರ್ಚಕರು ಸಿದ್ದರಾಮಯ್ಯನವರು ಎರಡು ಕ್ಷೇತ್ರಗಳಿಗೆ ಕಾಲು ಚಾಚಬೇಕು ಎಂದು ಭವಿಷ್ಯ ನುಡಿಯಲಾಗಿತ್ತು.

ಚೊಟ್ಟಹಳ್ಳಿ ದೇವಿ ದೇಗುಲದಲ್ಲಿರುವುದು ಸಿದ್ದರಾಮಯ್ಯ ನವರ ಮೂಲ ಮನೆ ದೇವರು ಈ ದೇವಿ. ಸಿದ್ದರಾಮಯ್ಯ ಅವರು ಇಲ್ಲಿಗೆ ನಡೆದುಕೊಳ್ಳುತ್ತಾರೆ. ಸಿದ್ದರಾಮಯ್ಯ ಜನರ ಎದುರು ಏನೇ ಮಾತಾಡಿದ್ರು ಅವರಿಗೆ ದೇವರ ಮೇಲೆ ನಂಬಿಕೆ ಇದೆ ಎನ್ನುವುದು ಇಲ್ಲಿನ ಅರ್ಚಕರ ಮಾತು.

ಎರಡು ಕ್ಷೇತ್ರಗಳಲ್ಲಿ ನಿಲ್ಲಬೇಕು ಯಾಕೆಂದರೆ, ಒಂದೇ ಕಡೆ ನಿಂತರೆ ಜತೆಯಲ್ಲಿ ಇರುವವರೇ ತೊಂದರೆ ಕೊಡುತ್ತಾರೆ. ಹೀಗಾಗಿ ಧೈರ್ಯ ಮಾಡಿ ಹೈಕಮಾಂಡ್‌ ಮುಂದೆ ಎರಡು ಕ್ಷೇತ್ರಗಳಲ್ಲಿ ನಿಲ್ಲುವುದನ್ನು ಹೇಳಲೇಬೇಕು ಎಂದು ಹೇಳಿದ್ದರು ಅರ್ಚಕರು. ಎರಡೂ ಕಡೆ ನಿಂತರೆ ವಿರೋಧಿಗಳ ಶಕ್ತಿ ಕಡಿಮೆಯಾಗುತ್ತದೆ. ಎರಡೂ ಕಡೆ ಗೆಲ್ಲಲು ಅವಕಾಶ ಸಿಗುತ್ತದೆ ಎನ್ನುವುದು ದೇವಿಯ ಅರ್ಚಕರ ಲೆಕ್ಕಾಚಾರ.

ಯಾಕೆ ಎರಡು ಕಡೆ ನಿಲ್ಲಲೇಬೇಕು?

ಬುಧವಾರ ವಿಸ್ತಾರ ನ್ಯೂಸ್‌ ಜತೆಗೆ ಮಾತನಾಡಿದ ಅರ್ಚಕ ಲಿಂಗಣ್ಣ ಅವರು, ಒಂದೇ ಕಡೆ ನಿಂತರೆ ಅವರಿಗೆ ತೊಂದ್ರೆಯಾಗಬಹುದು ಎಂಬ ಬಗೆಗೆ ನಾನು ಏನೂ ಹೇಳಲಾಗದು. ಅವರ ಪಕ್ಷದಲ್ಲೇ ಅವರ ಬೆನ್ನ ಹಿಂದೆ ನಡೆಯುತ್ತಿರುವ ಘಟನೆ ಬಗೆಗೆ ಅವರಿಗೂ ಅರಿವಿಗೆ ಇದೆ. ಸಿದ್ದು ಸಿಎಂ ಆಗಲು ವಿರೋಧಿಗಳ ಬಾಯಿ ಮುಚ್ಚಿಸಲು ಎರಡು ಕ್ಷೇತ್ರದಲ್ಲಿ ನಿಲ್ಲಲಿʼʼ ಎಂದು ಹೇಳಿದರು.

ʻʻಸಿದ್ದರಾಮಯ್ಯ ಅವರು ನಾಮಪತ್ರ ಸಲ್ಲಿಕೆಗೂ ಮೊದಲು ಇಲ್ಲಿಗೆ ಬಂದು ದೇವಿ ದರ್ಶನ ಪಡೆದು ಬಂದು ದರ್ಶನ ಪಡೆದು ಹೋದರೆ ಒಳ್ಳೆಯದಾಗುತ್ತದೆʼʼ ಎಂದು ಹೇಳಿದರು.

ಸಿದ್ದರಾಮಯ್ಯ ಅವರಿಗೆ ಈಗಾಗಲೇ ಮೈಸೂರಿನ ವರುಣ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಮುಂದಿನ ಪಟ್ಟಿಯಲ್ಲಿ ಎರಡನೇ ಕ್ಷೇತ್ರದ ಹೆಸರು ಬರಬಹುದು ಎಂದು ನಿರೀಕ್ಷಿಸಲಾಗಿದೆ. ಸಿದ್ದರಾಮಯ್ಯ ಅವರು ಕೋಲಾರದ ಟಿಕೆಟ್‌ ಕೇಳಿದ್ದೇನೆ ಎಂದು ಈಗಾಗಲೇ ಪ್ರಕಟಿಸಿದ್ದಾರೆ. ಹೈಕಮಾಂಡ್‌ ಕೂಡಾ ಅವರ ಕೋರಿಕೆಯನ್ನು ಒಪ್ಪುವ ಸಾಧ್ಯತೆ ಇದೆ.

ಇದನ್ನೂ ಓದಿ : Karnataka Election 2023: ವರುಣ ಕ್ಷೇತ್ರದ ಪ್ರಚಾರಕ್ಕೆ ಹೋಗಲ್ಲ, ಹೆಲಿಕಾಪ್ಟರ್‌ನಲ್ಲಿ ರಾಜ್ಯ ಪ್ರವಾಸ; ದಿನಕ್ಕೆ 4 ಕ್ಷೇತ್ರದಲ್ಲಿ ಪ್ರಚಾರ: ಸಿದ್ದರಾಮಯ್ಯ

Exit mobile version