ಬೆಂಗಳೂರು: ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ (Umesh Katti) ಕರ್ನಾಟಕ ಕಂಡಿರುವ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರು. ತಂದೆಯ ನಿಧನ ಬಳಿಕ ತಮ್ಮ ೨೫ನೇ ವರ್ಷದಲ್ಲಿ ಶಾಸಕರಾಗಿ ಆಯ್ಕೆಯಾದ ಅವರು ಎಂಟು ಬಾರಿ ವಿಧಾನಸಭೆ ಪ್ರವೇಶಿಸುವ ಮೂಲಕ ಸಾಧನೆ ಮಾಡಿದವರು.
ಹಿರಿತನ ಹಾಗೂ ೩೭ ವರ್ಷಗಳ ರಾಜಕೀಯ ಅನುಭವ ಹೊಂದಿರುವ ಅವರು ೧೯೮೫ರಲ್ಲಿ ಸಂಯುಕ್ತ ಜನತಾ ದಳದ ಮೂಲಕ ರಾಜಕೀಯಕ್ಕೆ ಪ್ರವೇಶ ಪಡೆದುಕೊಂಡಿದ್ದರು. ಬಳಿಕ ಜೆಡಿಎಸ್, ಕಾಂಗ್ರೆಸ್ ಸೇರ್ಪಡೆಗೊಂಡು ಅಂತಿಮವಾಗಿ ಬಿಜೆಪಿ ಮೂಲಕ ರಾಜಕೀಯ ನೆಲೆಯನ್ನು ಗಟ್ಟಿಗೊಳಿಸಿದ್ದರು. ಒಟ್ಟಾರೆಯಾಗಿ ಅವರು ರಾಜ್ಯ ಕಂಡ ಅತ್ಯಂತ ಮುತ್ಸದ್ದಿ ನಾಯಕ ಎನಿಸಿಕೊಂಡಿದ್ದರು. ಅವರ ವೈಯಕ್ತಿಕ ಹಾಗೂ ರಾಜಕೀಯ ಸಾಧನೆಗಳ ವಿವರ ಇಲ್ಲಿದೆ.
ವೈಯಕ್ತಿಕ ವಿವರ
ಹೆಸರು: ಉಮೇಶ ವಿಶ್ವನಾಥ ಕತ್ತಿ
ಜನನ: 14-3-1960
ವಿದ್ಯಾಭ್ಯಾಸ: ಪಿ.ಯು.ಸಿ
ಪತ್ನಿ: ಶೀಲಾ
ಪುತ್ರ: ಶ್ರೀ ನಿಖಿಲ್ ಉಮೇಶ ಕತ್ತಿ, ಜಿ.ಪಂ ಸದಸ್ಯರು ಮತ್ತು ಅಧ್ಯಕ್ಷರು, ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ, ಸಂಕೇಶ್ವರ.
ಪುತ್ರಿ: ಸ್ನೇಹಾ
ಕಿರಿಯ ಸೋದರ: ಶ್ರೀ ರಮೇಶ್ ವಿ. ಕತ್ತಿ, ಅಧ್ಯಕ್ಷರು ಬೆಳಗಾವಿ ಡಿಸಿಸಿ ಬ್ಯಾಂಕ್ ಹಾಗೂ ಮಾಜಿ ಸಂಸದರು.
ಇಬ್ಬರು ಸೋದರಿಯರು: ಸೌ. ಪೂರ್ಣಿಮಾ ಪಾಂಗಿ, ಸೌ. ಹರ್ಷ ಕಣವಿ
ರಾಜಕೀಯ ವಿವರ
ರಾಜಕೀಯ ಪ್ರವೇಶ: 1985ರಲ್ಲಿ ತಂದೆ ಶಾಸಕರಾಗಿದ್ದ ವಿಶ್ವನಾಥ ಕತ್ತಿ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಪ್ರವೇಶ. 25ರ ಹರೆಯದಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆ.
8 ಬಾರಿ ಶಾಸಕರಾಗಿ ಆಯ್ಕೆ: ರಾಜ್ಯದ ವಿಧಾನಸಭೆಯಲ್ಲಿ ಅತಿ ಹೆಚ್ಚು ಬಾರಿ ಆಯ್ಕೆಯಾದ ಬೆರಳೆಣಿಕೆ ಶಾಸಕರಲ್ಲಿ ಇವರು ಕೂಡ ಒಬ್ಬರು.
