Site icon Vistara News

Suraj Revanna Case: ಸೂರಜ್ ಪ್ರಕರಣದ ತನಿಖೆ ಹೊಣೆಯೂ ಬಿ.ಕೆ. ಸಿಂಗ್ ಹೆಗಲಿಗೆ

Suraj Revanna Case

ಬೆಂಗಳೂರು: ಸೂರಜ್ ರೇವಣ್ಣ ಪ್ರಕರಣದ (Suraj Revanna Case) ತನಿಖೆಯ ಹೊಣೆಯನ್ನೂ ಎಡಿಜಿಪಿ ಬಿ.ಕೆ. ಸಿಂಗ್ ಹೆಗಲಿಗೆ ನೀಡಲಾಗಿದೆ. ಈಗಾಗಲೇ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಯ ಹೊಣೆ ಹೊತ್ತಿರುವ ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದ ತಂಡಕ್ಕೆ ಸೂರಜ್ ರೇವಣ್ಣ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ನೀಡಿದೆ.

ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಾಕ್ಷ್ಯ ನೀಡಲು ಪೊಲೀಸ್‌ ಠಾಣೆಗೆ ಹೋಗಿ ತಾವಾಗಿಯೇ ಎಂಎಲ್‌ಸಿ ಸೂರಜ್‌ ರೇವಣ್ಣ (Suraj Revanna Case) ಸಿಕ್ಕಿಬಿದ್ದಿದ್ದರು. ಸಂತ್ರಸ್ತ ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಶನಿವಾರ ರಾತ್ರಿ ಕೇಸ್ ದಾಖಲಾದ ಬೆನ್ನಲ್ಲೇ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಈ ಕೇಸ್‌ನ ತನಿಖೆ ಹೊಣೆಯನ್ನು ಬಿ.ಕೆ.ಸಿಂಗ್ ನೇತೃತ್ವದ ತಂಡಕ್ಕೆ ವಹಿಸಲಾಗದೆ.

ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಡಿಐಜಿ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್ ಕೂಡ ತನಿಖಾ ತಂಡಕ್ಕೆ ನೇಮಕವಾಗಿದ್ದಾರೆ. ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿರುವ ಸೂರಜ್ ರೇವಣ್ಣಗೆ ‌ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದ ಬಳಿಕ ಬೆಂಗಳೂರಿನ ಕೋರಮಂಗಲದ ಜಡ್ಜ್ ನಿವಾಸದಲ್ಲಿ ಹಾಜರುಪಡಿಸಲು ಕರೆತರಲಾಗುತ್ತಿದೆ.

ಹಾಸನ ಅಶ್ಲೀಲ ವಿಡಿಯೊ ಪ್ರಕರಣದ (Hassan Pen Drive Case) ತನಿಖೆಗಾಗಿ ಈ ಹಿಂದೆ ಎಡಿಜಿಪಿ ಬಿ.ಕೆ. ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಲಾಗಿತ್ತು. ಇದರಲ್ಲಿ ಇಬ್ಬರು ಮಹಿಳಾ ಐಪಿಎಸ್‌ ಅಧಿಕಾರಿಗಳು ಇದ್ದರು. ಎಡಿಜಿಪಿ ಬಿ.ಕೆ. ಸಿಂಗ್ ಅವರು ಎಸ್‌ಐಟಿ ಮುಖ್ಯಸ್ಥರಾಗಿದ್ದು, ಎಸ್‌ಪಿ ಸುಮನ್ ಡಿ ಪನ್ನೇಕರ್, ಎಸ್‌ಪಿ ಸೀಮಾ ಲಾಟ್ಕರ್ ಸದಸ್ಯರಾಗಿದ್ದಾರೆ. ಸಿಐಡಿಯಲ್ಲಿ ಎಡಿಜಿಪಿಯಾಗಿರುವ ಬಿ.ಕೆ ಸಿಂಗ್ ಅವರು, ಈ ಹಿಂದೆ ಗೌರಿ ಲಂಕೇಶ್ ಕೊಲೆ ಕೇಸ್‌ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆರೋಪ ಸಾಬೀತಾದರೆ ಶಿಕ್ಷೆ ಏನು?

ಸೂರಜ್‌ ರೇವಣ್ಣ ವಿರುದ್ಧ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಸೆಕ್ಷನ್ 342, 377, 506 ಅಡಿ ಎಫ್‌ಐಆರ್‌ ದಾಖಲಾಗಿದೆ. ಇದರಲ್ಲಿ ಸೆಕ್ಷನ್ 342 ಅಕ್ರಮವಾಗಿ ಬಂಧನಕ್ಕೆ ಸಂಬಂಧಿಸಿದ್ದು, 1 ವರ್ಷ ಶಿಕ್ಷೆ ಹಾಗೂ ದಂಡ, ಬೇಲೇಬಲ್ ಅಫೆನ್ಸ್ ಆಗಿದೆ. ಸೆಕ್ಷನ್ 377 ಅಸಹಜ ಲೈಂಗಿಕ ಕ್ರಿಯೆಗೆ ಸಂಬಂಧಿಸಿದ್ದು, ಜೀವಾವಧಿ ಶಿಕ್ಷೆ ಅಥವಾ 10 ವರ್ಷ ಶಿಕ್ಷೆ + ದಂಡ ನಾನ್ ಬೇಲೇಬಲ್ ಪ್ರಕರಣವಾಗಿದೆ. ಸೆಕ್ಷನ್ 506 ಕ್ರಿಮಿನಲ್ ಬೆದರಿಕೆ , ಪ್ರಾಣ ಬೆದರಿಕೆಗೆ ಸಂಬಂಧಿಸಿದ್ದು, ಕ್ರಿಮಿನಲ್ ಬೆದರಿಕೆ ಆಗಿದ್ದರೆ ಎರಡು ವರ್ಷ ಜೈಲು ಶಿಕ್ಷೆ, ಪ್ರಾಣ ಬೆದರಿಕೆ ಆಗಿದ್ದರೆ ಏಳು ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ |Suraj Revanna Case: ಸಾಕ್ಷಿ ನೀಡಲು ಠಾಣೆಗೆ ಬಂದು ಪೊಲೀಸ್‌ ಬಲೆಗೆ ಬಿದ್ದ ಸೂರಜ್‌ ರೇವಣ್ಣ

ಸೂರಜ್ ಮೊಬೈಲ್ ಸೀಜ್

ಸೂರಜ್ ರೇವಣ್ಣ ಮೊಬೈಲ್ ಅನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಬ್ಲ್ಯಾಕ್ ಮೇಲ್ ವಿಚಾರವಾಗಿ ಮೊಬೈಲ್ ಸಾಕ್ಷ್ಯಗಳನ್ನ ನೀಡಲು ಸೂರಜ್ ಮುಂದಾಗಿದ್ದಾಗ ಅವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಅವರ ಮೊಬೈಲ್ ಸೀಜ್ ಮಾಡಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧ ಪಟ್ಟ ಸಾಕ್ಷ್ಯ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ. ಮೊಬೈಲ್‌ನಿಂದ ಹೋಗಿರುವ ಮೆಸೇಜ್, ವಾಟ್ಸ್ ಆಫ್ ಕಾಲ್, ಪೋನ್ ಕಾಲ್ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

Exit mobile version