ಬೆಂಗಳೂರು: ಭಯೋತ್ಪಾದನೆ ಚಟುವಟಿಕೆ ನಡೆಸಲು ಹಾಗೂ ಉಗ್ರ ಸಂಘಟನೆ ಐಸಿಸ್‌ಗೆ ವಿವಿಧ ರೂಪದಲ್ಲಿ ಸಹಾಯ ಮಾಡುತ್ತಿದ್ದ ಆರೋಪದಲ್ಲಿ ರಾಜ್ಯದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶಂಕಿತನೊಬ್ಬನನ್ನು (Terror Accused) ಬಂಧಿಸಿದ್ದಾರೆ.
ಡಿ ಕಂಪೆನಿಯ ಸಲೀಂ ಮೊಹಮ್ಮದ್ ಇಕ್ಬಾಲ್ ಖುರೇಷಿ ಅಲಿಯಾಸ್ ಸಲೀಂ ಎಂಬುವವರನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಭಯೋತ್ಪಾದನೆ ಸಂಘಟನೆಗಳನ್ನು ಬೆಳೆಸಲು ಹಣ ಸಂಗ್ರಹಣೆ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ನಿರಂತರವಾಗಿ ಅಲ್ ಖೈದಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು, ಇದಕ್ಕಾಗಿ ಚೋಟಾ ಶಕೀಲ್ ಹೆಸರಿನಲ್ಲಿ ಹಣ ಸಂಗ್ರಹಣೆ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಹಣ ಸಂಗ್ರಹಣೆಗಾಗಿ ಆಸ್ತಿ ವ್ಯಾಜ್ಯಗಳನ್ನು ಬಗೆಹರಿಸಿ ಹಣ ಸಂಗ್ರಹಣೆ ಮಾಡಿ, ಬಳಿಕ ಉಗ್ರ ಸಂಘಟನೆಗಳಿಗೆ ಹಣವನ್ನು ನೀಡುತ್ತಿದ್ದ. ಈ ಎಲ್ಲ ಮಾಹಿತಿಯನ್ನು ಕಲೆ ಹಾಕಿದ್ದ ಎನ್‌ಐಎ ತಂಡ ಆರೋಪಿ ಸಲೀಂನನ್ನು ಬಂಧಿಸಿ ತೀವ್ರ ವಿಚಾರಣೆಯನ್ನು ನಡೆಸುತ್ತಿದೆ.