Site icon Vistara News

Karnataka Election 2023: ಸಿಂಧೂರ ಇಡುವವರು ಕಾಂಗ್ರೆಸ್‌ಗೆ ಮತ ನೀಡಬಾರದು: ಸಿ.ಟಿ. ರವಿ

many congress leaders fearing loss after siddaramaiah decision regarding kolar

ಚಿಕ್ಕೋಡಿ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಘೋಷಣೆಗೆ ಮೊದಲೇ ಕಾವು ಪಡೆದುಕೊಂಡಿದೆ. ರಾಜಕೀಯ ನಾಯಕರ ವಾಗ್ದಾಳಿಗಳು ಹೆಚ್ಚುತ್ತಲಿವೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi) ಹಿಂದುತ್ವದ ಪ್ರಸ್ತಾಪವನ್ನು ಮಾಡಿದ್ದಾರೆ. “ಸಿಂಧೂರ ಇಡುವವರು ಕಾಂಗ್ರೆಸ್‌ಗೆ ಮತ ನೀಡಬಾರದು. ಒಬ್ಬ ಮಾಜಿ ಮುಖ್ಯಮಂತ್ರಿಗೆ ಸಿಂಧೂರವನ್ನು ಕಂಡರೇ ಆಗುವುದಿಲ್ಲ. ಅವರಿಗೆ ಸಿಂಧೂರ ಹಾಗೂ ಕೇಸರಿ ಪೇಟ ಅಂದ್ರೆ ಅಲರ್ಜಿ” ಎಂದು ಸಿ.ಟಿ. ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಿಪ್ಪಾಣಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿಂಧೂರ ಇಡುವ ನೀವು ಯಾವುದೇ ಕಾರಣಕ್ಕೂ ಸಹ ಕಾಂಗ್ರೆಸ್‌ ಪಕ್ಷಕ್ಕೆ ನಿಮ್ಮ ಮತವನ್ನು ನೀಡಬೇಡಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: Women’s Day 2023: ಎರಡು-ಮೂರು ದಿನ ಮುಟ್ಟಿನ ರಜೆ ಕೊಡುವುದು ಅಗತ್ಯ

ಹರಿದು ಬಿದ್ದ ಬೃಹತ್‌ ಮಾಲೆ

ವಿಜಯ ಸಂಕಲ್ಪ ಯಾತ್ರೆ ವೇಳೆ ಬಿಜೆಪಿ ನಾಯಕರಿಗೆ ಹಾಕಲು ಸಿದ್ಧಪಡಿಸಿದ್ದ ಬೃಹತ್‌ ಹೂವಿನ ಮಾಲೆ ಹರಿದು ಬಿದ್ದಿದೆ. ಕ್ರೇನ್ ಮೂಲಕ ಹಾಕಲು ತರುತ್ತಿದ್ದಾಗ ಹೀಗಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಗೋವಿಂದ ಕಾರಜೋಳ ಅವರಿಗೆ ಹಾಕಲು ಬೃಹತ್ ಮಾಲೆಯನ್ನು ತರಲಾಗಿತ್ತು. ವಿವಿಧ ಹೂವುಗಳಿಂದ ಬೃಹದಾಕಾರದ ಮಾಲೆಯನ್ನು ಸಿದ್ಧಪಡಿಸಲಾಗಿತ್ತು.

Exit mobile version