ಬೆಂಗಳೂರು: ಆಟವಾಡುತ್ತಿದ್ದಾಗ ಕಾರು ಹತ್ತಿಸಿದ ಪರಿಣಾಮ ಮಗು ಮೃತಪಟ್ಟಿರುವ ಘಟನೆ (Car Accident) ನಗರದ ಕಸುವಿನಹಳ್ಳಿಯ ಸಮೃದ್ದಿ ಅಪಾರ್ಟ್ಮೆಂಟ್ ಮುಂಭಾಗ ನಡೆದಿದೆ. ಅಮಾನವೀಯ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೋಗ್ ಜುತಾರ್, ಅನಿತಾ ದಂಪತಿಯ 3 ವರ್ಷದ ಅರ್ಬಿನಾ ಮೃತ ಮಗು. ಕಸುವಿನಹಳ್ಳಿಯ ಸಮೃದ್ದಿ ಅಪಾರ್ಟ್ಮೆಂಟ್ ನಲ್ಲಿ ಮುಂಭಾಗ ಡಿಸೆಂಬರ್ 10 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹತ್ತಿಸಿ ಚಾಲಕ ಮುಂದೆ ಹೋಗಿದ್ದಾನೆ. ಈ ವೇಳೆ ಮಗುವಿಗೆ ಗಂಭೀರ ಗಾಯಗಳಾಗಿವೆ.
ಕಾರು ಬೆನ್ನ ಮೇಲೆ ಹತ್ತಿಸಿದಾಗ ಮೇಲೆ ಏಳಲು ಸಾಧ್ಯವಾಗದೆ ಮಗು ನೋವಿನಿಂದ ನರಳಾಡುತ್ತಿತ್ತು. ಈ ವೇಳೆ ಮಗುವನ್ನು ಪಾಲಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೋಷಕರಿಗೆ ಘಟನೆ ಬಗ್ಗೆ ಅರಿವಿಗೆ ಬಾರದೆ ಕಟ್ಟಡ ಮೇಲಿಂದ ಬಿದ್ದಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಮಗುವಿನ ದೇಹದಲ್ಲಿ ಆಂತರಿಕ ರಕ್ತಸ್ರಾವವಾಗಿರುವುದು ತಿಳಿದುಬಂದ ಮೇಲೆ ಪೊಲೀಸರು ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ. ಆಗ ಅಪಘಾತದ ಭಯನಕ ದೃಶ್ಯ ಸಿಕ್ಕಿದೆ.
ಇದನ್ನೂ ಓದಿ | Murder Case: ಸಿ.ಪಿ. ಯೋಗೇಶ್ವರ್ ಬಾವ ಕೊಲೆ ಕೇಸ್; ತೋಟದ ಕೆಲಸಗಾರರೇ ಹಂತಕರು?
ಚಾಲಕನ ನಿರ್ಲಕ್ಷ್ಯದಿಂದ ದುರಂತ ನಡೆದಿರುವುದು ಗೊತ್ತಾಗಿದ್ದರಿಂದ ಚಾಲಕ ಸುಮನ್ ಎಂಬಾತನ ಮೇಲೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನೇಣು ಬಿಗಿದುಕೊಂಡ ಪತಿ; ತುಂಬು ಗರ್ಭಿಣಿ ಅನಾಥೆ
ಆನೇಕಲ್: ಆ ಕುಟುಂಬಸ್ಥರು ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿತ್ತು. ಆದರೆ ಮನೆ ಮಗನ ದುಡುಕಿನ ನಿರ್ಧಾರಕ್ಕೆ ಕಣ್ಣು ಬಿಡದ ಮಗುವು ತಂದೆಯನ್ನು ಕಳೆದುಕೊಂಡರೆ, ಇತ್ತ ಪತ್ನಿ ಒಬ್ಬಂಟಿಯಾಗಿದ್ದಾಳೆ. ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿ ವ್ಯಕ್ತಿಯೊಬ್ಬ ನೇಣಿಗೆ (Self Harming) ಶರಣಾಗಿರುವ ಘಟನೆ ಆನೇಕಲ್ ಪಟ್ಟಣದ (Anekal News) ಭೋವಿ ಕಾಲೋನಿಯಲ್ಲಿ ನಡೆದಿದೆ. ಯೋಗೇಶ್ (29) ಆತ್ಮಹತ್ಯೆ ಮಾಡಿಕೊಂಡವನು.
ಯೋಗೇಶ್ ಕಳೆದೊಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದ. ಪತ್ನಿ 8 ತಿಂಗಳ ಗರ್ಭಿಣಿಯಾಗಿದ್ದಳು, ಹೀಗಾಗಿ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದರು. ಆದರೆ ಕಳೆದ ಮೂರು ವರ್ಷದ ಹಿಂದೆ ಯೋಗೇಶ್ ಸಹೋದರ ಶಿವಕುಮಾರ್ ಮೃತಪಟ್ಟಿದ್ದ. ಹೀಗಾಗಿ ಇಡೀ ಕುಟುಂಬದ ಜವಾಬ್ದಾರಿ ಯೋಗೇಶ್ ಮೇಲಿತ್ತು.
ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದ ಯೋಗೇಶ್‌ಗೆ ಮನೆ ಜವಾಬ್ದಾರಿ ಹೊರಲು ಕಷ್ಟವಾಗಿತ್ತು. ಇತ್ತೀಚೆಗೆ ಹಣಕಾಸಿನ ಸಮಸ್ಯೆಯಿಂದಾಗಿ ಮನನೊಂದಿದ್ದ ಎನ್ನಲಾಗಿದೆ. ಹೀಗಾಗಿ ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ರೂಮಿನ ಫ್ಯಾನ್‌ಗೆ ನೇಣು ಬೀಗಿದುಕೊಂಡು ಮೃತಪಟ್ಟಿದ್ದಾನೆ.
ಇದನ್ನೂ ಓದಿ: Road Accident : ಯಮನಂತೆ ಬಂದ ಕಾರಿಗೆ ಬಾಲಕ ಸಾವು; ತಂದೆ- ಮಗಳು ಗಂಭೀರ
ರೂಮಿನ ಬಾಗಿಲು ಹಾಕಿಯೇ ಇದ್ದರಿಂದ ಅನುಮಾನಗೊಂಡ ಕುಟುಂಬಸ್ಥರು ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