Site icon Vistara News

ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಮಸಾಲೆ ದೋಸೆ ಸವಿದ ಸ್ಟಾರ್‌ಬಕ್ಸ್‌ ಸ್ಥಾಪಕ

Zev Siegl starbucks

ಬೆಂಗಳೂರು: ವಿಶ್ವವಿಖ್ಯಾತ ಕಾಫಿ ಬ್ರ್ಯಾಂಡ್‌ ಸ್ಟಾರ್‌ಬಕ್ಸ್‌ನ ಸಹಸ್ಥಾಪಕ ಝೇವ್‌ ಸೀಗೆಲ್‌ (Zev Siegl) ಗುರುವಾರ ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ ಅಚ್ಚರಿಯ ಭೇಟಿ ನೀಡಿ ಅಲ್ಲಿನ ಮಸಾಲೆ ದೋಸೆ ಹಾಗೂ ಫಿಲ್ಟರ್‌ ಕಾಫಿ ಸವಿದರು.

ಸೀಗೆಲ್‌ ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ವಿದ್ಯಾರ್ಥಿ ಭವನಕ್ಕೂ ಆಗಮಿಸಿದರು. ಈ ಕುರಿತ ಫೋಟೋ ಹಾಗೂ ವಿವರಗಳನ್ನು ವಿದ್ಯಾರ್ಥಿ ಭವನ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ʼʼಸೀಗೆಲ್‌ ಅವರನ್ನು ಗ್ರಾಹಕನಾಗಿ ಹೊಂದುವುದಕ್ಕೆ ಹೆಮ್ಮೆ ಹಾಗೂ ಸಂತೋಷ ಪಡುತ್ತೇವೆ. ಅವರು ನಮ್ಮ ಮಸಾಲೆ ದೋಸೆ ಹಾಗೂ ಕಾಫಿ ಸವಿದು, ಅದರ ಬಗ್ಗೆ ವಿಸಿಟರ್ಸ್‌ ಬುಕ್‌ನಲ್ಲಿ ಅನುಭವ ದಾಖಲಿಸಿದ್ದಾರೆʼʼ ಎಂದು ಟ್ವೀಟ್‌ ಮಾಡಿದೆ.

1971ರಲ್ಲಿ ಸೀಗೆಲ್‌ ಇವರು ಅಂತಾರಾಷ್ಟ್ರೀಯ ಕಾಫಿ ಹೌಸ್‌ ಬ್ರ್ಯಾಂಡ್‌ ಸ್ಟಾರ್‌ಬಕ್ಸ್‌ ಅನ್ನು ಸಹ ಸ್ಥಾಪಿಸಿದ್ದಲ್ಲದೆ, ಆ ಕಂಪನಿಯ ಉಪಾಧ್ಯಕ್ಷ, ನಿರ್ದೇಶಕರಾಗಿ ಕೆಲಸ ಮಾಡಿದರು. 1980ರಲ್ಲಿ ಕಂಪನಿಯಿಂದ ನಿವೃತ್ತರಾದ ಬಳಿಕ ಸ್ಟಾರ್ಟಪ್‌ ಕನ್ಸಲ್ಟೆಂಟ್‌ ಹಾಗೂ ಉದ್ಯಮ ಸಲಹೆಗಾರರಾಗಿದ್ದಾರೆ.

ʼʼಗೆಳೆಯರೇ, ನಿಮ್ಮ ಖ್ಯಾತ ತಿನಿಸು ಹಾಗೂ ಕಾಫಿ ಮತ್ತು ನಿಮ್ಮ ಬೆಚ್ಚಗಿನ ಆತಿಥ್ಯವನ್ನು ಸವಿದಿದ್ದೇನೆ. ಈ ಅದ್ಭುತ ಅನುಭವವನ್ನು ನನ್ನೊಂದಿಗೆ ಸಿಯಾಟಲ್‌ಗೆ ಕೊಂಡೊಯ್ಯುತ್ತಿದ್ದೇನೆʼʼ ಎಂದು ಸೀಗೆಲ್‌ ಪುಸ್ತಕದಲ್ಲಿ ಬರೆದಿದ್ದಾರೆ. 1943-44ರಲ್ಲಿ ಆರಂಭವಾಗಿರುವ ವಿದ್ಯಾರ್ಥಿ ಭವನ, ಬೆಂಗಳೂರಿನ ಲ್ಯಾಂಡ್‌ಮಾರ್ಕ್‌ಗಳಲ್ಲಿ ಒಂದಾಗಿ ಜನಪ್ರಿಯತೆ ಪಡೆದಿದೆ. ರಿಷಿ ಸುನಕ್‌ ಅವರು ಬ್ರಿಟನ್‌ ಪ್ರಧಾನಿಯಾಗಿ ನೇಮಕಗೊಂಡ ಬಳಿಕ, ಅವರು 2019ರಲ್ಲಿ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿದ್ದ ಚಿತ್ರಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು.

ಇದನ್ನೂ ಓದಿ | ಮೊಗಸಾಲೆ ಅಂಕಣ | ಚರ್ಚಿಲ್ ಕುಳಿತಿದ್ದ ಆಸನದಲ್ಲಿ ರಿಷಿ‌

Exit mobile version