Site icon Vistara News

Bangalore Mysore Expressway: ದಶಪಥ ‌ಹೆದ್ದಾರಿ ಉಳಿಸಿ ಪ್ಲೀಸ್; ಶುರುವಾಗಿದೆ ಕಬ್ಬಿಣ ಕಳ್ಳರ ಕಾಟ!

Bangalore mysore expressway iron items

ಮೈಸೂರು: ಬಹು ಮಹತ್ವಾಕಾಂಕ್ಷೆಯಿಂದ ನಿರ್ಮಾಣವಾಗಿರುವ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ (Bangalore Mysore Expressway) ಈಗ ಕಬ್ಬಿಣ ಕಳ್ಳರ ಕಾಟ ಶುರುವಾಗಿದೆ. ರಸ್ತೆ ಪಕ್ಕದಲ್ಲಿಡಲಾಗಿರುವ ವಿದ್ಯುತ್ ಕಂಬ, ಗ್ರಿಲ್, ತಡೆಗೋಡೆ ರಾಡ್‌ಗಳನ್ನೂ ಬಿಡದ ಖದೀಮರು, ಎಲ್ಲವನ್ನೂ ಹೊತ್ತೊಯ್ಯುತ್ತಿದ್ದಾರೆ. ಇದು ಹೆದ್ದಾರಿ ಪ್ರಾಧಿಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮೈಸೂರು- ಬೆಂಗಳೂರು ಹೆದ್ದಾರಿ ದಕ್ಷಿಣ ಭಾರತದ ಮೊದಲ ನಿರ್ಬಂಧಿತ ಹೆದ್ದಾರಿಯಾಗಿದೆ. ಪ್ರವೇಶ ಮತ್ತು ನಿರ್ಗಮನ ನಿರ್ಬಂಧಿಸುವ ಸಲುವಾಗಿ ಹೆದ್ದಾರಿಯ ಎರಡು ಕಡೆ ಗ್ರಿಲ್‌ಗಳ ಮೂಲಕ ತಡೆಗೋಡೆಯನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ: Congress Guarantee: ಉಚಿತ ವಿದ್ಯುತ್‌ ಪಡೆದ ಮೊದಲ ಗ್ರಾಮ ಇದು: ಈ ಊರಲ್ಲಿ 20 ವರ್ಷದಿಂದ ಯಾರೂ ಕರೆಂಟ್‌ ಬಿಲ್‌ ಕಟ್ಟಿಲ್ಲ !

ಆದರೆ, ಈಗ ಇದರ ಮೇಲೆ ಕಣ್ಣಿಟ್ಟಿರುವ ಕಳ್ಳರು ಪ್ರತಿ ದಿನ ಒಂದಿಲ್ಲೊಂದು ವಸ್ತುಗಳನ್ನು ಕಳ್ಳತನ ಮಾಡಿ ಹೋಗುತ್ತಿದ್ದಾರೆ. ಇಲ್ಲಿಂದ ಕದ್ದಿರುವ ಕಬ್ಬಿಣದ ಗ್ರಿಲ್, ರಾಡು, ವಿದ್ಯುತ್ ಕಂಬದ ಕಬ್ಬಿಣಗಳನ್ನು ಗುಜರಿಗೆ ಹಾಕುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಗತ್ಯ ವಸ್ತುಗಳನ್ನು, ಸಾಮಗ್ರಿಗಳನ್ನು ಬಳಸಿ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದೆ.

ಇನ್ನು ಆಗಮನ, ನಿರ್ಗಮನದಂತಹ ಪ್ರದೇಶಗಳಿಗೆ ತಡೆಗೋಡೆಗಳ ಅವಶ್ಯಕತೆ ಇರುತ್ತದೆ. ಅಲ್ಲದೆ, ದಾರಿಯುದ್ದಕ್ಕೂ ಲೈಟ್‌ ಕಂಬಗಳು ಬೇಕಿವೆ. ಕೆಲವು ಕಡೆ ಲೈಟ್‌ ಕಂಬಗಳನ್ನು ಹಾಕಲಾಗಿದ್ದರೂ ಮತ್ತೆ ಕೆಲವು ಕಡೆ ಕೆಲಸಗಳು ನಡೆಯುತ್ತಿವೆ ಎನ್ನಲಾಗಿದೆ. ಈ ಮಧ್ಯೆ ಕಾಮಗಾರಿಗಾಗಿ ಇಟ್ಟಿರುವ ಕೆಲವು ವಸ್ತುಗಳ ಕಳ್ಳತನವೂ ಆಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ನಾಗರಿಕರೇ ನೀವೇ ನೋಡಿ ಮಾಹಿತಿ ನೀಡಿ

