ಮಂಗಳೂರು: ರಾಜ್ಯದಲ್ಲಿ ಮುಂಬೈ ಮಾದರಿ ಉಗ್ರ ದಾಳಿಗೆ ಸಂಚು ನಡೆದಿದೆಯೇ ಎಂಬ ಶಂಕೆ ಈಗ ಕಾಡುತ್ತಿದ್ದು, ಮಂಗಳೂರಿನಲ್ಲಿ ದಾಳಿ ಸಾಧ್ಯತೆ ಇರುವುದರಿಂದ ಕರಾವಳಿ ಕಾವಲು ಪಡೆಯಿಂದ ಸಮುದ್ರ ಭಾಗದಲ್ಲಿ ಹೆಚ್ಚಿನ ನಿಗಾವಹಿಸಲಾಗಿದೆ (Terror Alert) ಎಂದು ಮೂಲಗಳು ತಿಳಿಸಿವೆ.
ಮುಂಬೈನ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿರುವ ಅಪರಿಚಿತರು, ಮುಂಬೈನಲ್ಲಿ ನಡೆದಿದ್ದ 26/11 ಮಾದರಿ ದಾಳಿಯನ್ನು ನಡೆಸುವ ಬಗ್ಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಕೇಂದ್ರ ಸರ್ಕಾರ ಹೈ ಅಲರ್ಟ್ ಆಗಿದೆ.
ಅರಬ್ಬಿ ಸಮುದ್ರ ಮಾರ್ಗವಾಗಿ ಭಾರತ ಪ್ರವೇಶಿಸಿ ದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದ್ದು, ಕರಾವಳಿ ತೀರದಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ತಿಳಿಸಲಾಗಿದೆ.
ಮಂಗಳೂರಲ್ಲಿ ಸಮುದ್ರ ಗಸ್ತು
ಮಂಗಳೂರು ಕರಾವಳಿ ಕಾವಲು ಪಡೆಯಿಂದ ಸಮುದ್ರದಲ್ಲಿ ಗಸ್ತು ನಡೆಯುತ್ತಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿ ಬೋಟ್‌ಗಳ ಮೇಲೆ ನಿಗಾ ಇರಿಸಲಾಗಿದೆ. ಭದ್ರತೆ ಹೆಚ್ಚಿಸಲಾಗಿದೆ ಎಂದು ಕರಾವಳಿ ಕಾವಲು ಪಡೆಯ ಎಸ್‌ಪಿ ಅಬ್ದುಲ್ ಅಹ್ಮದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Al-Qaeda Links | ಅಸ್ಸಾಂನಲ್ಲಿ ಉಗ್ರರ ಜಾಲ ಬಯಲು, ಅಲ್‌ಕೈದಾ ಜತೆ ನಂಟು ಹೊಂದಿರುವ ಇಬ್ಬರು ಮೌಲ್ವಿಗಳ ಸೆರೆ