Site icon Vistara News

Terrorists in Bengaluru: ಹಿಂದೂ- ಮುಸ್ಲಿಂ ಗಲಭೆ ಸೃಷ್ಟಿಗೆ ಉಗ್ರರ ಸ್ಕೆಚ್‌, ಇಡೀ ಕರ್ನಾಟಕವೇ ಇವರ ಟಾರ್ಗೆಟ್!

cartridges

ಬೆಂಗಳೂರು: ರಾಜಧಾನಿಯಲ್ಲಿ ಸಿಕ್ಕಿಬಿದ್ದ ಶಂಕಿತ ಉಗ್ರರನ್ನು (Terrorists in Bengaluru) ಸಿಸಿಬಿ ಪೊಲೀಸರು ತೀವ್ರ ತನಿಖೆಗೆ ಒಳಪಡಿಸಿದ್ದು, ಈ ವೇಳೆ ಅನೇಕ ಸ್ಫೋಟಕ ಮಾಹಿತಿಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಕರ್ನಾಟಕದ ಹಲವು ಕಡೆ ಹಿಂದೂ- ಮುಸ್ಲಿಂ ಗಲಭೆ ನಡೆಯುವ ತಾಣಗಳಲ್ಲಿ ಸ್ಫೋಟ ನಡೆಸಲು ಇವರು ಸ್ಕೆಚ್‌ ಹಾಕಿದ್ದರು ಎಂದು ಗೊತ್ತಾಗಿದೆ.

ಯಾವುದೇ ಅನುಮಾನ ಬಾರದಂತೆ ಶಸ್ತ್ರಾಸ್ತ್ರ ಸಂಗ್ರಹ ಮಾಡಿಕೊಂಡು ಸ್ಫೋಟಗಳನ್ನು ನಡೆಸಲು ಇವರು ಗುಪ್ತವಾಗಿ ತಯಾರಿ ಮಾಡಿಕೊಳ್ಳುತ್ತಿದ್ದರು. ಸಾಕಷ್ಟು ಆಲೋಚನೆ ಮಾಡಿ ಪ್ರತೀ ಟಾರ್ಗೆಟ್ ಅನ್ನೂ ಪ್ಲಾನ್ ಮಾಡಿದ್ದರು. ಕರ್ನಾಟಕದ ಹಲವು ಭಾಗಗಳನ್ನು ಗುರಿಯಾಗಿಸಿಕೊಂಡಿದ್ದರು. ಅದಕ್ಕೆ ಅಂತಲೇ ಕಳೆದ ಆರು ತಿಂಗಳಿಂದ ಸಾಧನಗಳನ್ನು ಶೇಖರಿಸಿಕೊಳ್ಳುತ್ತಿದ್ದರು.

ಸ್ಫೋಟ ಹಾಗೂ ಗನ್‌ ದಾಳಿಗಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಶಂಕಿತರು ಗನ್‌ ಬಳಕೆ, ಗ್ರೆನೇಡ್ ಬಳಕೆ ಎಲ್ಲದರ ಬಗ್ಗೆಯೂ ಟ್ರೈನಿಂಗ್ ತೆಗೆದುಕೊಂಡಿದ್ದರು. ಅಪರಿಚಿತನೊಬ್ಬನಿಂದ ಇವರಿಗೆ ತರಬೇತೊ ಕೊಡಿಸಲಾಗಿತ್ತು. ತಾಸೀರ್ ಸೂಚನೆ ಮೇರೆಗೆ ಟ್ರೈನಿಂಗ್ ನೀಡಲು ಅಪರಿಚಿತ ರೆಡಿಯಾಗಿದ್ದ.