ಇದು ಸಾರ್ವಜನಿಕರ ಆಸ್ತಿಯಾಗಿದೆ. ಜನರ ಹಣದಲ್ಲಿ ಹೆದ್ದಾರಿ ನಿರ್ಮಾಣವಾಗಿದೆ. ಹೆದ್ದಾರಿ ಉಳಿಸಿಕೊಳ್ಳೋದು ಜನರ ಜವಾಬ್ದಾರಿ ಆಗಿದೆ. ಹೀಗಾಗಿ ಮೈಸೂರು, ಮಂಡ್ಯ, ರಾಮನಗರ ಜನತೆ ಇಂಥ ಕಳ್ಳರ ಮೇಲೆ ಒಂದು ಕಣ್ಣು ಇಡಬೇಕು. ಅಂಥವರು ಕಂಡು ಬಂದರೆ ತಕ್ಷಣವೇ ಮಾಹಿತಿ ನೀಡಿ ಸಾರ್ವಜನಿಕ ಆಸ್ತಿಯನ್ನು ರಕ್ಷಣೆ ಮಾಡಬೇಕು ಎಂದು ಸಂಸದ ಪ್ರತಾಪ್‌ ಸಿಂಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ನಿಮ್ಮ ಮನೆಯಲ್ಲಿರುವ ಕಬ್ಬಿಣವನ್ನು ಬೇಕಿದ್ದರೆ ಗುಜರಿಗೆ ಹಾಕಿಕೊಳ್ಳಿ. ಅದನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ. ಅದನ್ನು ಬಿಟ್ಟು ಹೆದ್ದಾರಿಯಲ್ಲಿರುವ ಕಬ್ಬಿಣವನ್ನು, ಇನ್ನಿತರ ವಸ್ತುಗಳನ್ನು ಕದಿಯಬೇಡಿ ಎಂದು ಖದೀಮರಿಗೆ ಖಡಕ್‌ ಎಚ್ಚರಿಕೆಯನ್ನೂ ಸಂಸದ ಪ್ರತಾಪ್‌ ಸಿಂಹ ರವಾನಿಸಿದ್ದಾರೆ.

ಇದನ್ನೂ ಓದಿ: DK Shivakumar: ಡಿ.ಕೆ. ಶಿವಕುಮಾರ್‌ಗೆ ಬಿಗ್‌ ರಿಲೀಫ್‌; ಆದಾಯ ಮೀರಿ ಆಸ್ತಿ ಪ್ರಕರಣದ ತಡೆಯಾಜ್ಞೆ ವಿಸ್ತರಣೆ

ಮಳೆ ನೀರು ನಿಲ್ಲುವ ಸಮಸ್ಯೆ ಬಗೆಹರಿಸಲಾಗುವುದು

ಮಳೆ ಬಂದಾಗ ಹೆದ್ದಾರಿಯಲ್ಲಿ ನೀರು ನಿಲ್ಲುವ ವಿಚಾರದ ಬಗ್ಗೆಯೂ ಸಂಸದ ಪ್ರತಾಪ್‌ ಸಿಂಹ ಪ್ರತಿಕ್ರಿಯೆ ನೀಡಿದ್ದು, ಸಮಸ್ಯೆ ಬಂದಾಗ ಮಾತ್ರ ಹುಡುಕಿ ಪರಿಹಾರ ಮಾಡಬಹುದು. ಎಲ್ಲ ಸಮಸ್ಯೆಗಳನ್ನು ಊಹೆ ಮಾಡಲು ಸಾಧ್ಯವಿಲ್ಲ. ಮಳೆ ನೀರು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ. ನೀರು ಹರಿದು ಹೋಗುವ ಹೋಲ್‌ಗಳಲ್ಲಿ ನೀರು ತುಂಬಿಕೊಂಡಿದ್ದರೆ ಅದನ್ನು ತೆರವು ಮಾಡಬೇಕು. ಎಲ್ಲೆಲ್ಲಿ ಸಮಸ್ಯೆ ಆಗಿದೆಯೋ ಅದನ್ನು ಪತ್ತೆ ಹಚ್ಚಿ ಸರಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

Exit mobile version