ಬೆಂಗಳೂರು: ಪ್ರೇಮಿಗಳಿಬ್ಬರ ಖಾಸಗಿ ವಿಡಿಯೊ ಸೆರೆ ಹಿಡಿದು ಬೆದರಿಸಿದ್ದ ಇಬ್ಬರು ಆರೋಪಿಗಳನ್ನು ಬಾಗಲೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಉಷಾ ಮತ್ತು ಸುರೇಶ್ ಬಂಧಿತ ಆರೋಪಿಗಳಾಗಿದ್ದಾರೆ.
ಯಲಹಂಕ ಬಳಿಯ ಖಾಸಗಿ ಹೋಟೆಲ್ಗೆ ಪ್ರೇಮಿಗಳಿಬ್ಬರು ಹೋಗಿದ್ದರು. ಈ ವೇಳೆ ಒಂದೇ ರೂಮಿನಲ್ಲಿ ಎರಡು ಬಾರಿ ಭೇಟಿಯಾಗಿದ್ದರು. ಇದನ್ನು ಗಮನಿಸಿದ್ದ ಆರೋಪಿಗಳಾದ ಉಷಾ ಮತ್ತು ಸುರೇಶ್ ಯಾರಿಗೂ ಗೊತ್ತಾಗದ ರೀತಿಯಲ್ಲಿ ರೂಮಿನಲ್ಲಿ ಕ್ಯಾಮೆರಾ ಇಟ್ಟು ಚಿತ್ರೀಕರಿಸಿದ್ದರು. ಬಳಿಕ ಸಂತ್ರಸ್ತ ಮಹಿಳೆಗೆ ವಾಟ್ಸ್‌ಆ್ಯಪ್ ಮೂಲಕ ವಿಡಿಯೊವನ್ನು ಕಳಿಸಿ ಇಪ್ಪತ್ತೈದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು, ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು.
ಇಷ್ಟೇ ಅಲ್ಲದೆ ಸಂತ್ರಸ್ತ ಮಹಿಳೆ ಹಣ ನೀಡುವುದು ತಡವಾಗಿದ್ದಕ್ಕಾಗಿ ಹೊಸ ನಾಟಕವಾಡಿದ್ದ ಆರೋಪಿ ಉಷಾ ತನ್ನ ಮೊಬೈಲ್ಗೋ ಯಾರೋ ನಿಮ್ಮ ವಿಡಿಯೊ ಕಳಿಸಿದ್ದಾರೆ ಎಂದಿದ್ದಳು. ಜತೆಗೆ ವಿಡಿಯೋವನ್ನು ಸಿಡಿ ಮಾಡಿ ಮನೆಯವರಿಗೆ ಕಳಿಸುವುದಾಗಿ ಹೆದರಿಸಿದ್ದಳು. ಕೊನೆಗೆ ಸಂತ್ರಸ್ತ ಮಹಿಳೆ ಬಾಗಲೂರು ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನು ಓದಿ| ಬೆಂಗಳೂರಿನಲ್ಲಿ ಜ್ಯೋತಿಷಿಗೆ ಬೆದರಿಸಿ ಚಿನ್ನಾಭರಣ ದೋಚಿದ್ದವರು ಅರೆಸ್ಟ್!