ಕರ್ನಾಟಕದ ಹಲವೆಡೆ ಹಿಂದೂ ಮುಸ್ಲಿಂ ಗಲಾಟೆ ಸಮಯದಲ್ಲಿ ಸ್ಫೋಟ ನಡೆಸುವುದು, ಗಲಭೆಯನ್ನು ಜೋರಾಗಿಸುವುದು ಇವರ ಮಾಸ್ಟರ್ ಪ್ಲಾನ್ ಆಗಿತ್ತು. ಇದಕ್ಕಾಗಿ ಹಿಂದೂ ಮುಸ್ಲಿಂ ಗಲಾಟೆ ನಡೆಯುವ ಸ್ಥಳಗಳನ್ನು ಇವರು ಗುರುತಿಸಿಕೊಂಡಿದ್ದರು. ಮುಸ್ಲಿಂ ಸಮುದಾಯ ಕಡಿಮೆ ಇರುವ ಏರಿಯಾಗಳ ಕಡೆ ಪ್ಲಾನ್ ರೆಡಿ ಮಾಡಿಕೊಂಡಿದ್ದರು. ಬೆಂಗಳೂರು, ಮಂಗಳೂರು, ಶಿವಮೊಗ್ಗ, ಉಡುಪಿ, ಗುಲ್ಬರ್ಗಾ, ಹುಬ್ಬಳ್ಳಿಯ ಪ್ರದೇಶಗಳನ್ನು ಗುರುತಿಸಿಕೊಂಡಿದ್ದರು. ಹಿಂದೂ- ಮುಸ್ಲಿಂ ಗಲಾಟೆ ಆಗಬೇಕು, ಆದರೆ ಮುಸ್ಲಿಮರಿಗೆ ಹೆಚ್ಚು ಹಾನಿಯಾಗಬಾರದು ಎಂದು ಯೋಜಿಸಿದ್ದರು. ಹಬ್ಬ, ಹರಿದಿನಗಳಲ್ಲಿ ಸೇರುವ ಜನಗಳೇ ಇವರ ಮುಖ್ಯ ಟಾರ್ಗೆಟ್ ಆಗಿದ್ದರು.

ಬೆಂಗಳೂರಿನಂತೆ ಬೇರೆ ಬೇರೆ ಜಿಲ್ಲೆಗಳ ಕಡೆಯೂ ತನಿಖಾ ತಂಡ ಇದೀಗ ಫೋಕಸ್ ಮಾಡಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಇರುವ ಶಂಕಿತರನ್ನೂ ತನಿಖೆಯ ವ್ಯಾಪ್ತಿಗೆ ತರಲಾಗುತ್ತಿದೆ.

ಶಂಕಿತ ಉಗ್ರರು ದೊಡ್ಡ ಮಟ್ಟದಲ್ಲಿ ಶಸ್ತ್ರಾಸ್ತ್ರ ಶೇಖರಣೆಗೆ ಮುಂದಾಗಿದ್ದರು ಎಂಬುದು ಗೊತ್ತಾಗಿದೆ. ಒಬ್ಬೊಬ್ಬ ಶಂಕಿತನ ಮನೆಯಲ್ಲಿಯೂ ಭಾರಿ ಶಸ್ತ್ರಾಸ್ತ್ರ ಶೇಖರಣೆಗೆ ಪ್ಲಾನ್ ಮಾಡಿಕೊಂಡಿದ್ದು, ಬೇರೆ ಬೇರೆ ಕಡೆಯಿಂದ ಬೆಂಗಳೂರಿಗೆ ಶಸ್ತ್ರಾಸ್ತ್ರ ರವಾನೆ ಮಾಡಲಾಗುತ್ತಿತ್ತು. ಕರ್ನಾಟಕದ ಹಲವು ಭಾಗಗಳಿಗೂ ಬಳಕೆಯಾಗುವವಷ್ಟು ಬಾಂಬ್‌ಗಳು, ಪಿಸ್ತೂಲ್‌ಗಳು, ಬುಲೆಟ್‌ಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳು ಇವರು ಕಲೆಕ್ಟ್ ಮಾಡುತ್ತಿದ್ದರು.

ಎಲ್ಲವನ್ನೂ ಸುರಕ್ಷಿತವಾಗಿ ಒಂದೆಡೆ ಬಚ್ಚಿಡುವ ಪ್ಲಾನ್ ಮಾಡಿಕೊಂಡಿದ್ದ ಇವರು ಇನ್ನೂ ಹಲವು ಕಡೆ ಶಸ್ತ್ರಾಸ್ತ್ರ ಶೇಖರಿಸಿರುವ ಶಂಕೆ ಇದೆ. ಈ ಬಗ್ಗೆ ಐವರನ್ನೂ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಶಸ್ತ್ರಾಸ್ತ್ರಗಳನ್ನು ಎಲ್ಲಿಂದ ತರಿಸಿಕೊಂಡರು, ಅದು ಹೇಗೆ‌ ಬೆಂಗಳೂರು ಸೇರಿತು ಅನ್ನುವುದರ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Terrorists in Bengaluru : ಉಗ್ರ ಸಂಚು ಬಯಲಾಗಿದ್ದು ಪರಪ್ಪನ ಅಗ್ರಹಾರದಿಂದ; ಸುಳಿವು ನೀಡಿದ್ದು ಒಂದು Phone Call!

Exit mobile version