ಶಾಸಕರಾಗಿ ಆಯ್ಕೆಯಾದ ಅವಧಿ: 1985ರಿಂದ ಇಲ್ಲಿಯವರೆಗೆ 8 ಬಾರಿ ಶಾಸಕರಾಗಿ ಆಯ್ಕೆ. 2004ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಸ್ಪರ್ಧಿಸಿದಾಗ ಒಂದು ಬಾರಿ ಸೋಲು.
1985, 1989, 1994, 1999, ಮೇ-2008, ಉಪಚುನಾವಣೆ ಡಿಸೆಂಬರ್-2008, 2013, 2018 (ಒಟ್ಟು ಎಂಟು ಬಾರಿ)
1985, 1989, 1994, 1999, 2008ರಲ್ಲಿ ಸಂಯುಕ್ತ ಜನತಾ ದಳ, ಜೆಡಿಎಸ್ ಪಕ್ಷದಿಂದ ಆಯ್ಕೆ.
2008, 2013 ಮತ್ತು 2018 ಬಿಜೆಪಿಯಿಂದ ಶಾಸಕರಾಗಿ ಆಯ್ಕೆ.
(2008ರಲ್ಲಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಅವರು ನಂತರ ಬಿ.ಎಸ್ ಯಡಿಯೂರಪ್ಪ ಕರೆ ಮೇರೆಗೆ ಬಿಜೆಪಿ ಸೇರ್ಪಡೆಯಾಗಿ ಮರು ಚುನಾವಣೆಯಲ್ಲಿ ಗೆಲುವು. ಅಲ್ಲಿಂದ ಇಲ್ಲಿಯವರೆಗೆ ಬಿಜೆಪಿ ಪಕ್ಷದ ಶಾಸಕರು.)
ಸಚಿವ ಸ್ಥಾನಗಳು
ಸಚಿವ ಸ್ಥಾನ: ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯ 1996ರಲ್ಲಿ ಮೊದಲ ಬಾರಿ ಸಕ್ಕರೆ ಖಾತೆ ಸಚಿವರು.
1998ರಲ್ಲಿ ಲೋಕೋಪಯೋಗಿ ಸಚಿವ ಸ್ಥಾನ.
2008ರಲ್ಲಿ ತೋಟಗಾರಿಕೆ ಮತ್ತು ಬಂದಿಖಾನೆ ಸಚಿವರು.
2010ರಲ್ಲಿ ಕೃಷಿ ಸಚಿವರಾಗಿ ಪ್ರಪ್ರಥಮ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಗರಿಮೆ.
೨೦೧೯ರಲ್ಲಿ ಅರಣ್ಯ, ಆಹಾರ ಮತ್ತು ನಾಗರಿಕ ಸಚಿವ ಸ್ಥಾನ.
ವಿಶ್ವ ಕನ್ನಡ ಸಮ್ಮೇಳನದ ಯಶಸ್ಸಿನ ರೂವಾರಿ: 2011ರಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಮಾರ್ಚ್ 11 ರಿಂದ 13ರವರೆಗೆ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿದ ಹಿರಿಮೆ ಉಮೇಶ್ ಕತ್ತಿ ಅವರದ್ದು.
ಉದ್ಯೋಗದಾತ: 1999ರಲ್ಲಿ ಸ್ವಗ್ರಾಮ ಬೆಲ್ಲದ ಬಾಗೇವಾಡಿಯಲ್ಲಿ ವಿಶ್ವರಾಜ ಶುಗರ್ಸ್ ಇಂಡಸ್ಟ್ರೀಸ್ ಸ್ಥಾಪಿಸಿ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ.
ಬರದ ನಾಡಿನ ಭಗೀರಥ: ತಾಲೂಕಿನ 27 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮೂಲಕ ಬರದ ನಾಡಿನ ಭಗೀರಥ ಎನಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಗುಣಮಟ್ಟದ ರಸ್ತೆ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ನೀರಾವರಿ, ಆರೋಗ್ಯ, ಸಹಕಾರಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದರು.
ಇದನ್ನೂ ಓದಿ | Umesh Katti | ಹೃದಯಾಘಾತದಿಂದ ಆಹಾರ ಸಚಿವ ಉಮೇಶ್ ಕತ್ತಿ ವಿಧಿವಶ, ಸಿಎಂ ಬೊಮ್ಮಾಯಿ ಸಂತಾಪ